ಬ್ರೇಕಿಂಗ್ ನ್ಯೂಸ್
08-04-22 07:42 pm Mangalore Correspondent ಸಿನಿಮಾ
ಮಂಗಳೂರು, ಎ.8: ಸಾಹಿತ್ಯ, ಕಲೆ, ಸಿನಿಮಾ, ರಂಗಭೂಮಿ ಹೀಗೆ ಯಾವುದೇ ಪ್ರಕಾರಗಳೇ ಇರಲಿ, ರಸಾನುಭೂತಿಯೇ ಧ್ಯೇಯವಾಗಿರಬೇಕು. ರಸ ಇಲ್ಲದೇ ಇರುವುದು ಜನರನ್ನು ತಲುಪುವುದಿಲ್ಲ. ಕಾಶ್ಮೀರದ ಬಗ್ಗೆ ಹತ್ತು ಹಲವು ಪುಸ್ತಕಗಳು ಬಂದಿದ್ದರೂ, ಒಂದು ಸಿನಿಮಾ ಹೆಚ್ಚು ಪ್ರಚಾರಕ್ಕೆ ಬರಲು ಕಾರಣವಾಗಿದ್ದು ಅಲ್ಲಿ ಅಭಿವ್ಯಕ್ತವಾದ ರಸ, ಶ್ರಾವ್ಯ, ಕಲೆ. ಯಕ್ಷಗಾನ, ನಾಟಕ ಅಥವಾ ಯಾವುದೇ ಜನಪ್ರಿಯ ಸಾಹಿತ್ಯಗಳನ್ನು ನೋಡಿ, ಅವು ತಮ್ಮ ರಸಾನುಭೂತಿಯಿಂದಲೇ ಪ್ರಸಿದ್ಧಿಗೆ ಬಂದಿದ್ದನ್ನು ಕಾಣುತ್ತೇವೆ ಎಂದು ಶತಾವಧಾನಿ ಡಾ.ಆರ್ ಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್ 4ನೇ ಆವೃತ್ತಿಯ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮೊದಲ ಗೋಷ್ಠಿಯಲ್ಲಿ ಡಾ.ಗಣೇಶ್ ವಿಭಿನ್ನ ವಿಚಾರಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಭೈರಪ್ಪರು ಆವರಣ ಬರೆದಾಗ, ಆರೆಸ್ಸೆಸ್ ಹಿರಿಯರೊಬ್ಬರು ನಮಗೆ ಮಾಡಲಾಗದ್ದನ್ನು ನೀವು ಮಾಡಿದ್ದೀರಿ ಎಂದಿದ್ದರು. ಭೈರಪ್ಪರು ತಮ್ಮ ಸಾಹಿತ್ಯದಲ್ಲಿ ಸಂದೇಶದ ಜೊತೆಗೆ ರಸವನ್ನು ಕಟ್ಟಿಕೊಡುತ್ತಾರೆ. ಹಾಗೆಂದು, ರಸಾನುಭೂತಿಯ ಉದ್ದೇಶ ಇಟ್ಟುಕೊಂಡು ಯಾವುದೇ ಮೂಲ ಸಾಹಿತ್ಯವನ್ನು ತಿರುಚಿ ಮತ್ತೊಂದು ಪ್ರಕಾರ ರಚಿಸುವುದು ಅಪರಾಧ. ಕಾರ್ನಾಡರು ಮೃಚ್ಚಕಟಿಕ ಅನ್ನುವ ಸಂಸ್ಕೃತ ಸಾಹಿತ್ಯವನ್ನು ಆಧರಿಸಿ ಅದಕ್ಕೆ ತದ್ವಿರುದ್ಧ ಸಿನಿಮಾ ಮಾಡಿದ್ದರು. ಮೂಲ ಸಾಹಿತ್ಯಕ್ಕಿಂತ ವಿರುದ್ಧವಾಗಿ ನಾಯಕಿಯೇ ಖಳನಾಯಕನ ಹಿಂದೆ ಹೋಗುವ ರೀತಿ ಚಿತ್ರಿಸಿದ್ದರು. ಆ ರೀತಿ ಮಾಡುವುದು ಮೂಲ ಸಾಹಿತ್ಯಕ್ಕೆ ಮಾಡುವ ಅಪಚಾರ ಎಂದು ಡಾ.ಗಣೇಶ್ ಹೇಳಿದರು.
ಅಕಾಡೆಮಿ, ವಿವಿಗಳಿಗೆ ಸಾಹಿತ್ಯದ ಚಿಂತೆಯಿಲ್ಲ
ಕನ್ನಡ ಸಾಹಿತ್ಯಕ್ಕೆ ಸರಕಾರದ ಕೊಡುಗೆ ಯಾವ ರೀತಿ ಇರಬೇಕು ಎನ್ನುವ ಅಜಕ್ಕಳ ಗಿರೀಶ್ ಭಟ್ ಮುಂದಿಟ್ಟ ಪ್ರಶ್ನೆಗೆ, ಸರಕಾರಗಳ ಅನುದಾನ, ಕೊಡುಗೆ ಎನ್ನುವುದನ್ನು ನಿರೀಕ್ಷಿಸುವುದೇ ತಪ್ಪು ಎನಿಸುತ್ತದೆ. ಯಾವುದೇ ಸಾಹಿತ್ಯ ಪರಂಪರೆಗೆ ಪ್ರೋತ್ಸಾಹ ಅನ್ನುವುದು ಅದು ಹೃದಯದಿಂದ ಬರಬೇಕು. ಖಾಸಗಿ ಮಂದಿಯೇ ಸರಕಾರಕ್ಕಿಂತ ಉತ್ತಮವಾಗಿ ಮಾಡುತ್ತಿದ್ದಾರೆ. ಸರಕಾರದಲ್ಲಿ ಇಷ್ಟೊಂದು ಪ್ರಾಧಿಕಾರ, ಅಕಾಡೆಮಿಗಳು, ವಿಶ್ವವಿದ್ಯಾನಿಲಯಗಳು, ಅನುದಾನಗಳು ಇದ್ದರೂ, ಸಾಹಿತ್ಯಕ್ಕೆ ಕೊಡುಗೆ ನೀಡುವಂಥದ್ದನ್ನು ಮಾಡಿಲ್ಲ. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಭಿಜಾತ ಕನ್ನಡಕ್ಕೆ ಪ್ರೋತ್ಸಾಹ ಅಂದರೆ ಸಂಸ್ಕೃತ ಪರವಾಗಿರುವುದು ಎಂಬ ಕೆಟ್ಟ ಪರಂಪರೆ ಬೆಳೆದುಬಂದಿದೆ. ಸಂಸ್ಕೃತ ಬಂದಲ್ಲಿ ಬ್ರಾಹ್ಮಣ ಸಂಸ್ಕೃತಿ ಅನ್ನುವ ವ್ಯಾಖ್ಯಾನಗಳಿವೆ. ವಿವಿಗಳಲ್ಲಿನ ಜಾತಿ ರಾಜಕೀಯದಿಂದಾಗಿ ಸಾಹಿತ್ಯದ ಪ್ರಾಕಾರಗಳಿಗೂ ಆದ್ಯತೆ ಸಿಗುತ್ತಿಲ್ಲ. ವಿವಿಗಳಲ್ಲಿ ತ್ರಿಪದಿ, ಷಟ್ಪಡಿ, ಸಾಂಗತ್ಯ, ಛಂಪೂ ಪ್ರಕಾರಗಳ ಬಗ್ಗೆ ಅವಧಾನಿಗಳನ್ನು ಕರೆದು ಗೋಷ್ಠಿ ಮಾಡಬಹುದು. ನಮ್ಮಲ್ಲಿ ಏಳೆಂಟು ಮಂದಿ ಅವಧಾನಿಗಳಿದ್ದಾರೆ. ನನಗೇನೂ ಬೇಕಿಲ್ಲ. ಆದರೆ ವಿವಿಗಳ ಮಂದಿಯಾಗಲೀ, ಅಕಾಡೆಮಿ ಆಗಲೀ ಯಾರು ಇವರನ್ನು ಕರೆದಿದ್ದಾರೆ. ಸಂಶೋಧನಾ ಆಧರಿತ ಕಾರ್ಯಕ್ರಮಗಳನ್ನೇ ವಿವಿಗಳಲ್ಲಿ ಮಾಡುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಮೊದಲ ಗೋಷ್ಠಿಯನ್ನು ಡಾ.ಅಜಕ್ಕಳ ಗಿರೀಶ್ ಭಟ್ ನಡೆಸಿಕೊಟ್ಟರು. ಉದ್ಘಾಟನೆ ಸಂದರ್ಭದಲ್ಲಿ ಕನ್ನಡದ ಕೀಲಿಮಣೆ ತಂತ್ರಜ್ಞ ನಾಡೋಜ ಕೆ.ಪಿ.ರಾವ್, ರಾಜ್ಯ ಸರಕಾರದ ಇ-ಗವರ್ನೆನ್ಸ್ ವಿಭಾಗದ ಮುಖ್ಯಸ್ಥ ಸುದರ್ಶನ ಬೇಳೂರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆಯುವ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಕನ್ನಡ, ಇಂಗ್ಲಿಷ್ ಭಾಷೆಯ ರಾಷ್ಟ್ರ ಮಟ್ಟದ ಸಾಹಿತಿಗಳು, ಚಿಂತಕರು ಪಾಲ್ಗೊಂಡಿದ್ದಾರೆ.
Shatavadhani Ganesh in Mangalore speaks about Kashmir files movie. Speaks how did the movie impact so widely even though there are hundreds of books on Kashmir.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm