ಬ್ರೇಕಿಂಗ್ ನ್ಯೂಸ್
10-05-21 01:31 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಎರಡನೇ ಅಲೆ ಶುರುವಾದ ಮೇಲೆ ಕೋವಿಡ್ 19 ವ್ಯಾಕ್ಸಿನ್ ಪಡೆಯಲು ಜನರು ತುಂಬಾನೇ ಉತ್ಸಾಹ ತೋರುತ್ತಿದ್ದಾರೆ. ಕೋವಿಡ್ 19 ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ತಗುಲಿದರೆ ರೋಗ ಲಕ್ಷಣಗಳು ಗಂಭೀರವಾಗುವುದಿಲ್ಲ ಎಂಬುವುದು ಈಗಾಗಲೇ ಸಾಬೀತಾಗೊದೆ.

ಸಾಕಷ್ಟು ನೀರು ಕುಡಿಯಿರಿ
ದಿನಕ್ಕೆ 8 ಲೋಟ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದ್ದರಿಂದ ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಸಾಕಷ್ಟು ನೀರು ಕುಡಿಯಬೇಕು. ಬಿಸಿ- ಬಿಸಿ ನೀರು ಕುಡಿಯಿರಿ. ಹಣ್ಣುಗಳ ಜ್ಯೂಸ್ ಮಾಡಿ ಕುಡಿಯಿರಿ. ಇನ್ನು ನೀರಿಗೆ ಅರಿಶಿಣ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ನಿಂಬು ಪಾನೀಯ ಕುಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಮದ್ಯ ಮುಟ್ಟಬಾರದು
ಮದ್ಯ ಕುಡಿಯುವುದರಿಂದ ಡೀಹೈಡ್ರೇಷನ್ (ನಿರ್ಜಲೀಕರಣ) ಉಂಟಾಗುವುದು. ಈ ಕಾರಣಕ್ಕೆ ಲಸಿಕೆ ಪಡೆಯುವ ಮುನ್ನ, ಪಡೆದ ನಂತರ ಮದ್ಯ ಸೇವಿಸಬೇಡಿ. ಅಲ್ಲದೆ ಮದ್ಯ ಸೇವಿಸುವುದರಿಮದ ರೋಗ ನಿರೋಧಕ ಸಾಮರ್ಥ್ಯ ಕುಗ್ಗಿಸುತ್ತೆ ಎಂದು ಸಂಶೋಧನೆಗಳು ಕೂಡ ಹೇಳಿವೆ.

ಸಂಸ್ಕರಿಸಿದ ಧಾನ್ಯಗಳನ್ನು ಬಳಸಿ
ಬ್ರಿಟಷ್ ಜರ್ನಲ್ ಆಫ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸ್ಕರಿಸಿದ ಧಾನ್ಯಗಳಿಗಿಂತ ಇಡೀ ಧಾನ್ಯಗಳ ಬಳಕೆ ಒಳ್ಳೆಯದು ಎಂದು ಹೇಳಿದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ತುಂಬಾನೇ ಒಳ್ಳೆಯದು. ಸಂಸ್ಕರಿಸಿದ ಆಹಾರದಲ್ಲಿ ಅಧಿಕ ಪ್ರಮಾಣದ ಕ್ಯಾಲೋರಿ ಇರುವುದರಿಂದ ಅಂಥ ಆಹಾರಗಳನ್ನು ದೂರವಿಡಿ.

ನಾರಿನಂಶವಿರುವ ಹಣ್ಣುಗಳು ಹಾಗೂ ತರಕಾರಿಗಳ ಸೇವನೆ
ಮಾಡಿ ಲಸಿಕೆ ಪಡೆಯುವ ಮುನ್ನ ಹಾಗೂ ಲಸಿಕೆ ಪಡೆದ ಬಳಿಕ ಹಣ್ಣುಗಳನ್ನು ಸೇವಿಸಿ, ತರಕಾರಿಗಳನ್ನು ತಿನ್ನಿ.

ಲಸಿಕೆಗೆ ಮುನ್ನ ಸಮತೋಲಿತ ಆಹಾರ ಸೇವಿಸಿ
ಕೋವಿಡ್ 19 ಲಸಿಕೆ ಪಡೆದ ಕೆಲವರಲ್ಲಿ ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳು ಕಂಡು ಬರುವುದು. ಇದನ್ನು ತಡೆಗಟ್ಟುವಲ್ಲಿ ಸಮತೋಲಿತ ಆಹಾರ ಸೇವನೆ ಸಹಾಯ ಮಾಡುತ್ತೆ. ಲಸಿಕೆ ಪಡೆಯುವ ಮುನ್ನ ಆರೋಗ್ಯಕರವಾದ ಆಹಾರ ಸೇವಿಸಿ, ನೀರು ಕುಡಿದು ಹೋಗಿ.

ಲಸಿಕೆ ಪಡೆದ ದಿನ ಈ ಆಹಾರ ಸೇವಿಸಬೇಡಿ
ನೀವು ಲಸಿಕೆ ಪಡೆದು ಬಂದು ಮೇಲೆ ಪಿಜ್ಜಾ, ನೂಡಲ್ಸ್, ಬನ್, ಮ್ಯಾಗಿ ಈ ರೀತಿಯ ಆಹಾರಗಳನ್ನು ಸೇವಿಸಬೇಡಿ. ಬದಲಿಗೆ ಭಾರತೀಯ ಶೈಲೀಯ ಆಹಾರ ಗಂಜಿ, ಕಿಚಡಿ ಈ ರೀತಿಯ ಆರೋಗ್ಯಕರ ಆಹಾರ ಸೇವಿಸಿ. ಫಾಸ್ಟ್ ಫುಡ್ಗಳಿಂದ ದೂರವಿರಿ. ವಿಟಮಿನ್ ಸಿ, ಸತುವಿನಂಶ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಾದರೆ
ಲಸಿಕೆ ಪಡೆದ ಬಳಿಕ ಒಮದು ವೇಳೆ ಅಡ್ಡ ಪರಿಣಾಮ ಉಂಟಾದರೆ 48 ಗಂಟೆಯಾದರೂ ಅದರ ಲಕ್ಷಣಗಳು ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡಿ.
(Kannada Copy of Boldsky Kannada)
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm