ಬ್ರೇಕಿಂಗ್ ನ್ಯೂಸ್
04-09-21 04:32 pm Reena TK, Boldsky ಡಾಕ್ಟರ್ಸ್ ನೋಟ್
ಕೋವಿಡ್ 19 ಲಸಿಕೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುವುದು, ಇವುಗಳು ಕೊರೊನಾ ವೈರಸ್ ವಿರುದ್ಧ ಹೋರಾಡು ಸಾಮರ್ಥ್ಯವನ್ನು ಹೊಂದಿದೆ ಎಂಬುವುದು ಸಂಶೋಧನೆಯಿಂದ ಸಾಬೀತಾಗಿದೆ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್ 19 ಲಸಿಕೆ ತೆಗೆದುಕೊಳ್ಳಬೇಕು, ಅದರಲ್ಲೂ ಒಂದು ಡೋಸ್ ಸಾಲದು , ಎರಡು ಡೋಸ್ ಲಸಿಕೆ ಬೇಕೇ ಬೇಕು ಎಂದು ಹೇಳಲಾಗುತ್ತದೆ.
ನೀವು ಲಸಿಕೆ ಪಡೆದಾಗ ಏನಾಗುತ್ತೆ?
ಲಸಿಕೆ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಲಸಿಕೆಯನ್ನು SARS-CoV-2ನಂಥ ದುರ್ಬಲ ಅಥವಾ ಸತ್ತ ವೈರಸ್ಗಳನ್ನು ಬಳಸಿ ತಯಾರಿಸಲಾಗುವುದು. ಲಸಿಕೆ ಚುಚ್ಚಿದಾಗ ಈ ದುರ್ಬಲ ವೈರಸ್ ಅಂಶಗಳು ನರಗಳ ಜೀವ ಕಣಗಳಲ್ಲಿ ಸೇರುತ್ತವೆ. ಹೀಗಾಗಿ ದೇಹಕ್ಕೆ ಹೊರಗಿನಿಂದ ಕೊರೊನಾ ವೈರಸ್ ದಾಳಿ ಮಾಡಿದಾಗ ಕೂಡಲೇ ಗುರುತಿಸಿ ಆ ವೈರಸ್ ಅನ್ನು ಸೋಲಿಸುವ ಕೆಲಸ ಮಾಡುತ್ತದೆ.
ಲಸಿಕೆ ಪಡೆದ ಬಳಿಕ ಕೆಲವರಲ್ಲಿ ಅಡ್ಡ ಪರಿಣಾಮಗಳು ಕಂಡು ಬರುವುದೇಕೆ?
ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಈ ಲಸಿಕೆಗೆ ಸ್ಪಂದಿಸುತ್ತಿದೆ ಎಂಬುವುದು ಈ ಅಡ್ಡಪರಿಣಾಮಗಳ ಲಕ್ಷಣವಾಗಿದೆ. ಕೆಲವರಿಗೆ ಲಸಿಕೆ ಪಡೆದ ಭಾಗದಲ್ಲಿ ಊತ, ನೋವು, ಜ್ವರ, ಸುಸ್ತು, ತಲೆ ನೋವು, ಚಳಿಯಾಗುವುದು, ವಾಂತಿ, ಸ್ನಾಯುಗಳಲ್ಲಿ ಮುಂತಾದ ಅಡ್ಡಪರಿಣಾಮಗಳು ಕಂಡು ಬರುವುದು.
ಲಸಿಕೆಯಲ್ಲಿರುವ ರೋಗಕಾರಕ ಅಂಶವು ನಮ್ಮ ದೇಹವನ್ನು ಪ್ರವೇಶಿಸಿದಾಗ ಬಿಳಿ ರಕ್ತ ಕಣಗಳು
ವೈರಸ್ ಹಾಗೂ ಪ್ರತಿಕಾಯಗಳನ್ನು ವಿಭಿಜಿಸಿ ದೇಹದಲ್ಲಿ ಅವುಗಳನ್ನು ಹರಡುವುದು. ಆದ್ದರಿಂದ ಲಸಿಕೆ ಪಡೆದ ಭಾಗದಲ್ಲಿ ಬಿಳಿ ರಕ್ತಕಣಗಳು ಹಾಗೂ ರೋಗಕಾರಕಗಳ ನಡುವೆ ಒಂದು ಯುದ್ಧವೇ ನಡೆಯುತ್ತದೆ, ಆದ್ದರಿಂದ ಲಸಿಕೆ ಚುಚ್ಚಿದ ಭಾಗದಲ್ಲಿ ನೋವು ಕಂಡು ಬರುವುದು. ಅಲ್ಲದೆ ಲಸಿಕೆ ಬಳಿಕ ಸೈಟೊಕಿನ್ಸ್ ಮತ್ತು ಕೆಮೊಕೈನ್ಗಳು ಸುಸ್ತಾಗುವುದು, ಇದರಿಂದಾಗಿ ಲಸಿಕೆ ಪಡೆದ ಜಾಗದಲ್ಲಿ ಉರಿ, ನೋವು ಮುಂತಾದ ಸಮಸ್ಯೆ ಕಂಡು ಬರುವುದು.
ಸೆಕೆಂಡ್ ಡೋಸ್ ಲಸಿಕೆ ಮಿಸ್ ಮಾಡ ಬಾರದು ಏಕೆ?
ಭಾರತದಲ್ಲಿ ಲಭ್ಯವಿರುವ ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ಎರಡು ಡೋಸ್ ಪಡೆಯಬೇಕು. ಮೊದಲನೇ ಡೋಸ್ ಪಡೆದಾಗ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತೆ. ಆದರೆ ಈ ಪ್ರತಿಕಾಯಗಳು ತುಂಬಾ ದಿನ ಇರಲ್ಲ, ಆದ್ದರಿಂದ ಎರಡನೇ ಡೋಸ್ ಪಡೆದುಕೊಳ್ಳಬೇಕು. ಎರಡನೇ ಡೋಸ್ ಪಡೆದುಕೊಂಡರೆ ನಮ್ಮ ದೇಹವು ಕೋವಿಡ್ 19 ವಿರುದ್ಧ ತುಂಬಾ ಶಕ್ತವಾಗಿ ಹೋರಾಡುತ್ತೆ. ಕೆಲವು ತಜ್ಞರು ಈ ಎರಡು ಡೋಸ್ ಅಲ್ಲದೆ ಬೂಸ್ಟರ್ನ ಅಗ್ಯತವಿದೆ ಎಂದು ಹೇಳುತ್ತಿದ್ದಾರೆ. ಭಾರತದಲ್ಲಿ ಇನ್ನೂ ಬೂಸ್ಟರ್ ನೀಡುತ್ತಿಲ್ಲ. ಕೋವಿಡ್ 19ನಿಂದ ಪಾರಾಗಲು ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಹಾಕಿಸಿ.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm