ಬ್ರೇಕಿಂಗ್ ನ್ಯೂಸ್
13-11-22 07:29 pm HK News Desk ಡಾಕ್ಟರ್ಸ್ ನೋಟ್
ಧಾರವಾಡ, ನ.13: ಮಕ್ಕಳ ಆರೋಗ್ಯದಲ್ಲಿ ಕಣ್ಣು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ. ಕಣ್ಣಿನ ದೃಷ್ಟಿಯ ಬೆಳವಣಿಗೆ ಮಗು ಗರ್ಭವಾಸ್ಥೆಯಲ್ಲಿರುವಾಗಲೇ ಶುರುವಾಗಿ ಮಗುವಿನ ಜನನದ ನಂತರ ಪ್ರೌಡಾವಸ್ಥೆಯವರೆಗೂ ಮುಂದುವರೆಯುತ್ತದೆ. ಕಣ್ಣಿನ ಸಮಸ್ಯೆಯನ್ನು ನಾವು ಎಷ್ಟು ಬೇಗ ಪತ್ತೆಹಚ್ಚುತ್ತೇವೆಯೋ ಅಷ್ಟು ಒಳ್ಳೆಯದು. ಮಕ್ಕಳ ಕಣ್ಣುಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಕೊಡಿಸುವದರಿಂದ ಸಾಕಷ್ಟು ಕಣ್ಣಿನ ತೊಂದರೆಗಳನ್ನು ಪರಿಹರಿಸಬಹುದು ಹಾಗೂ ಶಾಶ್ವತ ಅಂಧತ್ವವನ್ನು ತಡೆಗಟ್ಟಬಹುದು ಎಂದು ಡಾ. ರೂಪಾ ಹಿರೇಮಠ ಚಿಕ್ಕ ಮಕ್ಕಳ ನೇತ್ರ ತಜ್ಞರು ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಧಾರವಾಡ, ಇಂದು ನಗರದ ಎಂ. ಎಂ. ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ತ ಜರುಗಿದ ಉಚಿತ ನೇತ್ರ ತಪಾಸಣೆಯಲ್ಲಿ ತಿಳಿಸಿದರು. ಮಕ್ಕಳ ಕಣ್ಣಿನ ಸಾಮಾನ್ಯ ತೊಂದರೆಗಳು, ಲಕ್ಷಣಗಳು ಹಾಗೂ ಕೆಲವು ಸೂಚನೆಗಳನ್ನು ಕೂಡ ಈ ಕೆಳಗಿನಂತೆ ನೀಡಿದ್ದಾರೆ.
ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ತೊಂದರೆಗಳಾದ ದ್ರಷ್ಟಿ ದೋಷ, ಮೆಳ್ಳುಗಣ್ಣು, ಅಲರ್ಜಿ ಯಿಂದಾಗುವ ತೊಂದರೆಗಳು, ಕಣ್ಣಿಗಾಗುವ ಗಾಯಗಳು, ಕಾಚಬಿಂದು ಹಾಗೂ ಅಕ್ಷಿಪಟಲದ ತೊಂದರೆಗಳಿಗೆ ದೊಡ್ಡವರ ಹಾಗೆ ಚಿಕ್ಕ ಮಕ್ಕಳು ತಮ್ಮ ತೊಂದರೆಯನ್ನು ಹೇಳಿಕೊಳ್ಳುವದಿಲ್ಲ ಆದ್ದರಿಂದ ಇವುಗಳನ್ನು ಸರಿಯಾದ ಸಮಯದಲ್ಲಿ ಪತ್ತೆಹಚ್ಚುವಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕಾರಣ ಮಕ್ಕಳು ಪುಸ್ತಕವನ್ನು ಹತ್ತಿರ ಹಿಡಿದು ಓದುವದು, ಟಿ.ವಿ. ಯನ್ನು ಹತ್ತಿರದಿಂದ ನೋಡುವದು, ಕಣ್ಣುಗಳನ್ನು ಉಜ್ಜುವದು, ಕಣ್ಣುಗಳಲ್ಲಿ ನೀರು ಬರುವದು, ಕಣ್ಣು ಕೆಂಪಗಾಗುವದು, ಮೆಳ್ಳಗಣ್ಣು, ಕರಿಗುಡ್ಡೆಯ ಕಲೆಗಳು ಈ ತರಹದ ಸಾಮಾನ್ಯ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಕೆಲವು ಸಲಹೆಗಳು
ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಅಥವಾ ಸಾಧ್ಯವಾದಷ್ಟು ಬಳಸದೆ ಇರುವದು ಉತ್ತಮ, ಸೂರ್ಯನ ಬೆಳಕಿನಲ್ಲಿ ಆಟವಾಡುವುದು, ಕಣ್ಣುಗಳನ್ನು ಉಜ್ಜದೇ ಇರುವದು, ಮೆಳ್ಳುಗಣ್ಣನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯುವುದು, ಕಣ್ಣಿಗೆ ಯಾವುದೇ ತೊಂದರೆಯಾದಲ್ಲಿ ತಕ್ಷಣ ವೈದ್ಯರನ್ನು ಕಾಣುವದು, ಶಾಲೆಗೆ ಹೋಗುವ ಎಲ್ಲ ಮಕ್ಕಳಿಗೆ ವರ್ಷದಲ್ಲಿ ಒಂದು ಸಲ ಕಣ್ಣಿನ ತಪಾಸಣೆ ಮಾಡಿಸುದು ಉತ್ತಮ ಎಂದು ಅಭಿಪ್ರಾಯ ಪಟ್ಟರು.
ಧಾರವಾಡದ ವಿವಿಧ ಶಾಲಾ ವಿಧ್ಯಾರ್ಥಿಗಳು ಪಾಲಕರೊಂದಿಗೆ ಆಗಮಿಸಿ ನೇತ್ರ ತಪಾಸಣೆಯಲ್ಲಿ ಭಾಗವಹಿಸಿದರು.
M M Joshi Eye Hospital Hubbali conducts free eye checkup on childrens day
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm