ಬ್ರೇಕಿಂಗ್ ನ್ಯೂಸ್
06-07-21 03:55 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಪ್ರತಿಯೊಬ್ಬರ ಜೀವನಶೈಲಿಯನ್ನೇ ಬದಲಾಯಿಸಿದೆ. ಮೈದಾನದಲ್ಲಿ ಆಟ ಆಡುತ್ತಾ, ಕ್ಲಾಸಿನಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು ಈಗ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಮೊಬೈಲ್ ದಾಸರಾಗಿದ್ದಾರೆ. ಶಿಕ್ಷಣದ ಜೊತೆಜೊತೆಗೆ ತರಾವರಿ ಗೇಮ್ ಗಳು ಮಕ್ಕಳ ಬೌದ್ಧಿಕ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದು ನಮ್ಮ ಕಣ್ಣುಮುಂದಿರುವ ಸತ್ಯ.
ಆದರೆ ಇನ್ನೊಂದು ಕಡೆ, ಪೋಷಕರು ಊಟ ಮಾಡಿಸಲು, ಅಳುವುದನ್ನ ನಿಲ್ಲಿಸಲು ಸಹ ಮಕ್ಕಳ ಕೈಗೆ ಫೋನ್ ಕೊಟ್ಟು ಬಿಡುತ್ತಾರೆ. ಇದು ಸರಿಯಲ್ಲ. ಕಾರಣ ಏನೇ ಇರಲಿ, ಮಕ್ಕಳಿಗೆ ಫೋನ್ಗಳನ್ನು ಕೊಡುವುದು ಬುದ್ಧಿವಂತರ ನಿರ್ಧಾರವಲ್ಲ.
ಹಾಗಾದರೆ ನಿಮ್ಮ ಮಗುವಿಗೆ ನೀವು ಯಾವಾಗ ಫೋನ್ ಅಥವಾ ಮೊಬೈಲ್ ತೆಗೆದುಕೊಡಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ. ಮಕ್ಕಳಿಗೆ ಫೋನ್ ನೀಡುವ ಈ ವಿಷಯಗಳನ್ನು ಪರಿಗಣಿಸಿ:
ಮಕ್ಕಳು ಹಣವನ್ನು ಚೆನ್ನಾಗಿ ನಿರ್ವಹಿಸಿದರೆ:
ಮೊದಲನೆಯದು ನಿಮ್ಮ ಮಗು ಹಣವನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತದೆ. ಅವನು / ಅವಳು ದುಬಾರಿ ವಸ್ತುಗಳನ್ನು ಹೇಗೆ ನೋಡಿಕೊಳ್ಳುತ್ತಾರೆ? ಅದನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತಾರಾ? ಅಥವಾ ದುಬಾರಿ ವಸ್ತುಗಳ ಮೌಲ್ಯ ತಿಳಿಯದೇ ಅದನ್ನು ಕಳೆದುಕೊಳ್ಳುತ್ತಾರಾ ಎಲ್ಲವನ್ನು ನೋಡಿಕೊಂಡು ನಿರ್ಧಾರ ಮಾಡಿ. ಒಂದು ವೇಳೆ ದುಂದು ವೆಚ್ಚ ಮಾಡುವವರಾಗಿದ್ದರೆ ನಿಮ್ಮ ಮೊಬೈಲ್ ಕೊಡಿಸುವ ನಿರ್ಧಾರವನ್ನು ಮರುಪರಿಶೀಲಿಸುವುದು ಉತ್ತಮ. ಏಕೆಂದರೆ ಹಣದ ಬೆಲೆ ಗೊತ್ತಿದ್ದವರಿಗೆ ಅದನ್ನು ಗಳಿಸುವ ಕಷ್ಟದ ಅರಿವೂ ಇರುವುದು.
ನಿಮ್ಮ ಮಗುವಿಗೆ ಟೆಕ್ನಾಲಜಿ ತಿಳಿದಿದ್ದರೆ:
ನಿಮ್ಮ ಮಗು ಎಷ್ಟು ಟೆಕ್-ಬುದ್ಧಿವಂತನೆಂದು ಮೌಲ್ಯಮಾಪನ ಮಾಡಿ. ಅವರಿಗೆ ಮೊಬೈಲ್ ನ ಮೂಲಭೂತ ಕಾರ್ಯ ತಿಳಿದಿದೆಯೇ, ಅದನ್ನು ಆಪರೇಟ್ ಮಾಡುವ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದಾನೆಯೇ ಎಂಬುದನ್ನು ಚೆಕ್ ಮಾಡಿ. ಹಾಗಿದ್ದಾಗ ಮಾತ್ರ ಮೊಬೈಲ್ ಕೊಡಿಸಿ. ಅದರ ಬಳಕೆಯೇ ತಿಳಿಯದ ಮಗುವಿಗೆ ಮೊಬೈಲ್ ತಂದುಕೊಟ್ಟರೆ, ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗುವುದು ಖಂಡಿತ.
ಅವರು ಜವಾಬ್ದಾರಿಯುತರಾಗಿದ್ದರೆ:
ನಿಮ್ಮ ಮಗು ಎಲ್ಲಾ ಸಮಯದಲ್ಲೂ ಫೋನ್ ಹಿಡಿದುಕೊಂಡು ಹೋಗುವಷ್ಟು ಜವಾಬ್ದಾರಿಯುತವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅವರ ವಸ್ತುವಿನ ಸುರಕ್ಷತೆ ಕುರಿತು ಅವರಿಗೆ ಜವಾಬ್ದಾರಿ ಇರಬೇಕು. ಯಾವುದೋ ಒಂದು ಜಾಗಕ್ಕೆ ಮೊಬೈಲ್ ಹಿಡಿದುಕೊಂಡು ಹೋಗಿ ಮರಳಿ ತರುವಷ್ಟು ಜವಾಬ್ದಾರಿ ನಿಮ್ಮ ಮಕ್ಕಳಲ್ಲಿ ಇದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಹಾಗಿದ್ದಾಗ ಅವರಿಗೆ ಫೋನ್ ಕೊಡಿಸಬಹುದು.
ನಿಮ್ಮ ಮಗು ನಿಮ್ಮ ಜೊತೆಯೇ ಇದ್ದರೆ:
ನಿಮ್ಮ ಮಗುವಿಗೆ ಫೋನ್ ಹಸ್ತಾಂತರಿಸುವ ಮೊದಲು, ಅವರಿಗೆ ನಿಜವಾಗಿಯೂ ಅಗತ್ಯವಿದೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಅವರಿಗೆ ಫೋನ್ ಅಗತ್ಯವಿಲ್ಲದಿದ್ದರೆ, ಕೆಲವು ವರ್ಷ ಕಾಯಬಹುದು. ಮತ್ತೊಂದು ವಿಚಾರವೆಂದರೆ ನಿಮ್ಮ ಮಗು ನಿಮ್ಮ ಜೊತೆಯೇ ವಾಸಿಸುತ್ತಿದ್ದರೆ ಫೋನ್ ನೀಡಿ ಏಕೆಂದರೆ ನಿಮ್ಮ ಮೇಲ್ವಿಚಾರಣೆ ಅವರಿಗೆ ಸಿಗುವುದು. ಒಂದುವೇಳೆ ದೂರದಲ್ಲಿದ್ದರೆ ಈಗಲೇ ಫೋನ್ ಕೊಡುವುದು ಸೂಕ್ತವಲ್ಲ. ಅವರ ನಿಯಂತ್ರಣಕ್ಕೆ ಯಾರೂ ಇಲ್ಲದಿದ್ದಾಗ ಸಮಸ್ಯೆಯಾಗಬಹುದು.
ಅವಶ್ಯಕತೆ ಅರಿತಿದ್ದರೆ:
ಅನೇಕ ಮಕ್ಕಳು ಬೇಜವಾಬ್ದಾರಿಯಿಂದ ಫೋನ್ಗಳನ್ನು ಬಳಸುತ್ತಾರೆ. ಅವರು ವಿಭಿನ್ನ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುತ್ತಾರೆ ಅಥವಾ ದಿನವಿಡೀ ಸಾಮಾಜಿಕ ಮಾಧ್ಯಮದಲ್ಲಿ ಕಾಲಹರಣ ಮಾಡುತ್ತಾರೆ. ಈ ಅಂಶವನ್ನು ಮೊದಲೇ ಪರಿಗಣಿಸುವುದು ಒಳ್ಳೆಯದು. ಅವರಿಗೆ ಯಾವ ಕಾರಣಕ್ಕೆ ಪೋನ್ ಬೇಕು, ಅದರ ಅವಶ್ಯಕತೆ ಏನು ಎಂಬುದು ಅವರಿಗೆ ಅರಿವಿದ್ದರೆ ಮೊಬೈಲ್ ಕೊಡಿಸಬಹುದು. ಇಲ್ಲವಾದಲ್ಲಿ ಅವರು ಹಾಳಾಗಲು ನಾವೇ ದಾರಿ ಮಾಡಿಕೊಟ್ಟಂತಾಗುವುದು.
ನಿಮ್ಮ ಸೂಚನೆಗಳನ್ನು ಪಾಲಿಸುವವರಾಗಿದ್ದರೆ:
ಕೊನೆಯದಾಗಿ, ಅವರು ನಿಮ್ಮ ಮಾತನ್ನು ಕೇಳುತ್ತಾರೆ ಎಂಬುದು ತುಂಬಾ ಮುಖ್ಯ. ಫೋನ್ ಅನ್ನು ಸೀಮಿತ ಅವಧಿಗೆ ಬಳಸುತ್ತಾರೆಯೇ ಅಥವಾ ದಿನವಿಡೀ ಅವರು ಅದಕ್ಕೆ ಅಂಟಿಕೊಳ್ಳುತ್ತಾರೆ ಎಂಬುದನ್ನು ನೀವು ಮೇಲ್ವಿಚಾರಣೆ ಮಾಡಿ, ಅವರಿಗೆ ಸಮಯ ನಿಗದಿ ಮಾಡಿ. ಆ ಸಮಯಕ್ಕೆ ತಕ್ಕಂತೆ ಅವರು ಫೋನ್ ಬಳಸುತ್ತಿದ್ದರೆ, ಮೊಬೈಲ್ ಕೊಡಿಸಬಹುದು.
(Kannada Copy of Boldsky Kannada)
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm