ಬ್ರೇಕಿಂಗ್ ನ್ಯೂಸ್
02-07-21 02:23 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಬೇಸಿಗೆಯ ದಿನಗಳಲ್ಲಿ ಅತಿಯಾದ ಬಾಯಾರಿಕೆ ಆಗುವುದು ಸಾಮಾನ್ಯ. ಆದರೆ ಬೇರೆ ಋತುಮಾನದಲ್ಲೂ ಹೇಳಿಕೊಳ್ಳಲಾಗದಷ್ಟು ಬಾಯಾರಿಕೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಇದು ನೀವು ಯಾವುದೋ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದೀರಾ ಎಂದು ಸೂಚಿಸುವ ಲಕ್ಷಣವಾಗಿದೆ. ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡದಿದ್ದರೆ ಮುಂದೆ ಅದು ಅಪಾಯದ ಮಟ್ಟಕ್ಕೆ ತಲುಪಬಹುದು. ಆದ್ದರಿಂದ ಇಲ್ಲಿ ನಾವು ಅತಿಯಾಗಿ ಬಾಯಾರಿಕೆ ಆಗುವುದು ಯಾವ ಆರೋಗ್ಯ ಸಮಸ್ಯೆಗಳೆಂಬುದನ್ನು ಹೇಳಿದ್ದೇವೆ.
ಮಧುಮೇಹ:
ನಿಮ್ಮ ದೇಹದ ಜೀವಕೋಶಗಳಲ್ಲಿ ಇನ್ಸುಲಿನ್ ಕಡಿಎಯಾದಾಗ, ರಕ್ತದಿಂದ ಹೆಚ್ಚುವರಿ ಸಕ್ಕರೆಯನ್ನು ತೆಗೆದುಹಾಕಲು ಮೂತ್ರಪಿಂಡವು ಹೆಚ್ಚು ಶ್ರಮಿಸಬೇಕು. ಇದರ ಪರಿಣಾಮವೇ ಪದೇ ಪದೇ ಮೂತ್ರ ವಿಸರ್ಜನೆ ಆಗುವುದು. ಇದು ಹೆಚ್ಚು ನೀರು ಕುಡಿಯಲು ಪ್ರೇರೆಪಿಸುತ್ತದೆ. ಆದ್ದರಿಂದ ಮೊದಲಿಗಿಂತ ಹೆಚ್ಚು ನೀರನ್ನು ಕುಡಿಯಲು ಬಯಸುತ್ತೀರಿ. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಅತಿಯಾದ ಬಾಯಾರಿಕೆ ಮಧುಮೇಹದ ಎರಡು ಆರಂಭಿಕ ಚಿಹ್ನೆಗಳಾಗಿವೆ.
ರಕ್ತಹೀನತೆ:
ರಕ್ತಹೀನತೆ ಎಂದರೆ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವುದು. ಅಸಮರ್ಪಕ ಆಹಾರ ಅಥವಾ ಹೆಚ್ಚು ರಕ್ತಸ್ರಾವದಂತಹ ಹಲವಾರು ಕಾರಣಗಳಿಂದ ಇದು ಉಂಟಾಗುತ್ತದೆ. ನಿರ್ಜಲೀಕರಣವು ರಕ್ತಹೀನತೆಯ ಸಾಮಾನ್ಯ ಸಂಕೇತವಾಗಿದ್ದು, ನೀವು ತೀವ್ರವಾದ ರಕ್ತಹೀನತೆಯನ್ನು ಹೊಂದಿದಾಗ ಅತಿಯಾಗಿ ಬಾಯಾರಿಕೆ ಆಗಲು ಆರಂಭವಾಗುತ್ತದೆ. ತಲೆತಿರುಗುವಿಕೆ, ಆಯಾಸ, ಬೆವರುವುದು ಈ ಸ್ಥಿತಿಯ ಇತರ ಲಕ್ಷಣಗಳಾಗಿವೆ.
ಹೈಪರ್ಕಾಲ್ಸೆಮಿಯಾ:
ಹೈಪರ್ಕಾಲ್ಸೆಮಿಯಾ ಎನ್ನುವುದು ದೇಹದಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಹೆಚ್ಚಾಗುವ ಸ್ಥಿತಿಯಾಗಿದೆ. ಅತಿಯಾದ ಪ್ಯಾರಾಥೈರಾಯ್ಡ್ ಗ್ರಂಥಿಗಳು, ಕ್ಷಯ ಮತ್ತು ಕ್ಯಾನ್ಸರ್ ನಿಂದಲೂ ಇದು ಸಂಭವಿಸಬಹುದು. ಬಾಯಾರಿಕೆಯ ಭಾವನೆ ಹೈಪರ್ಕಾಲ್ಸೆಮಿಯಾದ ಮೊದಲ ಲಕ್ಷಣವಾಗಿದೆ. ರಕ್ತದಲ್ಲಿನ ಕ್ಯಾಲ್ಸಿಯಂ ಹೆಚ್ಚಾದಾಗ ಮೂಳೆಗಳು ದುರ್ಬಲಗೊಳ್ಳಬಹುದು ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಬಹುದು.
ಬಾಯಿ ಒಣಗುವುದು:
ಲಾಲಾರಸ ಗ್ರಂಥಿಗಳು ಸಾಕಷ್ಟು ಲಾಲಾರಸವನ್ನು ಬಿಡುಗಡೆ ಮಾಡದಿದ್ದಾಗ, ಅದು ನಿಮಗೆ ಅತಿಯಾದ ಬಾಯಾರಿಕೆಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳು, ಕ್ಯಾನ್ಸರ್ ಅಥವಾ ತಂಬಾಕು ಬಳಕೆಯಂತಹ ಅಭ್ಯಾಸಗಳಿಂದ ಇದು ಸಂಭವಿಸಬಹುದು. ಇದರ ಇತರ ಲಕ್ಷಣಗಳೆಂದರೆ ಬಾಯಿಯ ದುರ್ವಾಸನೆ, ರುಚಿಯಲ್ಲಿ ಬದಲಾವಣೆ, ಒಸಡಿನಲ್ಲಿ ಸಮಸ್ಯೆ ಮತ್ತು ಅಗಿಯುವುದರಲ್ಲಿ ತೊಂದರೆ ಉಂಟಾಗಬಹುದು.
ಗರ್ಭಧಾರಣೆ:
ಗರ್ಭಧಾರಣೆಯ ಹಲವಾರು ಲಕ್ಷಣಗಳಲ್ಲಿ ಅತಿಯಾದ ಬಾಯಾರಿಕೆ ಕೂಡ ಒಂದು. ಇದು ಸಮಸ್ಯೆಯಲ್ಲ, ಎಚ್ಚರಿಕೆಯ ಚಿಹ್ನೆ ಅಷ್ಟೇ. ಮೊದಲ ತ್ರೈಮಾಸಿಕದಲ್ಲಿ, ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದ ಮೂತ್ರವೂ ಹೆಚ್ಚಾಗುವುದು. ಆಗ ನಿಮ್ಮ ದೇಹದಲ್ಲಾಗುವ ನೀರಿನ ನಷ್ಟದಿಂದ ಬಾಯಾರಿಕೆ ಉಂಟಾಗುತ್ತದೆ. ಇದು ನೀರಿನ ನಷ್ಟದ ಪ್ರಮಾಣವನ್ನು ನೀವು ಪುನಃ ತುಂಬಿಸಬೇಕೆನ್ನುವ ಸೂಚನೆಯಾಗಿದೆ.
(Kannada Copy of Boldsky Kannada)
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm