ಬ್ರೇಕಿಂಗ್ ನ್ಯೂಸ್
20-04-22 02:22 pm Source: Vijayakarnataka ಸಿನಿಮಾ
ಲವಲವಿಕೆ ಸುದ್ದಿಲೋಕ
ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಾದ ‘ಆರ್ಆರ್ಆರ್’ (RRR) ಮತ್ತು ‘ಕೆಜಿಎಫ್ ಚಾಪ್ಟರ್- 2’ (KGF Chapter 2) ಯಶಸ್ಸು, ಬಹುಭಾಷೆಯಲ್ಲಿ ತಯಾರಾಗುತ್ತಿರುವ ಕೆಲ ಸಿನಿಮಾಗಳ ಜವಾಬ್ದಾರಿ ಹೆಚ್ಚಿಸಿದೆ. ಇದಕ್ಕೆ ಪೂರಕವಾಗಿ ಹಲವು ತಂಡಗಳು ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ. ನಿರ್ದೇಶಕ ಆರ್. ಚಂದ್ರು ಸಹ ತಮ್ಮ‘ಕಬ್ಜ’ (Kabza Movie) ಸಿನಿಮಾವನ್ನು ಏಳು ಭಾಷೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಇದರ ಮೇಕಿಂಗ್ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
‘ಕಬ್ಜ’ ಸಿನಿಮಾವನ್ನು ದಸರಾ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲು ಚಂದ್ರು ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ.
‘ಆರ್ಆರ್ಆರ್ ಮತ್ತು ಕೆಜಿಎಫ್ ಚಾಪ್ಟರ್- 2 ಸಿನಿಮಾಗಳ ಯಶಸ್ಸು ನಮ್ಮಂತಹ ಫಿಲಂ ಮೇಕರ್ಸ್ಗೆ ಕೊಂಚ ಒತ್ತಡ ಮತ್ತು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದೆ. ನಾನು ಬಜೆಟ್ ವಿಚಾರದಲ್ಲಿ ಮತ್ತು ಸಿನಿಮಾದ ಕ್ಯಾನ್ವಾಸ್ ವಿಚಾರದಲ್ಲಿ ಯಾವುದೇ ರೀತಿಯಲ್ಲಿಯೂ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಸ್ಕ್ರಿಪ್ಟ್ ವಿಚಾರದಲ್ಲಿ ಮತ್ತೆ ಮತ್ತೆ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಹೊಸ ಫೈಟ್ಗಳನ್ನು ಮತ್ತು ಸೀನ್ಗಳನ್ನು ಸಿನಿಮಾದಲ್ಲಿ ಪರಿಚಯಿಸುತ್ತಿದ್ದೇನೆ’ ಎನ್ನುತ್ತಾರೆ ಚಂದ್ರು.
‘ಈ ಚಿತ್ರದಲ್ಲಿಉಪೇಂದ್ರ ನಾಯಕರಾಗಿ ನಟಿಸುತ್ತಿದ್ದಾರೆ. ಅವರ ಜತೆ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿದ್ದಾರೆ. ಇವರೆಲ್ಲರ ಜತೆಗೆ ಬಾಲಿವುಡ್ ನಟರಾದ ಡ್ಯಾನಿಶ್ ಅಖ್ತರ್ ಸೈಫಿ, ನವಾಬ್ ಶಾ, ಕಬೀರ್ ಸಿಂಗ್ ದುಹಾನ್, ದಕ್ಷಿಣ ಭಾರತದ ಖ್ಯಾತ ನಟ ಮುರಳಿಕೃಷ್ಣ ಹೀಗೆ ಹಲವರು ನಟಿಸುತ್ತಿದ್ದಾರೆ’ ಎನ್ನುವುದು ನಿರ್ದೇಶಕ ಚಂದ್ರು ಮಾತು.
‘ಈ ಚಿತ್ರದಲ್ಲಿ ಶ್ರೀಯಾ ಸರಣ್ ನಟಿಸುತ್ತಿದ್ದು, ಅವರ ಕಾಸ್ಟ್ಯೂಮ್ ಚಿತ್ರದ ಪ್ರಮುಖ ಹೈಲೈಟ್. 3.5 ಲಕ್ಷ ಮೌಲ್ಯದ ಸೀರೆ ಮತ್ತು 1 ಕೋಟಿ ರೂಪಾಯಿಯ ಡೈಮಂಡ್ ಆಭರಣಗಳನ್ನು ಸಿನಿಮಾದಲ್ಲಿ ಅವರಿಗೆ ಬಳಸಿದ್ದೇವೆ. ಈ ಚಿತ್ರವನ್ನು ಎಂಟಿಬಿ ನಾಗರಾಜ್ ಅರ್ಪಿಸುತ್ತಿದ್ದು, ನಾನು ನಿರ್ಮಾಣದ ಹೊಣೆ ಹೊತ್ತಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಆರ್.ಚಂದ್ರು.
'ನಾನು ಕಬ್ಜ ಸಿನಿಮಾ ವಿಚಾರದಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಆಗುತ್ತಿಲ್ಲ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದ್ದೇನೆ' ಎಂದು ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ.
ಪರಭಾಷೆ ನಟರು
ಟಾಲಿವುಡ್ನ ಎಲ್ಲಾ ಸ್ಟಾರ್ಗಳ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮುರಳಿ ಶರ್ಮ ಮತ್ತು ಅಲ್ಲಿನ ಖ್ಯಾತ ಸಂಭಾಷಣೆಕಾರ, ನಟ ಪೋಸಾನಿ ಕೃಷ್ಣ ಮುರಳಿ ಅವರೂ ಕೂಡ ‘ಕಬ್ಜ’ ಚಿತ್ರದಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Pan India Movie Kabza To Release In 7 Languages Says Director R Chandru.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm