ಬ್ರೇಕಿಂಗ್ ನ್ಯೂಸ್
01-07-21 02:22 pm Sumalatha N, BoldSky Kannada ಡಾಕ್ಟರ್ಸ್ ನೋಟ್
ನವದೆಹಲಿ, ಜುಲೈ 01: ದೇಶದಲ್ಲಿ 2-17 ವರ್ಷದ ಮಕ್ಕಳ ಮೇಲೆ ಕೋವೊವ್ಯಾಕ್ಸ್ ಕೊರೊನಾ ಲಸಿಕೆಯ 2/3ನೇ ಹಂತದ ಪ್ರಯೋಗ ನಡೆಸಲು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅನುಮತಿ ನೀಡದಂತೆ ಸರ್ಕಾರದ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.
12-17 ವಯಸ್ಸಿನ ಹಾಗೂ 2-11 ವಯಸ್ಸಿನ 920 ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆಯ ಪ್ರಯೋಗಕ್ಕೆ ಅನುಮತಿ ಕೋರಿ ಪುಣೆ ಮೂಲದ ಲಸಿಕಾ ಅಭಿವೃದ್ಧಿ ಸಂಸ್ಥೆ ಸೆರಂ ಇನ್ಸ್ಟಿಟ್ಯೂಟ್ ಸೋಮವಾರ ಕೇಂದ್ರ ಔಷಧ ನಿಯಂತ್ರಕ ಸಂಸ್ಥೆಗೆ ಅರ್ಜಿ ಸಲ್ಲಿಸಿತ್ತು.
ಆದರೆ ಸದ್ಯಕ್ಕೆ ಈ ಲಸಿಕೆಗೆ ಬೇರೆ ಯಾವುದೇ ದೇಶದಲ್ಲಿ ಅನುಮೋದನೆ ನೀಡಲಾಗಿಲ್ಲ. ಹೀಗಾಗಿ ಮಕ್ಕಳ ಮೇಲೆ ಪ್ರಯೋಗ ಸಲ್ಲದು ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೊರೊನಾ ವಿಷಯ ತಜ್ಞರು ಹೇಳಿದ್ದಾರೆ.
ಮಕ್ಕಳಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಪರಿಗಣಿಸಲು ಕಂಪನಿಯು ವಯಸ್ಕರಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗದ ಕೋವೊವ್ಯಾಕ್ಸ್ ಸುರಕ್ಷತೆ ಹಾಗೂ ಲಸಿಕೆ ಪರಿಣಾಮದ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಸಂಸ್ಥೆಗೆ ಶಿಫಾರಸ್ಸು ಮಾಡಿದೆ. ತಜ್ಞರ ಸಮಿತಿಯ ಈ ಶಿಫಾರಸ್ಸುಗಳನ್ನು ಡಿಸಿಜಿಐ ಅನುಮೋದಿಸಿರುವುದಾಗಿ ತಿಳಿದುಬಂದಿದೆ.
ಅಮೆರಿಕ ಮೂಲದ ಲಸಿಕೆ ತಯಾರಕ ನೋವಾವ್ಯಾಕ್ಸ್ ಇಂಕ್, ಕಡಿಮೆ, ಮಧ್ಯಮ ಆದಾಯದ ದೇಶಗಳಲ್ಲಿ ಹಾಗೂ ಭಾರತದಲ್ಲಿ NVX-CoV2373 ಅಭಿವೃದ್ಧಿ ಹಾಗೂ ವಾಣಿಜ್ಯೀಕರಣಕ್ಕಾಗಿ ಸೆರಂ ಇನ್ಸ್ಟಿಟ್ಯೂಟ್ ಜೊತೆ ಪರವಾನಗಿ ಒಪ್ಪಂದ ಮಾಡಿಕೊಂಡಿತ್ತು.
ಕೋವೊವ್ಯಾಕ್ಸ್ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಮಾರ್ಚ್ನಲ್ಲಿ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ವೇಳೆಗೆ ವಯಸ್ಕರಿಗೆ ಈ ಲಸಿಕೆಯನ್ನು ಬಿಡುಗಡೆ ಮಾಡಲು ಸೆರಂ ಸಂಸ್ಥೆ ಯೋಜನೆ ರೂಪಿಸಿದೆ.
(Kannada Copy of One India Kannada)
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm