ಬ್ರೇಕಿಂಗ್ ನ್ಯೂಸ್
01-10-21 04:57 pm Filmbeat ಸಿನಿಮಾ
ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸತೀಶ್ ತಾಯಿ ಚಿಕ್ಕತಾಯಮ್ಮ ಇಂದು (ಅಕ್ಟೋಬರ್ 1) ಬೆಳಗ್ಗೆ ಆರ್ ಆರ್ ನಗರ ನಿವಾಸದಲ್ಲಿ ಕೊನೆಯುಸಿರೆದರು ಎನ್ನುವ ಸುದ್ದಿ ತಿಳಿದುಬಂದಿದೆ. ಚಿಕ್ಕತಾಯಮ್ಮ ಅವರಿಗೆ 85 ವರ್ಷ ವಯಸ್ಸಾಗಿತ್ತು.
ಚಿಕ್ಕತಾಯಮ್ಮ ಪುತ್ರ ಸತೀಶ್ ನೀನಾಸಂ ಅವರ ಜೊತೆಯೇ ಬೆಂಗಳೂರಿನ ಆರ್ ಆರ್ ನಗರದಲ್ಲಿ ವಾಸವಿದ್ದರು. ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಅವರ ಸ್ವಂತ ಊರಾದ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇವತ್ತೇ ಅವರ ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಪಾರ್ಥಿವ ಶರೀರ ಬೆಂಗಳೂರಿನಿಂದ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ಅವರು ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸತೀಶ್ ಸಿನಿಮಾ ಕೆಲಸಗಳ ಜೊತೆಗೆ ತಾಯಿಯನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಆದರೀಗ ಬಾರದಲೋಕದ ಕಡೆ ಪಯಣ ಬೆಳೆಸಿದ್ದಾರೆ. 85 ವರ್ಷದ ಚಿಕ್ಕತಾಯಮ್ಮ ಅವರಿಗೆ ಒಟ್ಟು 8 ಜನ ಮಕ್ಕಳಿದ್ದರು. ಅವರಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು.
ಇತ್ತೀಚಿಗಷ್ಟೆ ಸತೀಶ್ ಗೆಳೆಯ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದರು. ಗೆಳೆಯನ ಅಗಲಿಕೆಯ ನೋವು ಮಾಸುವ ಮುನ್ನವೇ ತಾಯಿಯನ್ನು ಕಳೆದುಕೊಂಡು ಮತ್ತಷ್ಟು ದುಃಖದಲ್ಲಿದ್ದಾರೆ. ಸತೀಶ್ ತಾಯಿಯ ನಿಧನಕ್ಕೆ ಅಭಿಮಾನಿಗಳು ಮತ್ತು ಸಿನಿ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಇನ್ನು ಸತೀಶ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೋದ್ರ, ದಸರ, ಮೈ ನೇಮ್ ಈಸ್ ಸಿದ್ದೇಗೌಡ, ಪರಿಮಳ ಲಾಡ್ಜ್, ಪೆಟ್ರೋಮ್ಯಾಕ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸತೀಶ್ ನಟಿಸುತ್ತಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm