ಬ್ರೇಕಿಂಗ್ ನ್ಯೂಸ್
14-09-20 12:54 pm Headline Karnataka News Network ಸಿನಿಮಾ
ಮುಂಬಯಿ, ಸಪ್ಟೆಂಬರ್ 13: ಕಂಗನಾ ರಣಾವತ್ ಅವರಿಗೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರ ಸರಕಾರ ಕಂಗನಾ ಅವರ ಕಚೇರಿ ಹಾಗು ಮನೆ ಧ್ವಂಸ ಗೊಳಿಸಿದ ಬಳಿಕ ಭಾರಿ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯ ಬಗ್ಗೆ ಕಂಗನಾ ಪ್ರಶ್ನಿಸುವ ಬಗೆ ಹಾಗು ತನಿಖೆಯ ದಿಕ್ಕು ತಪ್ಪಿಸಲು ಮಹಾರಾಷ್ಟ್ರ ಸರಕಾರ ಮಾಡಿರುವ ಕಸರತ್ತುಗಳ ವಿರುದ್ದ ತೊಡೆ ತಟ್ಟಿರುವ ಕಂಗನಾ ರಾಣಾವತ್ ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವಲ್ಲೇ ಜಸ್ಟ್ ಆಸ್ಕಿಂಗ್ ನ ಮೂಲಕ ವಿವಾದ ಸರಮಾಲೆಯನ್ನೇ ತೊಟ್ಟಿರುವ ನಟ ಪ್ರಕಾಶ್ ರಾಜ್ ಉರ್ಫ್ ರೈ, ಕಂಗನಾ ರಾಣಾವತ್ ಕಾಲು ಎಳೆಯೋಕೆ ಹೋಗಿ ಇದೀಗ ಸ್ವತಃ ಟ್ರೋಲ್ ಆಗಿದ್ದಾರೆ. ಸುಮ್ಮನೆ ಕೂರ್ಲಿಕ್ ಆಗದೇ ...... ಇರುವೆ ಬಿಟ್ಕೊಂಡ್ರಂತೆ. ಹೀಗಾಗಿದೆ ಪ್ರಕಾಶ್ ರೈ ಕತೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಬಳಿಕ ಬಾಲಿವುಡ್ ನಲ್ಲಿರುವ ನೆಪೋಟಿಸಂ ಬಗ್ಗೆ ಕಂಗನಾ ಧ್ವನಿ ಎತ್ತಿದ್ದರು. ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ನಡುವೆ ಕಂಗನಾ ಅವರನ್ನು ಟೀಕಿಸುವ ಭರದಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ಕಂಗನಾ ರಾಣಾವತ್ ಮಣಿಕರ್ಣಿಕಾ ಚಿತ್ರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಅಭಿನಯಿಸಿದ್ದ ಮಾತ್ರಕ್ಕೆ ಇದೀಗ ನಿಜ ಜೀವನದಲ್ಲೂ ಲಕ್ಷ್ಮೀಬಾಯಿ ಅಂದು ಕೊಂಡಿದ್ದಾರಾ ? ಎಂದು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದರು. ಅದರೊಂದಿಗೆ ದೀಪಿಕಾ ಪಡಕೋಣೆ, ಹೃಿತಿಕ್ ರೋಶನ್, ಶಾರುಕ್ ಖಾನ್, ಮೊದಲಾದವರು ನಟಿಸಿದ ಚಿತ್ರಗಳ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಇಟ್ಟುಕೊಂಡೇ ನೆಟ್ಟಿಗರು ಪ್ರಕಾಶ್ ರೈ ಅವರನ್ನೇ ಟ್ರೋಲ್ ಮಾಡಿದ್ದಾರೆ.
ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಮೂಲಕ ಪ್ರಕಾಶ್ ರೈ ಟ್ವೀಟ್ ಮಾಡಿರೋದಕ್ಕೆ ಸಾಕಷ್ಟು ಪರ ವಿರೋಧದ ಟೀಕೆಗಳು ಕೇಳಿಬರುತ್ತಿವೆ.
Join our WhatsApp group for latest news updates
#justasking pic.twitter.com/LlJynLM1xr
— Prakash Raj (@prakashraaj) September 12, 2020
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm