ಬ್ರೇಕಿಂಗ್ ನ್ಯೂಸ್
12-02-21 03:19 pm Source: FILMIBEAT Manjunatha C ಸಿನಿಮಾ
ನಟಿ ರಶ್ಮಿಕಾ ಮಂದಣ್ಣ ರ ಬಾಲಿವುಡ್ ಪಯಣ ಈಗಾಗಲೇ ಆರಂಭವಾಗಿದೆ. ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಅವರ ಬಾಲಿವುಡ್ ಪಯಣ ಆರಂಭವಾಗಿದ್ದು ಹಾಡೊಂದರ ಮೂಲಕ. ಆ ಹಾಡು ಈಗ ಬಿಡುಗಡೆ ಆಗಿದೆ.
ರ್ಯಾಪರ್ ಬಾದ್ಶಾ 'ಟಾಪ್ ಠಕ್ಕರ್' ಆಲ್ಬಂ ನ ಹಾಡಿಗೆ ಸೊಂಟ ಬಳುಕಿಸಿದ್ದಾರೆ ರಶ್ಮಿಕಾ ಮಂದಣ್ಣ. ಆ ಹಾಡಿನ ಚಿತ್ರೀಕರಣ ಮುಗಿಯುತ್ತಿದ್ದಂತೆ ಎರಡು ಹಿಂದಿ ಸಿನಿಮಾಗಳಿಂದ ರಶ್ಮಿಕಾ ಗೆ ಬುಲಾವ್ ಬಂದಿತ್ತು. ರಶ್ಮಿಕಾರ ಬಾಲಿವುಡ್ ಪಯಣ ಆರಂಭಕ್ಕೆ ನಾಂದಿಯಾಗಿದ್ದ 'ಟಾಪ್ ಠಕ್ಕರ್' ಹಾಡು ಇಂದು (ಫೆಬ್ರವರಿ 12) ಬಿಡುಗಡೆ ಆಗಿದೆ.
ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಿಸಿ, ಬಾದ್ ಶಾ, ರಶ್ಮಿಕಾ ಮಂದಣ್ಣ, ಅಮಿತ್ ಉಚ್ಚಾನಾ ನಟಿಸಿರುವ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ದಕ್ಷಿಣದ ಚೆಲುವೆಯಾಗಿದ್ದು, ಆಕೆಯ ಹಿಂದೆ ಕಳ್ಳರಾದ ಬಾದ್ ಶಾ, ಅಮಿತ್ ಉಚ್ಚಾನಾ ಬಿದ್ದಿದ್ದಾರೆ. ಆಕೆಯ ಮನಸ್ಸು ಗೆಲ್ಲುವ ಜೊತೆಗೆ ಆಕೆಯ ಸರವನ್ನೂ ದೋಚುವ ಉದ್ದೇಶ ಅವರದ್ದು.
ಆದರೆ ಚಾಲಾಕಿ ರಶ್ಮಿಕಾ ಮಂದಣ್ಣ ಅವರ ಯೋಚನೆಗಳನ್ನು ಫಲಿಸಲು ಬಿಡುವುದಿಲ್ಲ. ಅವರದ್ದೇ ಯೋಜನೆಯನ್ನು ಅವರಿಗೆ ತಿರುಗಿಸಿ ಸರ ಉಳಿಸಿಕೊಳ್ಳುತ್ತಾರೆ. ರಶ್ಮಿಕಾ ಜೊತೆಗೆ ಯುವನ್ ಶಂಕರ್ ರಾಜಾ ಸಹ ಹಾಡಿನಲ್ಲಿ ನಟಿಸಿದ್ದಾರೆ.
ಹಾಡಿಗೆ ಸಾಹಿತ್ಯವನ್ನು ಬಾದ್ ಶಾ ಬರೆದಿದ್ದಾರೆ. ಹಾಡಿನಲ್ಲಿ ಬರುವ ತಮಿಳು ಸಾಲುಗಳನ್ನು ನಯನತಾರಾ ಬಾಯ್ಫ್ರೆಂಡ್ ವಿಗ್ನೇಶ್ ಶಿವನ್ ಬರೆದಿದ್ದಾರೆ. ಹಾಡು ಬಿಡುಗಡೆ ಆದ ನಾಲ್ಕು ಗಂಟೆಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಬಾರಿ ಹಾಡನ್ನು ವೀಕ್ಷಿಸಲಾಗಿದೆ.
This News Article is a Copy of FILMIBEAT
09-07-25 04:12 pm
HK News Desk
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
Karnataka Ban Online Betting and Gambling: ಆನ...
08-07-25 05:01 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 07:37 pm
Mangalore Correspondent
ಮಂಗಳೂರಿನಲ್ಲಿ ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ...
09-07-25 06:53 pm
Mangalore Modern Fire Safety , Ullal Fire Sta...
09-07-25 06:20 pm
Rename Dakshina Kannada, Tulu: ವಿಜಯನಗರ ಕಾಲದಲ್...
08-07-25 09:33 pm
“Mission Possible: KMC Attavar Performs Life-...
08-07-25 03:37 pm
08-07-25 10:01 pm
Bengaluru Staffer
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm