ಬ್ರೇಕಿಂಗ್ ನ್ಯೂಸ್
12-04-22 01:52 pm Source: Vijayakarnataka ಸಿನಿಮಾ
ತಾರಾಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಕುರಿತಾದ ಸುದ್ದಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ‘ರಲಿಯಾ’ ಎಂಬ ಹ್ಯಾಷ್ಟ್ಯಾಗ್ನಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿದೆ. ರಣಬೀರ್ ಮತ್ತು ಆಲಿಯಾ ಹೆಸರಿನ ಮೊದಲಾಕ್ಷರವನ್ನು ಜೋಡಿಸಿರುವ ರಲಿಯಾ ಎಂಬ ಪದದಲ್ಲಿ ಅವರ ಮದುವೆ ವಿವರಗಳನ್ನು ಜನರು ಪೋಸ್ಟ್ ಮಾಡುತ್ತಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯು ನಟನ ತಂದೆ, ಹಿರಿಯ ನಟ ರಿಷಿ ಕಪೂರ್ ( Rishi Kapoor ) ಮತ್ತು ತಾಯಿ, ಹಿರಿಯ ನಟಿ ನೀತೂ ಸಿಂಗ್ ಮದುವೆಯಾಗಿದ್ದ ಮುಂಬಯಿಯ ಆರ್ಕೆ ಹೌಸ್ನಲ್ಲಿ ಮುಂದಿನ ವಾರ ನಡೆಯಲಿದೆ. ಕಪೂರ್ ಕುಟುಂಬದ ಪೂರ್ವಜರ ಮನೆಯಾಗಿರುವ ಈ ತಾಣ ಏಪ್ರಿಲ್ 14ರಂದು ‘ರಲಿಯಾ’ (ರಣಬೀರ್ ಕಪೂರ್, ಆಲಿಯಾ ಭಟ್ ) ಮದುವೆಗೆ ಸಾಕ್ಷಿಯಾಗಲಿದೆ. ಆದರೆ ಈಗ ಮದುವೆಯ ದಿನಾಂಕ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸೆಕ್ಯುರಿಟಿ ಕಾರಣಕ್ಕೆ ಮದುವೆ ದಿನಾಂಕ ಬದಲಾಯಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಆದಷ್ಟು ಬೇಗ ಡೇಟ್ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮಾತನಾಡಿ, "ಯಾವಾಗ ಮದುವೆ ಆಗತ್ತೆ ಅಂತ ಗೊತ್ತಿಲ್ಲ, ಆದಷ್ಟು ಬೇಗ ಮದುವೆ ಆಗಲಿ" ಎಂದಿದ್ದಾರೆ.
ಮದುವೆಯ ಸಿದ್ಧತೆಗಳು ಆರಂಭಗೊಂಡಿದ್ದು, ಮದುವೆ ದಿನ ಆಲಿಯಾ ಭಟ್ ( Alia Bhatt ), ಫ್ಯಾಷನ್ ಡಿಸೈನರ್ ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಡಿಸೈನರ್ ಲೆಹೆಂಗಾದಲ್ಲಿ ಮಿಂಚಲಿದ್ದಾರೆ. ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮಗಳಿಗೆ ಅವರು ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಡಿಸೈನರ್ ವೇರ್ಗಳಲ್ಲಿ ಕಂಗೊಳಿಸಲಿದ್ದಾರೆ.
ನಟ ರಣಬೀರ್ ಕಪೂರ್ ( Randir Kapoor ) ಬ್ಯಾಚುಲರ್ ಪಾರ್ಟಿಯ ಸಿದ್ಧತೆಯಲ್ಲಿದ್ದು, ಅದರಲ್ಲಿ ಅವರ ಆತ್ಮೀಯ ಗೆಳೆಯರಾದ ಅರ್ಜುನ್ ಕಪೂರ್, ಆದಿತ್ಯ ರಾಯ್ ಕಪೂರ್, ಅಯಾನ್ ಮುಖರ್ಜಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಈ ಮೊದಲು ಈ ಸಿನಿಮಾ ಬಿಡುಗಡೆಯಾದ ಮೇಲೆ ಅಂದರೆ ಸೆಪ್ಟೆಂಬರ್ನಲ್ಲಿ ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ಆದರೆ ಆಲಿಯಾ ಭಟ್ ಅವರ ಅಜ್ಜ ಅಂದರೆ ತಾಯಿಯ ತಂದೆಯ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರು ತಮ್ಮ ಮೊಮ್ಮಗಳ ಮದುವೆ ನೋಡುವ ಇಚ್ಛೆ ವ್ಯಕ್ತಪಡಿಸಿದ ಕಾರಣ ಮದುವೆ ಬೇಗ ನಡೆಯುತ್ತಿದೆಯಂತೆ. ಮದುವೆಯ ನಂತರ ರಣಬೀರ್ ಮತ್ತು ಆಲಿಯಾ ಸ್ವಿಟ್ಜರ್ಲೆಂಡ್ಗೆ ಹನಿಮೂನ್ ಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಆಲಿಯಾ ಭಟ್, ರಣವೀರ್ ಸಿಂಗ್ ಕೂಡ ಸಿನಿಮಾ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ.
Bollywood Actor Ranbir Kapoor Alia Bhatt Wedding Date Postponed.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm