ಬ್ರೇಕಿಂಗ್ ನ್ಯೂಸ್
03-09-21 11:50 am Shreeraksha, Boldsky ಡಾಕ್ಟರ್ಸ್ ನೋಟ್
ಆರೋಗ್ಯಕರ ಮತ್ತು ಸಂತೋಷದ ಜೀವನ ಪ್ರತಿಯೊಬ್ಬರ ಅಂತಿಮ ಗುರಿ. ಆದರೆ ಅದನ್ನು ಪಡೆಯುವುದು ಹೇಗೆ? ಇಂದಿನ ಅನಾರೋಗ್ಯಕರ ಜೀವನಶೈಲಿಯು ಅಕಾಲಿಕ ಮರಣಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಇದನ್ನು ತಪ್ಪಿಸಲು, ದೀರ್ಘಾಯುಷ್ಯ ಪಡೆಯಲು ನಾವು ಆರೋಗ್ಯಕರ ಆಹಾರ ಪದ್ಧತಿ ಪಾಲಿಸುವುದು ತುಂಬಾ ಮುಖ್ಯ.
ಇಟಲಿ, ಒಕಿನಾವಾ, ಜಪಾನ್, ಲೋಮಾ ಮೊದಲಾದ ದೇಶಗಳಲ್ಲಿ ಜನರು ಹೆಚ್ಚು ಕಾಲ ಬದುಕುತ್ತಿದ್ದಾರಂತೆ. ಅವರ ಈ ದೀರ್ಘಾಯಸ್ಸಿನ ರಹಸ್ಯವೆಂದರೆ, ದಿನನಿತ್ಯ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿ. ಹಾಗಾದರೆ ಅವರು ಸೇವಿಸುವ ಆಹಾರದಲ್ಲಿ ಏನೇನಿದೆ? ಹೆಚ್ಚು ಕಾಲ ಬದುಕಲು ಎಂತಹ ಆಹಾರ ಸೇವಿಸಬೇಕು ಎಂಬುದನ್ನು ಇಲ್ಲಿ ನೋಡೋಣ.
ಬೀನ್ಸ್ ತಿನ್ನಿ:
ಪ್ರತಿದಿನ ಕನಿಷ್ಠ ಅರ್ಧ ಕಪ್ ಬೀನ್ಸ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೈನಂದಿನ ಆಹಾರದಲ್ಲಿ ವಿವಿಧ ರೀತಿಯ ಬೀನ್ಸ್ ಸೇರಿಸಿ. ಇವುಗಳು ಸಸ್ಯ ಆಧಾರಿತ ಪ್ರೋಟೀನ್ನ ಉತ್ತಮ ಮೂಲವಾಗಿದ್ದು, ಫೈಬರ್ನಿಂದ ತುಂಬಿರುತ್ತವೆ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಜೊತೆಗೆ, ಕರುಳಿನ ಆರೋಗ್ಯವನ್ನು ಸುಧಾರಿಸಿ, ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುವುದು.
ಕ್ರೂಸಿಫೆರಸ್ ತರಕಾರಿಗಳಿರಲಿ:
ಹೂಕೋಸು, ಎಲೆಕೋಸು, ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಇವುಗಳು ನೈಸರ್ಗಿಕ ಸಂಯುಕ್ತಗಳನ್ನು ಹೊಂದಿದ್ದು ಹೃದಯಕ್ಕೆ ಒಳ್ಳೆಯದು ಮತ್ತು ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಡ್ರೈ ಫ್ರೂಟ್ಸ್ ಬಿಡಬೇಡಿ:
ಪ್ರತಿದಿನ ಸುಮಾರು 60 ಗ್ರಾಂ ಬೀಜಗಳನ್ನು ತಿನ್ನಿರಿ. ಇವುಗಳಲ್ಲಿ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಮುಖ್ಯವಾಗಿರಲಿ. ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಪಿಸ್ತಾ, ವಾಲ್್ನಟ್ಸ್ ಮತ್ತು ಬಾದಾಮಿಯನ್ನು ಸೇರಿಸಬಹುದು ಜೊತೆಗೆ ಕಡಲೆಕಾಯಿಯನ್ನು ಸಹ ಸೇರಿಸಬಹುದು.
ಹೆಚ್ಚು ನೀರು ಕುಡಿಯಿರಿ:
ಮೇಲಿನ ದೇಶಗಳ್ಲಿ ವಾಸಿಸುವ ಜನರು ಕಾಫಿ ಮತ್ತು ಚಹಾವನ್ನು ಕುಡಿಯುತ್ತಾರೆ, ಅದರ ಜೊತೆಗೆ ಅದಕ್ಕಿಂತಲೂ ಹೆಚ್ಚು ನೀರು ಕುಡಿಯುತ್ತಾರೆ. ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರು ಸಿಕ್ಕಾಗ ಯಾವುದೇ ರೋಗ ಅಥವಾ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಏಕೆಂದರೆ ಎಲ್ಲಾ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುವುದೇ ನೀರಿನ ಕೊರತೆಯಿಂದ.
ಕಡಿಮೆ ಸಕ್ಕರೆ ಸೇವಿಸಿ:
ನಿಮ್ಮ ಆಹಾರದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ. ಇದು ನಿಮ್ಮ ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ದಿನವಿಡೀ ಸಕ್ಕರೆ ಇರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವ ಬದಲಿಗೆ ಅದನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುವುದು ಉತ್ತಮ.
ಮಾಂಸ ಸೇವವೆ ಮಿತಿಯಲ್ಲಿರಲಿ:
ಹೆಚ್ಚು ಸಸ್ಯ ಆಧಾರಿತ ಆಹಾರ ಮತ್ತು ಬೀನ್ಸ್ ತಿನ್ನುವುದು ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನಕ್ಕೆ ಪ್ರಮುಖವಾದುದು. ನೀವು ಮಾಂಸವನ್ನು ಸೈಡ್ ಡಿಶ್ ಆಗಿ ಸೇರಿಸಬಹುದು ಆದರೆ ಹೆಚ್ಚಾಗಿ ಸೇವಿಸಬಾರದು. ಹಸಿರು ತರಕಾರಿಗಳು, ಸೊಪ್ಪು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ.
ನಿಮ್ಮ ಕುಟುಂಬದೊಂದಿಗೆ ತಿನ್ನಿರಿ:
ಪ್ರತಿದಿನ, ಊಟ ಮಾಡುವ ಮೊದಲು ಕೃತಜ್ಞತೆಯನ್ನು ತೋರಿಸಿ. ಅಷ್ಟೇ ಅಲ್ಲ, ಪ್ರೀತಿಪಾತ್ರರ ಜೊತೆ ಊಟವನ್ನು ಮಾಡುವುದರಿಂದ, ನಿಮಗೆ ಸಂತೋಷವಾಗುವುದು. ಆಹಾರವನ್ನು ಸೇವಿಸುವಾಗ ನಿಮಗೆ ಸಂತೋಷವಾಗುತ್ತದೆ, ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಹಿರಿಯರಿಂದ ಸಲಹೆಗಳನ್ನು ತೆಗೆದುಕೊಳ್ಳಿ:
ಯಾವುದೇ ವಿಷಯದ ಬಗ್ಗೆ ಉತ್ತಮ ಸಲಹೆಯನ್ನು ಅದನ್ನು ತಿಳಿದಿರುವ ಮತ್ತು ಅನುಭವಿಸಿದ ವ್ಯಕ್ತಿ ಮಾತ್ರ ನೀಡಬಹುದು. ಹೀಗಾಗಿ, ನಿಮ್ಮ ಅಜ್ಜಿ-ಅಜ್ಜರೊಂದಿಗೆ ಕುಳಿತು ಅವರಿಂದ ಕಲಿಯುವುದು ಉತ್ತಮ.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm