ಬ್ರೇಕಿಂಗ್ ನ್ಯೂಸ್
17-06-21 10:42 am Shreeraksha, BoldSky Kannada ಡಾಕ್ಟರ್ಸ್ ನೋಟ್
ಅತಿಯಾದ ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಅನೇಕ ಬಾರಿ ಅಕಾಲಿಕ ವಯಸ್ಸಿಗೆ ಸುಕ್ಕುಗಳು, ಸೂಕ್ಷ್ಮ ರೇಖೆಗಳು ಅಥವಾ ಡಾರ್ಕ್ ಸರ್ಕಲ್ ಗಳಂತಹ ಹಲವಾರು ಸಮಸ್ಯೆಗಳು ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ಮಹಿಳೆಯರು ವಯಸ್ಸಿಗೆ ಮುಂಚೆಯೇ ವಯಸ್ಸಾಗಿರುವಂತೆ ಕಾಣುತ್ತಾರೆ.
ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವು ಮೂರು ಮುಖದ ವ್ಯಾಯಾಮಗಳ ಬಗ್ಗೆ. ಇದರಿಂದ ನಿಮ್ಮ ಮುಖದ ಸುಕ್ಕುಗಳು ಮತ್ತು ಡಾರ್ಕ್ ಸರ್ಕಲ್ ಗಳ ಸಮಸ್ಯೆ ಕಡಿಮೆಯಾಗುವುದು.
ಕೆನ್ನೆಯ ಚರ್ಮವನ್ನು ಬಿಗಿಗೊಳಿಸಲು ಈ ವ್ಯಾಯಾಮ ಮಾಡಿ: ಈ ವ್ಯಾಯಾಮ ಮಾಡುವುದರಿಂದ ನಿಮ್ಮ ಮುಖದ ಚರ್ಮದ ಬಿಗಿಯಾಗಿ, ಮುಖದ ಚರ್ಮ ಜೋತು ಬೀಳುವುದು ಕಡಿಮೆಯಾಗುವುದು. ಈ ಮುಖದ ವ್ಯಾಯಾಮ ಮಾಡುವ ಮೊದಲು, ನಿಮ್ಮ ಮುಖವನ್ನು ನೀರಿನಿಂದ ತೊಳೆದು, ಬಾದಾಮಿ, ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯಿಂದ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಅದರ ನಂತರ ಈ ವ್ಯಾಯಾಮ ಮಾಡಲು ಪ್ರಾರಂಭಿಸಿ.

ವ್ಯಾಯಾಮ ಮಾಡುವುದು ಹೇಗೆ?:
1. ಮೊದಲಿಗೆ ನಿಮ್ಮ ಬಾಯಿ ತೆರೆಯಿರಿ.
2. ನಂತರ ನಿಮ್ಮ ತುಟಿಗಳಿಂದ ಹಲ್ಲುಗಳನ್ನು ಮುಚ್ಚಿ ಮತ್ತು ಪೌಟ್ ಮಾಡಿ.
3. ಬಾಯಿ ಮುಚ್ಚಿಕೊಂಡೇ ಕಿರುನಗೆ ಬೀರಿ. ನಗುತ್ತಿರುವಾಗ ನಿಮ್ಮ ಹಲ್ಲುಗಳನ್ನು ಕಾಣಬಾರದು.
4. ನಂತರ, ನಿಮ್ಮ ಬೆರಳುಗಳನ್ನು ಗಲ್ಲದ ಮೇಲೆ ಇಟ್ಟು, ನಿಮ್ಮ ದವಡೆಯ ರೇಖೆಯನ್ನು ನಿಮ್ಮ ಬೆರಳುಗಳಿಂದ ಮಸಾಜ್ ಮಾಡಿ.
5. ಈ ವ್ಯಾಯಾಮವನ್ನು ಸುಮಾರು 5 ರಿಂದ 7 ಬಾರಿ ಮಾಡಿ.
ಡಬಲ್ ಚಿನ್ ಸಮಸ್ಯೆಗೆ ಈ ವ್ಯಾಯಾಮ ಮಾಡಿ: ಈ 10 ಸೆಕೆಂಡುಗಳ ಚಮಚದ ಸಹಾಯದಿಂದ ವ್ಯಾಯಾಮವು ಡಬಲ್ ಚಿನ್ ಮತ್ತು ಸುಕ್ಕುಗಳಂತಹ ಸಮಸ್ಯೆಗಳನ್ನು ತೊಡೆದುಹಾಕಬಹುದು. ಇದರಿಂದ ನಿಮ್ಮ ಕೆನ್ನೆಗಳಿಗೆ ವ್ಯಾಯಾಮ ದೊರೆತು, ಸಂಗ್ರಹವಾಗಿರುವ ಬೊಜ್ಜು ಕರಗುವುದು.

ವ್ಯಾಯಾಮ ಮಾಡುವುದು ಹೇಗೆ?:
1. ಚಮಚವನ್ನು ಬಾಯಿಯಲ್ಲಿ ಇರಿಸಿ
2. ಈಗ ಚಮಚದ ಮೇಲೆ ಅಮೃತಶಿಲೆಯನ್ನು ಇರಿಸಿ
3. ಅದನ್ನು ಸುಮಾರು 10 ಸೆಕೆಂಡುಗಳ ಕಾಲ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿ.
4. ನಂತರ ವಿಶ್ರಾಂತಿ ಪಡೆಯಿರಿ.
5. ಈ ವ್ಯಾಯಾಮವನ್ನು ಎರಡು ಮೂರು ಬಾರಿ ಪುನರಾವರ್ತಿಸಿ.
ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಈ ವ್ಯಾಯಾಮ ಮಾಡಿ:
ಕಣ್ಣುಗಳ ಸುತ್ತಲೂ ಫೈನ್ ಲೈನ್ ಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು, ನಿಮ್ಮ ಕಣ್ಣುಗಳ ಸುತ್ತ ಬಾದಾಮಿ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿದ ನಂತರ ನಿಧಾನವಾಗಿ ಕಣ್ಣುಗಳ ಸುತ್ತಲೂ ಬೆರಳು ಹಾಕಿ ಮಸಾಜ್ ಮಾಡಿ. ಇದರ ನಂತರ, ನಿಮ್ಮ ತೋರುಬೆರಳಿನಿಂದ ಕಣ್ಣುಗಳ ಹೊರ ಭಾಗವನ್ನು ನಿಧಾನವಾಗಿ ಮಸಾಜ್ ಮಾಡಿ. ಜೊತೆಗೆ ಮುಖವನ್ನು ಕೈಗಳಿಂದ ಮೆಲ್ಲನೇ ಮಸಾಜ್ ಮಾಡಿ. ಇದನ್ನು ಮಾಡುವುದರಿಂದ, ಕಣ್ಣುಗಳ ಸುತ್ತ ಸುಕ್ಕುಗಳು ಮತ್ತು ಡಾರ್ಕ್ ಸರ್ಕಲ್ ಗಳು ಕಡಿಮೆಯಾಗುತ್ತವೆ.
(Kannada Copy of Boldsky Kannada)
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 05:20 pm
Mangalore Correspondent
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm