ಬ್ರೇಕಿಂಗ್ ನ್ಯೂಸ್
10-07-21 02:17 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಸಾಂಕ್ರಾಮಿಕ ಆತಂಕದ ನಡುವೆ ಈಗ ಝಿಕಾ ವೈರಸ್ ಭೀತಿ ಶುರುವಾಗಿದೆ. ಕೇರಳದಲ್ಲಿ 24 ವರ್ಷದ ಗರ್ಭಿಣಿಯಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ.
ಭಾರತದಲ್ಲಿ ಝಿಕಾ ವೈರಸ್ ಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ, 2018ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ನಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. 3 ರಾಜ್ಯಗಳಲ್ಲಿ 280ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿತ್ತು, ಎರಡು ಸಾವು ಕೂಡ ಸಂಭವಿಸಿತ್ತು.
ಝಿಕಾ ವೈರಸ್ ಎಂದರೇನು? ಹರಡುವುದು ಹೇಗೆ
ಝಿಕಾ ವೈರಸ್ ಸೊಳ್ಳೆಗಳಿಂದ ಹರಡುವ ರೋಗವಾಗಿದೆ. ಈಡಿಸ್, ಈಜಿಪ್ಟಿ, ಪ್ಲೇವಿ ವೈರಸ್ ಇರುವ ಸೊಳ್ಳೆ ಮನುಷ್ಯನನ್ನು ಕಚ್ಚಿದಾಗ ಈ ರೋಗ ಹರಡುವುದು. ಹಗಲಿನಲ್ಲಿ ಕಚ್ಚುವ ಸೊಳ್ಳೆ ಈ ರೋಗವನ್ನು ಹರಡುತ್ತದೆ. ಇನ್ನು ಝಿಕಾ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ರಕ್ತ ಪಡೆದರೆ, ಅ ಸುರಕ್ಷತೆ ಲೈಂಗಿಕ ಕ್ರಿಯೆ ನಡೆಸಿದಾಗ ಅಥವಾ ಸೋಂಕಿತರ ದೇಹದ ದ್ರವ ತಗುಲಿದರೂ ಹರಡುವುದು. ಗರ್ಭಿಣಿಗೆ ತಗುಲಿದರೆ ಜನಿಸುವ ಮಗುವಿಗೂ ಈ ವೈರಸ್ ತಗುಲುವುದು.
ಗರ್ಭಿಣಿಯರಿಗೆ ಝಿಕಾ ವೈರಸ್ ತಗುಲಿದರೆ ಉಂಟಾಗುವ ಅಪಾಯಗಳು
* ಅವಧಿಪೂರ್ವ ಜನನ
* ಭ್ರೂಣದ ಮೆದುಳಿಗೆ ಹಾನಿಯುಂಟಾಗುವುದು
* ಮೈಕ್ರೋಸೆಫಾಲಿ ಎಂಬ ಸಮಸ್ಯೆ ಉಂಟಾಗುವುದು
* ಜನಿಸಿದ ಮಗುವಿನಲ್ಲೂ ಝಿಕಾ ವೈರಸ್ ಲಕ್ಷಣಗಳು ಕಂಡು ಬರುವುದು
ಝಿಕಾ ವೈರಸ್ ಲಕ್ಷಣಗಳು
* ಜ್ವರ
* ಚರ್ಮದಲ್ಲಿ ಗುಳ್ಳೆಗಳು
* ಕಣ್ಣುಗಳು ಕೆಂಪಾಗುವುದು
* ಸ್ನಾಯು ಮತ್ತು ಕೀಲುನೋವು
* ತಲೆನೋವು
* ಸುಸ್ತು
* ಹೊಟ್ಟೆ ನೋವು
ಲಸಿಕೆ ಲಭ್ಯವಿದೆಯೇ?
ಝಿಕಾ ವೈರಸ್ಗೆ ಯಾವುದೇ ಲಸಿಕೆಯಿಲ್ಲ.
ಚಿಕಿತ್ಸೆ
ಝಿಕಾವೈರಸ್ ತಗುಲಿದಾಗ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ರೋಗ ತಗುಲಿದವರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು, ನಿರ್ಜಲೀಕರಣ ತಡೆಗಟ್ಟಲು ದ್ರವಾಹಾರ ಸೇವಿಸಬೇಕು. ವೈದ್ಯರು ಸೂಚಿಸಿದ ಚಿಕಿತ್ಸೆ ಪಡೆಯಿರಿ.
ಝಿಕಾ ವೈರಸ್ ತಡೆಗಟ್ಟುವುದು ಹೇಗೆ?
* ಝಿಕಾ ವೈರಸ್ ಪತ್ತೆಯಾದ ಕಡೆ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ, ಅಂದ್ರೆ ತುಂಬು ತೋಳಿನ ಬಟ್ಟೆ ಧರಿಸಿ.
* ಮನೆಯ ಸುತ್ತ ನೀರು ನಿಲ್ಲಲು ಬಿಡಬೇಡಿ, ಬಾಗಿಲು, ಕಿಟಲಿಗಳಿಗೆ ಸೊಳ್ಳೆ ಪರದೆ ಹಾಕಿ. ಬೆಡ್ಗೆ ಸೊಳ್ಳೆ ಪರದೆ ಬಳಸಿ.
* ಸೊಳ್ಳೆ ನಿವಾರಕ ಔಷಧಿಗಳನ್ನು ಮನೆಯ ಸುತ್ತ ಸಿಂಪಡಿಸಿ
* ಮಕ್ಕಳು ಹಾಗೂ ಗರ್ಭಿಣಿಯರು ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟಲು ತುಂಬು ತೋಳಿನ ಸಡಿಲವಾದ ಬಟ್ಟೆ ಧರಿಸಿ.
ಝಿಕಾ ವೈರಸ್ ಪ್ರದೇಶದಲ್ಲಿದ್ದರೆ ಗರ್ಭಧಾರಣೆ ಮುಂದೂಡಿ
ನೀವಿರುವ ಪ್ರದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದರೆ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಸ್ವಲ್ಪ ಸಮಯ ಮುಂದೂಡುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇನ್ನು ಗರ್ಭಿಣಿಗಳಿದ್ದರೆ ಸೊಳ್ಳೆ ಕಚ್ಚದಂತೆ ಎಲ್ಲಾ ಬಗೆಯ ಮುಂಜಾಗ್ರತೆ ವಹಿಸಿ
(Kannada Copy of Boldsky Kannada)
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm