ಬ್ರೇಕಿಂಗ್ ನ್ಯೂಸ್
30-06-21 11:49 am Meghashree Devaraju, BoldSky Kannada ಡಾಕ್ಟರ್ಸ್ ನೋಟ್
ಸೌಂದರ್ಯದ ಬಗ್ಗೆ ಕಾಳಜಿ ಇರುವವರು ಕೂದಲಿನಿಂದ ಕಾಲ್ಬೆರಳವರೆಗೂ ಕಾಳಜಿಮಾಡುತ್ತಾರೆ. ಇನ್ನು ಸೌಂದರ್ಯದ ಜತೆ ಆರೋಗ್ಯದ ಬಗ್ಗೆಯೂ ಗಮನಹರಿಸುವವರು ಆರೋಗ್ಯಯುವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಚ್ಛಿಸುತ್ತಾರೆ.
ಇದೇ ರೀತಿ ಆರೋಗ್ಯಯುತವಾಗಿ, ನೈಸರ್ಗಿಕವಾಗಿ ಕಾಲುಗಳ ಸೌಂದರ್ಯವನ್ನು ರಕ್ಷಿಸಿಕೊಳ್ಳುವುದು ಸಹ ಒಂದು ಸವಾಲೇ. ಅದರಲ್ಲೂ ಈ ಮಾನ್ಸೂನ್ ಸಮಯದಲ್ಲಿ ಕಾಲುಗಳನ್ನು ತುಸು ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ಶಿಲೀಂದ್ರ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ದೀರ್ಘಕಾಲದಲ್ಲಿ ಹಾಗೂ ಮಧುಮೇಹಿಗಳಿಗೆ ಬಹಳ ಅಪಾಯಕಾರಿ.
ನಾವಿಂದು ಮಾನ್ಸೂನ್ ಸಮಯದಲ್ಲಿ ನೈಸರ್ಗಿಕವಾಗಿ ಪಾದಗಳ ಕಾಳಜಿ ಮಾಡುವುದು ಹೇಗೆ ಎಂಬುದನ್ನು ವಿವರಿಸಲಿದ್ದೇವೆ:
1. ಮುಚ್ಚಿದ ಬೂಟುಗಳನ್ನು ಧರಿಸಬೇಡಿ
ಕಾಲುಗಳು ಸಂಪೂರ್ಣವಾಗಿ ಮುಚ್ಚುವಂಥ ಶೂಗಳನ್ನು ಧರಿಸಬೇಡಿ. ಇದರಿಂದ ನಿಮ್ಮ ಪಾದಗಳಿಗೆ ಒಡ್ಡಿಕೊಳ್ಳುವ ತೇವಾಂಶವು ಹೆಚ್ಚಾಗುತ್ತದೆ, ಇದು ದೀರ್ಘಕಾಲದಲ್ಲಿ ತೊಂದರೆಗೊಳಗಾಗುವಂಥ ಶಿಲೀಂಧ್ರಗಳ ಸೋಂಕಿಗೆ ಗುರಿಯಾಗಬಹುದು. ನಿಮ್ಮ ಪಾದಗಳು ಸದಾ ಒಣಗಿದ ಸ್ಥಿತಿಯಲ್ಲಿ ಇರಲಿ, ಅದಕ್ಕಾಗಿ ತೆರೆದ ಕಾಲ್ಬೆರಳ ಶೂ ಅಥವಾ ಚಪ್ಪಲಿಗಳನ್ನು ಧರಿಸಿ. ಒದ್ದೆಯಾದ ಬೂಟುಗಳನ್ನಂತೂ ಧರಿಸುವ ಕೆಟ್ಟ ಪ್ರಯತ್ನ ಮಾಡಲೇಬೇಡಿ.
2. ನಿಮ್ಮ ಪಾದಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ
ನೀವು ಹೊರಗಡೆಯಿಂದ ಮನೆಗೆ ಮರಳಿದ ನಂತರ ಪ್ರತಿದಿನ ನಿಮ್ಮ ಪಾದಗಳನ್ನು ಶುಭ್ರವಾಗಿ ತೊಳೆಯುವುದನ್ನು ಮರೆಯಬೇಡಿ. ಪ್ರತಿದಿನ ಬೆಚ್ಚಗಿನ ನೀರು ಮತ್ತು ಸೌಮ್ಯವಾದ ಸಾಬೂನಿನಿಂದ ನಿಮ್ಮ ಪಾದಗಳ ಅಡಿಭಾಗವನ್ನು ಶುಭ್ರಗೊಳಿಸಿ, ಅಲ್ಲಿನ ಧೂಳು ಕಣಗಳನ್ನು ಸ್ವಚ್ಛಗೊಳಿಸಿ. ಕಲ್ಲಿನಿಂದ ನಿಮ್ಮ ಪಾದವನ್ನು ಚೆನ್ನಾಗಿ ಉಜ್ಜಿಕೊಳ್ಳಿ. ನಿಮ್ಮ ಕಾಲ್ಬೆರಳುಗಳ ನಡುವಿನ ಪ್ರದೇಶವನ್ನು ಒಣಗಿಸಿ ಮತ್ತು ಶಿಲೀಂಧ್ರ-ವಿರೋಧಿ ಪುಡಿಯನ್ನು ಪ್ರತಿದಿನ ಅನ್ವಯಿಸಿ. ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಆಕರ್ಷಿಸುವುದರಿಂದ ಉದ್ದನೆಯ ಉಗುರುಗಳನ್ನು ಸಹ ತಪ್ಪಿಸುವುದು ಒಳಿತು.
3. ಪಾರ್ಲರ್ ತಪ್ಪಿಸಿ
ಪಾರ್ಲರ್ಗಳು ಅಥವಾ ಸಲೂನ್ಗಳಲ್ಲಿ ಮಾಡುವ ಪಾದ ಮಸಾಜ್ಗಳು ಅಥವಾ ಪೆಡಿಕ್ಯೂರ್ಗಳಿಂದ ನಿಮ್ಮ ಕಾಲುಗಳಿಗೆ ಸೋಂಕು ತಗಲುವ ಅಪಾಯವನ್ನುಂಟು ಸಾಧ್ಯತೆ ಹೆಚ್ಚೇ ಇರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಇಂಥಾ ಪ್ರಯತ್ನ ತಪ್ಪಿಸುವುದು ಉತ್ತಮ. ಮನೆಯಲ್ಲೇ ನಿಮ್ಮ ಸ್ವಂತ ಉಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಿಕೊಳ್ಳುವುದು ಉತ್ತಮ.
4. ಬರಿಗಾಲಿನಿಂದ ನಡೆಯುವುದನ್ನು ತಪ್ಪಿಸಿ
ಒದ್ದೆಯಾದ ನೆಲದ ಮೇಲೆ ನೀವು ಚಪ್ಪಲ್ ಇಲ್ಲದೆ ನಡೆಯುವಾಗ, ಮಳೆಗಾಲದಲ್ಲಿ ನೀವು ಸುಲಭವಾಗಿ ಸೋಂಕು ಮತ್ತು ಅಲರ್ಜಿಗೆ ತುತ್ತಾಗಬಹುದು. ಆದ್ದರಿಂದ ನೀರಿನ ಮೇಲೆ ನಡೆಯುವಾಗ ತಪ್ಪದೇ ಚಪ್ಪಲಿ ಧರಿಸಿ.
5. ಮಾಯಿಶ್ಚರೈಸರ್
ನಿತ್ಯ ರಾತ್ರಿ ಮಲಗುವ ಮುನ್ನ ಕಾಲುಗಳಿಗೆ ಮಾಯಿಶ್ಚರೈಸರ್ ಹಚ್ಚಿ ಮಲಗಿ. ಇದು ನಿಮ್ಮ ಕಾಲಿನ ತೇವಾಂಶವನ್ನು ನಿವಾರಿಸುತ್ತದೆ ಹಾಗೂ ಸತ್ತ ಚರ್ಮ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಲಗುವಾಗ ಸಾಕ್ಸ್ ಧರಿಸಬೇಡಿ.
6. ಉಗುರುಗಳನ್ನು ಸರಿಯಾಗಿ ಕತ್ತರಿಸಿ
ನಿಮ್ಮ ಉಗುರುಗಳನ್ನು ಸೂಕ್ಚ್ಮವಾಗಿ ಜಾಗ್ರತೆವಹಿಸಿ ಕತ್ತರಿಸಿ, ಇದು ನಿಮ್ಮ ಚರ್ಮಕ್ಕೆ ತುಂಬಾ ಹತ್ತಿರ ಇದ್ದು ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಉಗುರುಗಳ ಮೂಲೆಗಳಲ್ಲಿ ತೀವ್ರವಾಗಿ ಕತ್ತರಿಸಬೇಡಿ. ಮಳೆಗಾಲದಲ್ಲಿ ಗಾಯ ಬೇಗ ಮಾಸುವುದಿಲ್ಲ, ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ.
(Kannada Copy of Boldsky Kannada)
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm