ಬ್ರೇಕಿಂಗ್ ನ್ಯೂಸ್
02-12-21 09:25 pm HK Desk news ಸಿನಿಮಾ
ಬೆಂಗಳೂರು, ಡಿ.2 : ಕಂಟೆಂಟ್ ಬೇಸ್ಡ್ , ಸೋಷಿಯಲ್ ಮೆಸೇಜ್ ಇರುವಂಥ ಸಿನಿಮಾಗಳಿಗೆ ಅವುಗಳದ್ದೇ ಆದ ಮಹತ್ವವಿದೆ.. ಅಂತಹ ಸಿನಿಮಾಗಳಿಗೆಂದೇ ಸಾಕಷ್ಟು ಅಭಿಮಾನಿಗಳೂ ಇದ್ದಾರೆ… ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಸಿನಿಮಾಗಳು ಈಗೀಗ ಹೆಚ್ಚು ಯಶಸ್ಸು ಗಳಿಸುತ್ತಿವೆ. ಇಂತಹ ಸಿನಿಮಾಗಳಿಂದ ಸಮಾಜಕ್ಕೆ ಒಂದೊಳ್ಳೆ ಮೆಸೇಜನ್ನೂ ನೀಡಲಾಗುತ್ತದೆ. ಅದೇ ರೀತಿಯ ಸಿನಿಮಾ ಗರುಡ ಗಮನ ವೃಷಭ ವಾಹನದಿಂದಾಗಿ ರಾಜ್ ಶೆಟ್ಟಿ ಕರುನಾಡಿನಲ್ಲಿ ಮನೆ ಮಾತಾಗಿದ್ದಾರೆ.
ಅಂತಹದ್ದೇ ಒಂದು ಅದ್ಭುತ ಪರಿಕಲ್ಪನೆ ಹೊತ್ತಿರುವ ನಿರ್ದೇಶಕ YK ಅವರು ತಮ್ಮದೇ ಕಲ್ಪನೆಯಲ್ಲಿ ಹೊಸ ಸಿನಿಮಾ ಮಾಡಿದ್ದಾರೆ. ಸಿನಿಮಾಗೆ ನರಸಿಂಹ ಕುಲಕರ್ಣಿ ಬಂಡವಾಳ ಹೂಡಿದ್ದಾರೆ.. ಅಂದ್ಹಾಗೆ ಕನ್ನಡದ ಈ ಹೊಸ ಸಿನಿಮಾದ ಹೆಸರು ಗಿಲ್ಕಿ. ಒಂದು ಅದ್ಭುತ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ , ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾ ಗಿಲ್ಕಿ.. ಈ ಸಿನಿಮಾದ ಆ ದೇವರೇ ಹಾಡು ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು.. ಈ ಹಾಡು ಜನರ ಹೃದಯ ಕರಗಿಸುವಂತಿದೆ..
ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ.. ತೀರ ಸೇರೋ ಟೈಟಲ್ ನ ಈ ಹಾಡು ನೋಡುಗರ ಮನಸ್ಸು ನಾಟುವಂತಿದೆ. ಪ್ರತಿಯೊಬ್ಬರ ನಟನೆ ನಮ್ಮನ್ನ ಅವರದ್ದೇ ಪ್ರಪಂಚಕ್ಕೆ ಕೊಂಡೊಯ್ಯುವಂತಿದೆ.
ಅಂದ್ಹಾಗೆ ಗಿಲ್ಕಿ ಸಿನಿಮಾದ ಹಾಡನ್ನ ಮಂಗಳೂರಿನಲ್ಲಿ ಗುರುಡ ಗಮನ ವೃಷಭ ವಾಹನ ಸಿನಿಮಾದ ನಟ ಕಮ್ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿದ್ದು ಹೊಸ ಸಿನಿಮಾಗೆ ಶುಭ ಕೋರಿದ್ದಾರೆ. ವಾಸುಕಿ ವೈಭವ್ ಅವರ ಸಾಹಿತ್ಯ , ಆದಿಲ್ ನಡಾಫ್ ಅವರ ಸಂಗೀತ ಸಂಯೋಜನೆಯ ಹಾಡಿಗೆ ಭರತ್ ನಾಯಕ್ ಅವರ ಧ್ವನಿ ಜೀವ ತುಂಬಿದೆ..
ಸಮಾಜದಿಂದ ದೂರ ಇರುವ ಮೂವರು ತಮ್ಮದೇ ಆದ ಅದ್ಭುತ ಪ್ರಪಂಚ ಕಟ್ಟಿಕೊಳ್ಳುವ ಅದ್ಭುತ ಪರಿಕಲ್ಪನೆಯಲ್ಲಿ ನಿರ್ದೇಶಕ YK ಅವರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.. ಮಾನಸಿಕ ಅಸ್ವಸ್ಥ ಪಾತ್ರಧಾರಿ, ವಿಶೇಷ ಚೇತನ ಪಾತ್ರಧಾರಿಯ ಪಾತ್ರಗಳಲ್ಲಿ ನಟ ತಾರಕ್ ಪೊನ್ನಪ್ಪ , ನಟಿ ಚೈತ್ರಾ ಅದ್ಭುತವಾಗಿ ನಟಿಸಿದ್ದಾರೆ..
AS ಕಾಮಧೇನು ಫಿಲಮ್ಸ್ ಬ್ಯಾನರ್ ನಡಿ ಚಿತ್ರ ಮೂಡಿಬಂದಿದ್ದು ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್ , ಗೌತಮ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
July movie to come soon on Screens, song released by Raj B Shetty. The movie is under then banner of A S Kamdenu films.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm