ಬ್ರೇಕಿಂಗ್ ನ್ಯೂಸ್
17-11-21 02:00 pm HK News Desk ಸಿನಿಮಾ
ಚೆನ್ನೈ, ನ.17: ಒಂದೆಡೆ ಜೈಭೀಮ್ ಸಿನಿಮಾ ದೇಶಾದ್ಯಂತ ಹಿಟ್ ಆಗಿ ಭಾರೀ ಜನ ಮೆಚ್ಚುಗೆ ಪಡೆಯುತ್ತಿದ್ದರೆ, ತಮಿಳುನಾಡಿನಲ್ಲಿ ವನ್ನಿಯಾರ್ ಸಮುದಾಯವನ್ನು ಸಿನಿಮಾದಲ್ಲಿ ಕೀಳಾಗಿ ಚಿತ್ರಿಸಲಾಗಿದೆ ಎಂದು ಒಂದು ವರ್ಗ ಸಿನಿಮಾ ತಂಡದ ವಿರುದ್ಧ ಬೀದಿಗಿಳಿದಿದೆ. ಇದಕ್ಕಾಗಿ ಚೆನ್ನೈನಲ್ಲಿರುವ ಸಿನಿಮಾ ನಟ ಸೂರ್ಯ ಅವರ ಮನೆಗೆ ಶಸ್ತ್ರಧಾರಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಇದೇ ವೇಳೆ, ಹಿಂದುಳಿದ ಜನರನ್ನು ಪ್ರತಿನಿಧಿಸುವ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ರಾಜಕೀಯ ಪಕ್ಷದ ಮೈಲಾದುರೈ ಜಿಲ್ಲಾ ಸೆಕ್ರಟರಿ ಪನ್ನೀರ್ ಸೆಲ್ವಂ ಎಂಬವರು, ನಟ ಸೂರ್ಯ ತಮ್ಮ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಆತನ ಮೇಲೆ ದಾಳಿ ನಡೆಸಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಎರಡು ದಿನಗಳ ಹಿಂದೆ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಮೈಲಾದುರೈನಲ್ಲಿ ಥಿಯೇಟರಿಗೆ ನುಗ್ಗಿದ್ದ ಕಾರ್ಯಕರ್ತರು ಬಲವಂತವಾಗಿ ಜೈಭೀಮ್ ಚಿತ್ರದ ಪ್ರದರ್ಶನಕ್ಕೆ ತಡೆಯೊಡ್ಡಿದ್ದರು. ಇದಲ್ಲದೆ, ನಟ ಸೂರ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರನ್ನೂ ನೀಡಿದ್ದಾರೆ.

ಇನ್ನೊಂದು ಕಡೆ ವನ್ನಿಯಾರ್ ಸಮುದಾಯವನ್ನು ಪ್ರತಿನಿಧಿಸುವ ವನ್ನಿಯಾರ್ ಸಂಗಂ ವತಿಯಿಂದ ಸಿನಿಮಾ ತಂಡದ ವಿರುದ್ಧ ಲೀಗಲ್ ನೋಟೀಸ್ ನೀಡಲಾಗಿದೆ. ಸಮುದಾಯದ ಸಿಂಬಲನ್ನು ಬೆಂಕಿಗೆ ಹಾಕುವ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಬೇಕು. ಅಲ್ಲದೆ, ಸಮುದಾಯಕ್ಕೆ ಅಗೌರವ ಸೂಚಿಸುವ ರೀತಿ ಚಿತ್ರಿಸಿದ್ದಕ್ಕೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಹೇಳಿ 5 ಕೋಟಿ ರೂಪಾಯಿ ಪರಿಹಾರ ಕೇಳಿ ಡಿಮ್ಯಾಂಡ್ ಮುಂದಿಟ್ಟಿದೆ.
1995ರಲ್ಲಿ ತಮಿಳುನಾಡಿನಲ್ಲಿ ಪೊಲೀಸರ ಚಿತ್ರಹಿಂಸೆಗೆ ಒಳಗಾಗಿ ಪರಿಶಿಷ್ಟ ವರ್ಗದ ಯುವಕನೊಬ್ಬ ಸಾವನ್ನಪ್ಪಿದ ನೈಜ ಘಟನೆ ಆಧರಿಸಿ, ಜೈಭೀಮ್ ಚಿತ್ರವನ್ನು ಮಾಡಲಾಗಿತ್ತು. ವಾಸ್ತವ ಕತೆಯ ಜೊತೆ ಕಾಲ್ಪನಿಕ ದೃಶ್ಯಗಳನ್ನು ಹೆಣೆದು ಪೊಲೀಸರ ಚಿತ್ರಹಿಂಸೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಚಿತ್ರದಲ್ಲಿ ವನ್ನಿಯಾರ್ ಸಮುದಾಯದ ಬಗ್ಗೆ ಹೆಸರೆತ್ತಿ ಅಗೌರವ ಸೂಚಿಸುವ ರೀತಿ ಚಿತ್ರಿಸಲಾಗಿದೆ ಎನ್ನುವುದು ವನ್ನಿಯಾರ್ ಸಂಗಂ ಆರೋಪ. ವನ್ನಿಯಾರ್ ಅಥವಾ ವನ್ನಿಯಾ ಕುಲ ಕ್ಷತ್ರಿಯ ಎನ್ನುವ ಹೆಸರಲ್ಲಿ ಗುರುತಿಸಲ್ಪಟ್ಟ ತೀರಾ ಹಿಂದುಳಿದ ಪರಿಶಿಷ್ಟ ವರ್ಗದ ಸಮುದಾಯದ ಜನರು ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ವಿವಾದ ಕೇಳಿಬರುತ್ತಿದ್ದಂತೆ ತಮಿಳು ಚಿತ್ರರಂಗದ ಹೆಚ್ಚಿನ ನಟ, ನಿರ್ದೇಶಕರು ಜೈಭೀಮ್ ಚಿತ್ರ ತಂಡದ ಪರವಾಗಿ ನಿಂತಿದ್ದಾರೆ. ಅಲ್ಲದೆ, ದಕ್ಷಿಣ ಭಾರತ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಪಿಎಂಕೆ ಪಕ್ಷದ ಸ್ಥಾಪಕ, ಮಾಜಿ ಸಚಿವ ಅಂಬುಮನಿ ರಾಮದಾಸ್ ಅವರಿಗೆ ಪತ್ರ ಬರೆದು, ಜೈಭೀಮ್ ಚಿತ್ರದ ವಿರುದ್ಧ ಕಾರ್ಯಕರ್ತರು ಪ್ರತಿಭಟನೆ ನಡೆಸದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
In a controversial move, the Nagapattinam district secretary of Pattali Makkal Katchi (PMK), Sithamalli Pazhani Saamy, has announced a cash reward of Rs one lakh to any youngster who attacks actor Surya. The announcement was in response to Surya's recently released movie - Jai Bhim.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am