ಬ್ರೇಕಿಂಗ್ ನ್ಯೂಸ್
25-03-23 08:32 pm Source: Vijayakarnataka ಡಾಕ್ಟರ್ಸ್ ನೋಟ್
ಆಲೂಗಡ್ಡೆಯು ಹೆಚ್ಚಿನವರು ಇಷ್ಟಪಡುವ ತರಕಾರಿಯಾಗಿದೆ, ಆಲೂಗಡ್ಡೆಯ ಬೋಂಡಾ, ಚಿಪ್ಸ್, ಬಜ್ಜಿಯನ್ನು ಹೆಚ್ಚಿನವರು ಸವಿಯಲು ಬಯಸುತ್ತಾರೆ. ಕೆಲವರಿಗೆ ಆಲೂಗಡ್ಡೆ ಸೇವಿಸಿದರೆ ಗ್ಯಾಸ್ಟ್ರಿಕ್ ಆಗುತ್ತದೆ. ಇವೆಲ್ಲವನ್ನೂ ಹೊರತುಪಡಿಸಿ ನಾವಿಂದು ಆಲೂಗಡ್ಡೆಯನ್ನು ಫ್ರೈ ಮಾಡಿ ಸೇವಿಸುವುದರ ದುಷ್ಪರಿಣಾಮಗಳ ಬಗ್ಗೆ ತಿಳಿಸಲಿದ್ದೇವೆ.
ಫ್ರೈಡ್ ಆಲೂಗಡ್ಡೆ ಒಳ್ಳೆಯದಲ್ಲ
ಹುರಿದ ಆಲೂಗಡ್ಡೆ ತಿನ್ನುವುದರಿಂದ ಕ್ಯಾನ್ಸರ್ ಉಂಟಾಗುತ್ತದೆ. ಏಕೆಂದರೆ ಆಲೂಗಡ್ಡೆಯನ್ನು ಗೋಲ್ಡನ್ ಕಲರ್ ಆಗುವವರೆಗೆ ಫ್ರೈ ಮಾಡಿದಾಗ ಅದರಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಉತ್ಪತ್ತಿಯಾಗುತ್ತವೆ.
ಆದ್ದರಿಂದ, ಆಲೂಗಡ್ಡೆಯನ್ನು ಡೀಪ್ ಫ್ರೈಡ್, ಫ್ರೆಂಚ್ ಫ್ರೈಸ್ ಮತ್ತು ಆಲೂಗಡ್ಡೆ ಚಿಪ್ಸ್ ರೂಪದಲ್ಲಿ ತಿನ್ನುವುದನ್ನು ತಪ್ಪಿಸಬೇಕು ಎನ್ನುತ್ತಾರೆ ಆಯುರ್ವೇದ ವೈದ್ಯರು ಡಾ.ಡಿಂಪಲ್ .
ಹುರಿದ ಆಲೂಗಡ್ಡೆ ಅಪಾಯಕಾರಿ
ಆಲೂಗಡ್ಡೆಯನ್ನು ಡೀಪ್ ಫ್ರೈ ಮಾಡಿದಾಗ ಅಕ್ರಿಲಾಮೈಡ್ ರೂಪುಗೊಳ್ಳುತ್ತದೆ ಎಂದು ಡಾ.ಡಿಂಪಲ್ ಹೇಳಿದ್ದಾರೆ. ಅನೇಕ ಸಂಶೋಧನೆಗಳಲ್ಲಿ ಈ ಅಂಶವು ಕಾರ್ಸಿನೋಜೆನಿಕ್ ಎಂದು ಕಂಡುಬಂದಿದೆ. ಇದು ಮಾರಣಾಂತಿಕ ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ ಮತ್ತು ಆಲೂಗಡ್ಡೆಯ ಎಲ್ಲಾ ಪೋಷಕಾಂಶಗಳನ್ನು ನಾಶಪಡಿಸುತ್ತದೆ.
ನರಗಳನ್ನು ನಾಶಪಡಿಸುತ್ತದೆ
ಆಯುರ್ವೇದ ವೈದ್ಯರ ಪ್ರಕಾರ, ವಿಜ್ಞಾನಿಗಳು ಅಕ್ರಿಲಾಮೈಡ್ ಮಾನವರಲ್ಲಿ ನರಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ನಂಬುತ್ತಾರೆ. ಇದರಿಂದಾಗಿ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಸಮನ್ವಯವು ಕೊನೆಗೊಳ್ಳುತ್ತದೆ.
ಅಕ್ರಿಲಾಮೈಡ್ ಹೇಗೆ ರೂಪುಗೊಳ್ಳುತ್ತದೆ?
ನಾವು ಪಿಷ್ಟಯುಕ್ತ ಆಹಾರವನ್ನು ಗೋಲ್ಡನ್ ಕಲರ್ ಆಗುವವರೆಗೆ ಫ್ರೈ ಮಾಡಿದಾಗ, ಅದರಲ್ಲಿ ರಾಸಾಯನಿಕ ಕ್ರಿಯೆಯು ಸಂಭವಿಸುತ್ತದೆ ಮತ್ತು ಅಕ್ರಿಲಾಮೈಡ್ ಉತ್ಪತ್ತಿಯಾಗುತ್ತದೆ.
ಇದು ಸಾಮಾನ್ಯವಾಗಿ ಹುರಿದ ಆಹಾರ, ಆಲೂಗಡ್ಡೆ ಚಿಪ್ಸ್ ಮತ್ತು ಫ್ರೆಂಚ್ ಫ್ರೈಗಳಲ್ಲಿ ಕಂಡುಬರುತ್ತದೆ. ಈ ಅಂಶವು ಕುಕೀಸ್, ಟೋಸ್ಟ್ ಮತ್ತು ಕಾಫಿಯಲ್ಲಿಯೂ ಇರುತ್ತದೆ.
ಆಲೂಗಡ್ಡೆ ಸೇವಿಸಲು ಉತ್ತಮ ಮಾರ್ಗ ಯಾವುದು?
ನೀವು ಕ್ಯಾನ್ಸರ್ ಉಂಟುಮಾಡುವ ಅಂಶವನ್ನು ನಿಲ್ಲಿಸಲು ಬಯಸಿದರೆ, ನೀವು ಬೇಯಿಸಿದ ಆಲೂಗಡ್ಡೆಯನ್ನು ಸೇವಿಸಬಹುದು. ಒಂದುವೇಳೆ ನಿಮಗೆ ಆಲೂಗೆಡ್ಡೆ ಫ್ರೈ ಮಾಡಬೇಕೆಂದಿದ್ದರೆ ಅದನ್ನು ಹೆಚ್ಚು ಹುರಿಯಬೇಡಿ. ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದರೆ ಸಾಕು.
ಅಡುಗೆ ಮಾಡುವ ಮೊದಲು ಆಲೂಗಡ್ಡೆಯನ್ನು ನೆನೆಸಿ
ಫ್ರೈ ಮಾಡಿವ ಮೊದಲು ಆಲೂಗೆಡ್ಡೆ ಚೂರುಗಳನ್ನು ಸುಮಾರು 15 ರಿಂದ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ ಎಂದು ಡಾ. ಡಿಂಪಲ್ ಹೇಳುತ್ತಾರೆ. ನೀರಿನಲ್ಲಿ ನೆನೆಸಿಡುವುದರಿಂದ ಅದು ಅಕ್ರಿಲಾಮೈಡ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
why deep frying potato is not good for health.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm