ಬ್ರೇಕಿಂಗ್ ನ್ಯೂಸ್
10-06-21 03:06 pm Reena TK, BoldSky Kannada ಡಾಕ್ಟರ್ಸ್ ನೋಟ್
ಭಾರತದಲ್ಲಿ ಕೋವಿಡ್ ಲಸಿಕೆಯು 45 ವರ್ಷ ಮೇಲ್ಪಟ್ಟವರಲ್ಲಿ ಬಹುತೇಕ ಜನರಿಗೆ ಸಿಕ್ಕಾಗಿದೆ. ಇನ್ನು ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಫ್ರಂಟ್ಲೈಬ್ ವರ್ಕರ್ಸ್ಗೆ ಲಸಿಕೆ ಸಿಕ್ಕಾಗಿದೆ. ಇದೀಗ ಬಾಕಿಯುಳಿದಿರುವುದು ಯುವ ವಯಸ್ಸಿನವರು ಹಾಗೂ ಮಕ್ಕಳು.
ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ, ಇದರ ಕುರಿತು ಹಲವಾರು ಸಂಶೋಧನೆಗಳು ನಡೆಯುತ್ತಿವೆ. 12 ವರ್ಷ ಮೇಲ್ಪಟ್ಟವರಿಗೆ ಫೈಜರ್ ನೀಡುವುದರ ಕುರಿತು ಟ್ರಯಲ್ನಲ್ಲಿದೆ. ಇನ್ನು ಭಾರತ್ ಬಯೋಟೆಕ್ ಸಿದ್ಧಪಡಿಸುತ್ತಿರುವ ನಾಸಲ್ ವ್ಯಾಕ್ಸಿನ್ ಬಂದ್ರೆ ಮಕ್ಕಳಿಗೆ ನೀಡಬಹುದು, ಆದ್ರೆ ಅದು ಕೂಡ ಟ್ರಯಲ್ ಹಂತದಲ್ಲಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಿದ್ದರೂ, ಲಸಿಕೆಯ ಅಭಾವ ಕಾರಣ ಇದೀಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಸಿಗುತ್ತಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಇದರ ಕುರಿತು ಕೆಲವೊಂದು ನಿಯಮಗಳನ್ನು ಬದಲಾಯಿಸಿದೆ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಿದ್ದರೂ, ಲಸಿಕೆಯ ಅಭಾವ ಕಾರಣ ಇದೀಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಸಿಗುತ್ತಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಇದರ ಕುರಿತು ಕೆಲವೊಂದು ನಿಯಮಗಳನ್ನು ಬದಲಾಯಿಸಿದೆ.
ಜೂ. 21ರಿಂದ ಕೋವಿಡ್ ಲಸಿಕೆಗೆ ಹೊಸ ಮಾರ್ಗಸೂಚಿ
1. ಶೇಕಡ 75ರಷ್ಟು ಲಸಿಕೆಯನ್ನು ದೇಶದಲ್ಲಿ ಉತ್ಪತ್ತಿ ಮಾಡಲಾಗುತ್ತಿದೆ. ಇದನ್ನು ಉಚಿತವಾಗಿ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು. ರಾಜ್ಯಗಳು, ಕೇಂದ್ರಾಡಳಿತ ಪ್ರದೆಶಗಳು ತನ್ನ ನಾಗರಿಕರಿಗೆ ಉಚಿತವಗಿ ಲಸಿಕೆಯನ್ನು ನೀಡಬೇಕು.
2. ಲಸಿಕೆಯನ್ನು ಪ್ರಾಮುಖ್ಯತೆ ಆಧರಿಸಿ ನೀಡಲಾಗುವುದು. ಆರೋಗ್ಯ ಕಾರ್ಯಕರ್ತರಿಗೆ, ಫ್ರಂಟ್ ಲೈಲ್ ವರ್ಕರ್ಸ್, 45 ವರ್ಷ ಮೇಲ್ಪಟ್ಟ ನಾಗರಿಕರು, ಯಾರಿಗೆ ಸೆಕೆಂಡ್ ಡೋಸ್ ಬಾಕಿಯಿದೆಯೋ ಅವರಿಗೆ , 18 ವರ್ಷ ಮೇಲ್ಪಟ್ಟವರಿಗೆ ಈ ರೀತಿ ಲಸಿಕೆಯನ್ನು ನೀಡಲಾಗುವುದು.
3. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡುವಾಗ ಜನಸಂಖ್ಯಾ ಆಧಾರದ ಮೇಲೆ ಲಸಿಕೆ ಡ್ರೈವ್ ಹೇಗೆ ಪ್ರಾರಂಭಿಸಬೇಕೆಂಬುವುದು ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು.
4. ಲಸಿಕೆಯನ್ನು ಆಯಾ ರಜ್ಯದ ಜನಸಂಖ್ಯೆ, ರೋಗದ ತೀವ್ರತೆ ಇವುಗಳನ್ನು ನೋಡಿ ನೀಡಲಾಗುವುದು. ಲಸಿಕೆಯು ವೇಸ್ಟ್ ಆಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ವ್ಯರ್ಥ ಮಾಡಿದ ರಾಜ್ಯಗಳು ಅದರ ಋಣಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ, ಅಂದ್ರೆ ಕೇಂದ್ರ ಸರ್ಕಾರ ಆ ರಾಜ್ಯಕ್ಕೆ ನೀಡುವ ಲಸಿಕೆಯನ್ನು ಕಡಿತಗೊಳಿಸುವುದು ಎಂದು ಎಚ್ಚರಿಕೆ ನೀಡಿದೆ.
5. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡುತ್ತದೆ ಎಂದು ಮೊದಲೇ ತಿಳಿಸುತ್ತದೆ, ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಮಟ್ಟದಿಂದ ಗ್ರಾಮೀಣ ಮಟ್ಟದವರೆಗೂ ಲಸಿಕೆ ವಿತರಣೆ ಪ್ರಮಾಣವನ್ನು ನಿಗದಿಗೊಳಿಸಬೇಕು. ಪ್ರತಿಯೊಂದು ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಲಸಿಕೆ ಪ್ರಮಾಣ ಮತ್ತು ವಿತರಣೆ ರೀತಿಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
6. ಕೊರೊನಾವೈರಸ್ ಲಸಿಕೆ ಉತ್ಪಾದಕ ಕಂಪನಿಗಳನ್ನು ಉತ್ತೇಜಿಸುವ ಉದ್ದೇಶದಿಂದ ದೇಶದಲ್ಲಿ ಲಸಿಕೆ ಉತ್ಪತ್ತಿ ಮಾಡುತ್ತಿರುವ ಕಂಪನಿಗಳು ತಮ್ಮ ಉತ್ಪಾದನೆಯ ಶೇ.25ರಷ್ಟು ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವುದಕ್ಕೆ ಅನುಮತಿ ನೀಡಿದೆ. ಲಸಿಕೆಗಳು ಚಿಕ್ಕ ಹಾಗೂ ದೊಡ್ಡ ಆಸ್ಪತ್ರೆಗೆ ಲಭ್ಯವಾಗುವ ಉದ್ದೇಶದಿಂದ ಲಸಿಕೆಯ ಸರಬರಾಜ ಹಣ ಪಾವತಿಯನ್ನು ನ್ಯಾಷನಲ್ ಹೆಲ್ತ್ ಅಥೋರಟಿ ಎಲೆಕ್ಟ್ರಾನಿಕ್ ಪ್ಲಾಟ್ಫಾರಂ ಮುಖಾಂತರವೇ ನಡೆಸಲಾಗುವುದು. ಇದರಿಂದಾಗಿ ಚಿಕ್ಕ ಆಸ್ಪತ್ರೆಗಳಿಗೂ ಕೂಡ ಸಮಯಕ್ಕೆ ಸರಿಯಾಗಿ ಲಸಿಕೆ ಲಭ್ಯವಾಗುವಂತಾಗುವುದು.
7. ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಪ್ರತಿ ಡೋಸ್ ಲಸಿಕೆಯ ಬೆಲೆಯನ್ನು ಉತ್ಪಾದಕ ಕಂಪನಿಗಳೇ ನಿರ್ಧರಿಸಲಿವೆ. ಒಂದು ವೇಳೆ ಲಸಿಕೆ ಬೆಲೆಯಲ್ಲಿ ವ್ಯತ್ಯಾಸವಾದರೆ ಅದನ್ನು ಮುಂಚಿತವಾಗಿಯೇ ತಿಳಿಸಬೇಕಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್-19 ಲಸಿಕೆ ನೀಡುವುದಕ್ಕೆ ಗರಿಷ್ಠ 150 ರೂಪಾಯಿ ಸೇವಾ ಶುಲ್ಕವನ್ನು ಮಾತ್ರ ವಿಧಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
8. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಅವರ ಆದಾಯ ಪರಿಗಣಿಸದೆ ಉಚಿತವಾಗಿ ಲಸಿಕೆ ಸಿಗಲಾಗುವುದು. ಇನ್ನು ಖಾಸಗಿ ಆಸ್ಪತ್ರೆಯಿಂದ ಲಸಿಕೆ ಪಡೆಯಲು ಇಚ್ಚಿಸುವವರು ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
9. ಖಾಸಗಿ ಲಸಿಕೆ ವಿತರಣೆ ಕೇಂದ್ರಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗವನ್ನು ಉತ್ತೇಜಿಸುವುದಕ್ಕಾಗಿ "ಲೋಕ ಕಲ್ಯಾಣ್" ಎಂಬ ಕಾರ್ಯಯೋಜನೆ ರೂಪಿಸಲಾಗಿದೆ. ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರಿಗೆ ಎಲೆಕ್ಟ್ರಾನಿಕ್ ವೋಚರ್ಗಳನ್ನು ನೀಡಲಾಗುವುದು, ಇದರಿಂದ ಆರ್ಥಿಕವಾಗಿ ಸದೃಢರಾಗಿರುವವರು ಈ ವೋಚರ್ ಪಡೆಯುವ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಅನುವು ಮಾಡಿಕೊಡಬಹುದು.
10. CoWIN ಅಪ್ಲಿಕೇಶನ್ ಮೂಲಕ ಪ್ರತಿಯೊಬ್ಬರು ಲಸಿಕೆ ಕೇಂದ್ರಗಳಲ್ಲಿ ಲಸಿಕೆಗಾಗಿ ಪೂರ್ವ ನೋಂದಣಿ ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ವಯಸ್ಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಲಸಿಕೆ ಪಡೆದುಕೊಳ್ಳುವುದಕ್ಕೆ ದಿನಾಂಕ ನಿಗದಿಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ಈ ಅಪ್ಲಿಕೇಷನ್ ನಲ್ಲಿ ಎಲ್ಲ ಲಸಿಕೆ ಕೇಂದ್ರಗಳು ಮತ್ತು ಲಸಿಕೆಯ ಲಭ್ಯತೆಯ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.
11. ನಾಗರಿಕರು ಮೊದಲೇ ಕಾಯ್ದಿರಿಸಲು ಅನುಕೂಲವಾಗುವಂತೆ ರಾಜ್ಯಗಳು ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಸಹಾಯವಾಣಿ ಕೇಂದ್ರಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು.
(Kannada Copy of Boldsky Kannada)
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm