ಬ್ರೇಕಿಂಗ್ ನ್ಯೂಸ್
24-02-21 12:22 pm Source: FILMIBEAT ಸಿನಿಮಾ
ಕೆಜಿಎಫ್ ಚಾಪ್ಟರ್ 2 ಚಿತ್ರದ ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿದೆ. ಕನ್ನಡದಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸೀಕ್ವೆಲ್ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಜುಲೈ 16 ರಂದು ಕೆಜಿಎಫ್ ಸಿನಿಮಾ ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಈಗಾಗಲೇ ಭಾರಿ ಮೊತ್ತಕ್ಕೆ ಹಿಂದಿ ವಿತರಣೆ ಹಕ್ಕು ಮಾರಾಟ ಆಗಿದೆ.
ಈ ಕಡೆ ಸೌತ್ ಇಂಡಿಯಾದಲ್ಲಿ ಕೆಜಿಎಫ್ ಹವಾ ಹೆಚ್ಚಿದ್ದು, ತೆಲುಗು ವರ್ಷನ್ ವಿತರಣೆ ಹಕ್ಕು ದಾಖಲೆ ಬೆಲೆಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಚಾಪ್ಟರ್ 1 ಸಿನಿಮಾ ರಿಲೀಸ್ ಮಾಡಿದ್ದ ವಿತರಕ ಈ ಸಲ ಹಿಂದೆ ಸರಿದಿದ್ದು, ಮತ್ತೊಬ್ಬ ಸ್ಟಾರ್ ನಿರ್ಮಾಪಕ ಕೆಜಿಎಫ್ ಹಕ್ಕು ಖರೀದಿಸಿದ್ದಾರೆ. ಹಾಗಾದ್ರೆ, ಕೆಜಿಎಫ್ ಚಿತ್ರದ ತೆಲುಗು ವಿತರಣೆ ಹಕ್ಕಿಗೆ ನೀಡಿದ ಹಣವೆಷ್ಟು? ಮುಂದೆ ಓದಿ...
ವರಾಹಿ ಬದಲು ದಿಲ್ ರಾಜು?
ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗು ಭಾಷೆಯಲ್ಲಿ ವರಾಹಿ ಸಂಸ್ಥೆ ಬಿಡುಗಡೆ ಮಾಡಿತ್ತು. ಇದೀಗ, ಚಾಪ್ಟರ್ 2ರಿಂದ ವರಾಹಿ ಸಂಸ್ಥೆ ಹಿಂದೆ ಸರಿದಿದೆ. ಕೆಜಿಎಫ್ ಚಿತ್ರತಂಡ ಹೆಚ್ಚು ಹಣ ಬೇಡಿಕೆಯಿಟ್ಟ ಕಾರಣ ವಿತರಣೆಯಿಂದ ಹಿಂದೆ ಹೆಜ್ಜೆಯಿಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದೀಗ, ಚಾಪ್ಟರ್ 2 ಚಿತ್ರವನ್ನು ತೆಲುಗಿನಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ರಿಲೀಸ್ ಮಾಡಲಿದ್ದಾರೆ.

ಭಾರಿ ಮೊತ್ತಕ್ಕೆ ಕೆಜಿಎಫ್ ತೆಲುಗು ಹಕ್ಕು?
ಸಾಕ್ಷಿ ವೆಬ್ಸೈಟ್ ವರದಿ ಮಾಡಿರುವಂತೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ದಿಲ್ ರಾಜು ಅವರು ವಿತರಣೆ ಮಾಡಲಿದ್ದಾರೆ. ಸದ್ಯದ ವರದಿ ಪ್ರಕಾರ ಸುಮಾರು 65 ಕೋಟಿ ಹಣ ನೀಡಿ ಕೆಜಿಎಫ್ ಚಾಪ್ಟರ್ 2 ಹಕ್ಕು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
5 ಕೋಟಿಗೆ ಸೇಲ್ ಆಗಿತ್ತು ಚಾಪ್ಟರ್ 1?
ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 1 ಸಿನಿಮಾದ ತೆಲುಗು ವಿತರಣೆ ಹಕ್ಕು ಕೇವಲ 5 ಕೋಟಿಗೆ ಮಾರಾಟವಾಗಿತ್ತು. ತೆಲುಗು ವರ್ಷನ್ನಿಂದ ಸುಮಾರು 20 ಕೋಟಿ ಗಳಿಕೆ ಕಂಡಿತ್ತು ಎಂಬ ವರದಿ ಇದೆ. ಆದ್ರೀಗ, ಕೆಜಿಎಫ್ ಮೇಲಿನ ನಿರೀಕ್ಷೆ ಹೆಚ್ಚಾಗಿರುವುದರಿಂದ ಚಿತ್ರತಂಡ ಬೇಡಿಕೆ ಹೆಚ್ಚಿಸಿದೆ.

ಜುಲೈ 16ಕ್ಕೆ ಕೆಜಿಎಫ್
ಈ ಕಡೆ ತಮಿಳು ಭಾಷೆಯಲ್ಲೂ ಕೆಜಿಎಫ್ ಚಿತ್ರಕ್ಕೆ ಭಾರಿ ಕ್ರೇಜ್ ಇದ್ದು, ದಾಖಲೆ ಬೆಲೆಗೆ ವಿತರಣೆ ಹಕ್ಕು ಮಾರಾಟವಾಗಿದೆಯಂತೆ. ಆದರೆ, ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಇನ್ನುಳಿದಂತೆ ಜುಲೈ 16 ರಂದು ಸಿನಿಮಾ ರಿಲೀಸ್ ಆಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.
This News Article is a Copy of FILMIBEAT
18-06-26 01:25 pm
HK News Staffer
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 11 ಸ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
18-06-26 01:23 pm
HK News Staffer
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm