ಬ್ರೇಕಿಂಗ್ ನ್ಯೂಸ್
18-05-21 11:44 am Reena TK, BoldSky Kannada ಡಾಕ್ಟರ್ಸ್ ನೋಟ್
ಕೋವಿಡ್ 19 ನಿಯಂತ್ರಣಕ್ಕೆ ಯಾವ ಔಷಧ ಒಳ್ಳೆಯದು ಎಂಬುವುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಈಗಾಗಲೇ ಭಾರತದಲ್ಲಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊವಾಕ್ಸಿನ್ ಹಾಗೂ ಕೊವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ.
ಇದರ ಜೊತೆಗೆ DRDO (Drugs Controller General of India) ಕೂಡ ಕೊರೊನಾಗೆ 2-DG( 2-deoxy-D-glucose) ಎಂಬ ಔಷಧವನ್ನು ಕಂಡು ಹಿಡಿದಿದೆ. ಮೇ. 15ಕ್ಕೆ ಈ ಔಷಧಿಯನ್ನು ಕೊರೊನಾ ಸೋಂಕಿತರಿಗೆ ನೀಡಲು ಅನುಮತಿ ಸಿಕ್ಕಿದೆ. ಇದೀಗ ಈ ಔಷಧಿ ತುಂಬಾನೇ ಸದ್ದು ಮಾಡುತ್ತಿದೆ.
2 ಡಿಯೋಕ್ಸಿ ಡಿ ಗ್ಲುಕೋಸ್ (2-DG) ಔಷಧ ಬಳಸುವುದು ಹೇಗೆ?
ಇದು ಪೌಡರ್ ರೂಪದ ಔಷಧವಾಗಿದ್ದು ಸ್ಯಾಚೆಟ್ನಲ್ಲಿ ದೊರೆಯುತ್ತದೆ. ಇದನ್ನು ನೀರಿನಲ್ಲಿ ಕಲೆಸಿ ಕುಡಿಯಬೇಕು. ಇದು ಸೋಂಕಾಣುಗಳು ಜೀವ ಕಣಗಳಿಗೆ ಹಾನಿ ಮಾಡುವುದನ್ನು ತಡೆಗಟ್ಟುತ್ತದೆ, ವೈರಸ್ ಬೆಳವಣಿಗೆ ತಡೆಗಟ್ಟಿ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಈ ಔಷಧ ಬಳಸುವುದರಿಂದ ಸೋಂಕಿತರಲ್ಲಿ ಆಕ್ಸಿಜನ್ ಕೊರತೆ ಉಂಟಾಗುವುದನ್ನು ತಡೆಗಟ್ಟಬಹುದು ಎಂಬ ಸರ್ಕಾರದ ಭರವಸೆಯಾಗಿದೆ. ಇದು ಆಸ್ಪತ್ರೆಯಲ್ಲಿರುವ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತೆ.
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
2-DGಯನ್ನು ಸೋಂಕಿತರಿಗೆ ನೀಡಿದಾಗ ಅವರು ಬೇಗನೆ ಚೇತರಿಸಿಕೊಂಡು ವರದಿ ನೆಗೆಟಿವ್ ಬರುತ್ತಿರುವುದು ಸಾಬೀತಾಗಿದೆ. ಈ ಔಷಧ ದೇಹದಲ್ಲಿ ಶಕ್ತಿ ಕಣಗಳನ್ನು ಉತ್ಪಾದಿಸಿ, ವೈರಸ್ ಬೆಳವಣಿಗೆಯನ್ನು ತಡೆಗಟ್ಟುತ್ತದೆ.
ಈ ಔಷಧ ಎಷ್ಟು ಪರಿಣಾಮಕಾರಿ
ಕೊರೊನಾ 2ನೇ ಅಲೆಯಲ್ಲಿ ಸಾಕಷ್ಟು ಸೋಂಕಿತರಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಈ ಔಷಧ ಆಕ್ಸಿಜನ್ ಕೊರತೆ ಉಂಟಾಗುವುದನ್ನು ತಡೆಗಟ್ಟಿ ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ಕೂಡ ಸಹಾಯ ಮಾಡುತ್ತೆ. ಆಕ್ಸಿಜನ್ ಸಿಲೆಂಡರ್ನಿಂದ ಉಸಿರಾಡುತ್ತಿರುವವರು ಸ್ವಾಭಾವಿಕವಾಗಿ ಉಸಿರಾಡುವಂತಾಗಲು ಈ ಔಷಧ ಸಹಕಾರಿ ಎಂಬುವುದು ಅಧ್ಯಯನದಿಂದ ಸಾಬೀತಾಗಿದೆ.
ಇದರ ಬೆಲೆ ಎಷ್ಟು
ನ್ಯೂಸ್ 18 ವರದಿ ಪ್ರಕಾರ ಇದರ ಬೆಲೆಯನ್ನು ಇನ್ನೂ ನಿಗದಿ ಪಡಿಸಿಲ್ಲ, ಅಂದಾಜು ರೂ 500-600 ಇರಬಹುದು ಎಂದು ಹೇಳಲಾಗುತ್ತಿದೆ. ಡಾ, ರೆಡ್ಡಿ ಲ್ಯಾಬ್ ಹಾಗೂ DRDO ಜೊತೆಯಾಗಿ ಈ ಔಷಧ ತಯಾರಿಸಿದ್ದು ದೇಶದಲ್ಲಿ ಎಲ್ಲಾ ಕಡೆ ಇದು ಸುಲಭವಾಗಿ ಸಿಗುವಂತಾಗುವುದು.
(Kannada Copy of Boldsky Kannada)
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm