ಬ್ರೇಕಿಂಗ್ ನ್ಯೂಸ್
27-05-21 02:42 pm Shreeraksha, BoldSky Kannada ಡಾಕ್ಟರ್ಸ್ ನೋಟ್
ನಿಮ್ಮ ಮುಖದಲ್ಲಿ ಯಾವುದೇ ಕಲೆಯಿಲ್ಲದೇ, ಮೊಡವೆಗಳಿಲ್ಲದೇ ನಿರ್ಮಲವಾಗಿರಬಹುದು. ಆದರೆ ನಿಮ್ಮ ಕುತ್ತಿಗೆ ಕಪ್ಪಾಗಿದ್ದರೆ, ನಿಮ್ಮ ಮುಖದ ಸೌಂದರ್ಯ ಕಡಿಮೆಯಾಗುತ್ತದೆ. ಕತ್ತಿನ ಭಾಗದಲ್ಲಿ ಕಪ್ಪಾಗಲು ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಪ್ರಾಥಮಿಕ ಕಾರಣವೆಂದರೆ ಸರಿಯಾದ ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು. ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು, ಮಾಲಿನ್ಯಕಾರಕಗಳು ಮಧುಮೇಹವೂ ಇದಕ್ಕೆ ಕಾರಣವಾಗುವ ಇತರ ಕೆಲವು ಕಾರಣಗಳು. ಆದರೆ ಚಿಂತಿಸಬೇಡಿ! ನಿಮಗಾಗಿ ನಾವಿಲ್ಲಿ ಕೆಲವೊಂದು ಕೆಲವೊಂದು ಮನೆಮದ್ದುಗಳನ್ನು ಹೊತ್ತು ತಂದಿದ್ದೇವೆ.
ಲೋಳೆರಸ: ಎಲ್ಲರಿಗೂ ಗೊತ್ತಿರುವ ಹಾಗೇ ಲೋಳೆರಸ ಅಥವಾ ಆಲೋವೆರಾ ಜೆಲ್ ಸೌಂದರ್ಯ ಸ್ನೇಹಿ. ಇದು ನಿಮ್ಮ ಕುತ್ತಿಗೆಯಿಂದ ಆ ಕಪ್ಪು ಪ್ರದೇಶವನ್ನು ತೆಗೆದುಹಾಕುತ್ತದೆ. ಸಸ್ಯದಲ್ಲಿ ಇರುವ ಖನಿಜಗಳು ಮತ್ತು ಜೀವಸತ್ವಗಳು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಚರ್ಮ ಕಪ್ಪಾಗುವುದನ್ನು ಕಡಿಮೆ ಮಾಡುತ್ತದೆ. ನೀವು ಮಾಡಬೇಕಾದುದೆಂದರೆ ಅಲೋವೆರಾದಿಂದ ಜೆಲ್ ಅನ್ನು ಹೊರತೆಗೆಯಿರಿ. ಈ ಜೆಲ್ ನ್ನು ನಿಮ್ಮ ಕುತ್ತಿಗೆಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ಕುತ್ತಿಗೆಯನ್ನು ಸ್ಕ್ರಬ್ ಮಾಡಿ. ಜೆಲ್ ಅನ್ನು ಅರ್ಧ ಘಂಟೆಯವರೆಗೆ ಬಿಟ್ಟು ನೀರಿನಿಂದ ತೊಳೆಯಿರಿ.
ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅಲ್ಲದೆ, ಇದು ಚರ್ಮದ ಮೇಲೆ ಸಂಗ್ರಹವಾಗುವ ಡೆಡ್ ಸೆಲ್ ಗಳನ್ನು ತೆಗೆದುಹಾಕುತ್ತದೆ. ಸ್ವಲ್ಪ ನೀರಿನಲ್ಲಿ 2 ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಮಿಶ್ರಣ ಮಾಡಿ. ಈಗ ಹತ್ತಿ ಉಂಡೆಯನ್ನು ದ್ರಾವಣದಲ್ಲಿ ಅದ್ದಿ ಮತ್ತು ಕಪ್ಪಾದ ಪ್ರದೇಶದ ಮೇಲೆ ಹಚ್ಚಿ. ಕೆಲವು ನಿಮಿಷಗಳ ಕಾಲ ಬಿಡಿ, ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಬ್ಲೀಚಿಂಗ್ ಏಜೆಂಟ್ ಇರುವುದರಿಂದ ಎರಡೂ ಅಂಶಗಳು ಮೈಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವು ಹನಿ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಕುತ್ತಿಗೆಯ ಮೇಲೆ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ದೇಹವು ತೈಲವನ್ನು ಹೀರಿಕೊಳ್ಳಲು ಬಿಡಿ.
ಮೊಸರು: ಮೊಸರು ನೈಸರ್ಗಿಕ ಕಿಣ್ವಗಳನ್ನು ಹೊಂದಿದ್ದು, ಅದು ಚರ್ಮವನ್ನು ಹೊಳೆಯಲು ಸಹಾಯ ಮಾಡುತ್ತದೆ. ಕೇವಲ ಎರಡು ಚಮಚ ತಾಜಾ ಮೊಸರು ತೆಗೆದುಕೊಂಡು ಅದನ್ನು ಕುತ್ತಿಗೆಗೆ ಹಚ್ಚಿ. ಮೊಸರನ್ನು ಹದಿನೈದು ನಿಮಿಷಗಳ ಕಾಲ ಬಿಡಿ ಮತ್ತು ಅದನ್ನು ನೀರಿನಿಂದ ತೊಳೆಯಿರಿ.
ಆಲೂಗಡ್ಡೆ: ಆಲೂಗಡ್ಡೆ ಚರ್ಮದ ಮೇಲಾದ ಕಪ್ಪು ಕಲೆಗಳನ್ನು ಕಡಿಮೆ ಮಾಡುವ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಕೇವಲ ಒಂದು ಆಲೂಗಡ್ಡೆಯನ್ನು ತುರಿದು, ಅದರ ರಸವನ್ನು ಹಿಂಡಿ. ಈಗ, ರಸವನ್ನು ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
(Kannada Copy of Boldsky Kannada)
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm