ಬ್ರೇಕಿಂಗ್ ನ್ಯೂಸ್
18-05-21 11:54 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಲಸಿಕೆ ಕೊರೊನಾದಿಂದ ನಮ್ಮನ್ನು ರಕ್ಷಿಸುವುದಾದರೂ ಇದನ್ನು ತೆಗೆದುಕೊಂಡಾಗ ಕೆಲವರಲ್ಲಿ ಕೆಲವೊಂದು ಬಗೆಯ ಅಡ್ಡಪರಿಣಾಮ ಉಂಟಾಗುವುದುಂಟು. ಕೆಲವರಲ್ಲಿ ಲಸಿಕೆ ಚುಚ್ಚಿದ ಜಾಗದಲ್ಲಿ ಊತ, ಇನ್ನು ಕೆಲವರಲ್ಲಿ ಜ್ವರ ಈ ರೀತಿಯ ಅಡ್ಡಪರಿಣಾಮಗಳು ಕಂಡು ಬಂದಿದ್ದೆವು.
ಆದರೆ ಕೊವಿಶೀಲ್ಡ್ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿರುವುದಾಗಿ AEFI ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ

ಭಾರತದಲ್ಲಿ ಲಸಿಕೆ ಪಡೆದ ಎಷ್ಟು ಜನರಿಗೆ ರಕ್ತ ಹೆಪ್ಪುಗಟ್ಟಿದೆ
ಭಾರತದಲ್ಲಿ ಕೊವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ನೀಡುತ್ತಿದ್ದು ಅದರಲ್ಲಿ ಕೊವಿಶೀಲ್ಡ್ ಪಡೆದವರಲ್ಲಿ ಶೇ. 0.61 ಜನರಲ್ಲಿ ಈ ರೀತಿ ಕಂಡು ಬಂದಿದೆ. ಇತರ ದೇಶಗಳಿಗೆ ಹೋಲಿಸಿದರೆ ಕೊರೊನಾ ಲಸಿಕೆಯಿಂದ ಈ ರೀತಿಯಾಗಿರುವುದು ಭಾರತದಲ್ಲಿ ತುಂಬಾ ಕಡಿಮೆ. ಯುಕೆ ಮತ್ತು ಜರ್ಮನ್ ದೇಶಗಳಲ್ಲಿ 1ಮಿಲಿಯನ್ನಲ್ಲಿ 10 ಜನರಿಗೆ ಹೀಗೆ ಅಡ್ಡ ಪರಿಣಾಮ ಬೀರಿವೆ. ಭಾರತದಲ್ಲಿ ಇದುವರೆಗೆ 7.5 ಕೋಟಿ ಕೊವಿಶೀಲ್ಡ್ ಲಸಿಕೆ ನೀಡಲಾಗಿದೆ. ಅದರಲ್ಲಿ 700 ಜನರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗಿದೆ ಎಂದು AEFI ತನ್ನ ವರದಿಯಲ್ಲಿ ತಿಳಿಸಿದೆ.

ಕೊವಾಕ್ಸಿನ್ನಿಂದ ಈ ರೀತಿಯ ಅಡ್ಡಪರಿಣಾಮವಾಗಿಲ್ಲ
ನಮ್ಮಲ್ಲಿ ಕೊವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಬಗೆಯ ಲಸಿಕೆ ನೀಡಲಾಗುತ್ತಿದೆ, ಎರಡೂ ಲಸಿಕೆಗಳು ಕೊರೊನಾ ವಿರುದ್ಧ ಹೋರಾಡುವಲ್ಲಿ ಸಮರ್ಥವಾಗಿವೆ. ಎರಡೂ ಲಸಿಕೆಗಳೂ ಕೆಲವರಲ್ಲಿ ಅಡ್ಡ ಪರಿಣಾಮ ಉಂಟು ಮಾಡಿವೆ. ಆದರೆ ಕೊವಾಕ್ಸಿನ್ ಪಡೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟಿರುವುದು ವರದಿಯಾಗಿಲ್ಲ.

ಈ ರೀತಿ ಲಸಿಕೆ ಪಡೆದ ಬಳಿಕ ಯಾವಾಗ ಕಂಡು ಬರುತ್ತದೆ?
ಈ ರೀತಿ ರಕ್ತ ಹೆಪ್ಪು ಗಟ್ಟುವ ಸಮಸ್ಯೆ ಕೆಲವರಲ್ಲಿ ಕೊವಿಶೀಲ್ಡ್ ಮೊದಲ ಡೋಸ್ ಪಡೆದ ವಾರದ ಬಳಿಕ ಕಂಡು ಬರುತ್ತದೆ. ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವುದು ಕಂಡು ಬರುವುದು.

ರಕ್ತ ಹೆಪ್ಪುಗಟ್ಟಿದಾಗ ಕಂಡು ಬರುವ ಲಕ್ಷಣಗಳೇನು?
ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ತುಂಬಾ ತಲೆನೋವು, ತಲೆಸುತ್ತು, ವಾಂತಿ, ಹೊಟ್ಟೆ ನೋವು, ಉಸಿರಾಟಕ್ಕೆ ತೊಂದರೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತಿಳಿಸಿ. ಭಾರತದಲ್ಲಿ ಮಾರ್ಚ್ 31ರವರೆಗಿನ ಅಂಕಿ ಅಂಶದ ಪ್ರಕಾರ 700 ಜನರಲ್ಲಿ ಈ ರೀತಿಯ ಅಡ್ಡಪರಿಣಾಮ ಕಂಡು ಬಂದಿದೆ. ಅದರಲ್ಲಿ 617 ಜನರ ಸ್ಥಿತಿ ಗಂಭೀರವಾಗಿತ್ತು. 130 ಸಾವು ಸಂಭವಿಸಿದೆ. ಭಾರತದಲ್ಲಿ ಮೇ 14ರವರೆಗೆ 18.4 ಕೋಟಿ ಜನರು ಲಸಿಕೆ ಪಡೆದಿದ್ದಾರೆ.
(Kannada Copy of Boldsky Kannada)
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm