ಬ್ರೇಕಿಂಗ್ ನ್ಯೂಸ್
11-02-21 12:56 pm Source: FILMIBEAT Manjunatha C ಸಿನಿಮಾ
ದೆಹಲಿ ರೈತ ಹೋರಾಟಕ್ಕೆ ಬಾಲಿವುಡ್ನ ಬಹುಪಾಲು ಸೆಲೆಬ್ರಿಟಿಗಳು ಬೆಂಬಲ ಸೂಚಿಸಿಲ್ಲ, ಕೆಲವರಂತೂ ರೈತ ಹೋರಾಟದ ವಿರುದ್ಧ ಮಾತನಾಡಿದ್ದಾರೆ. ಹಲವರು ಮೌನವಾಗಿದ್ದಾರೆ. ಆದರೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶಿವಣ್ಣ, 'ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ರೈತರು ಕೇಳಿದ್ದು ಬರೆದುಕೊಡ್ತಿದ್ದೆ. ಸರ್ಕಾರ ರೈತರ ಮನವಿಗೆ ಸ್ಪಂದಿಸಬೇಕು' ಎಂದು ಹೇಳಿದ್ದಾರೆ. ''ರೈತರು ರಸ್ತೆಯಲ್ಲಿ ಕುಳಿತು ಊಟ ಮಾಡುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತೆ. ಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ ಎನ್ನುತ್ತಾರೆ.
ಆದರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿ ಇಳಿಯೋದರಿಂದ ಏನೂ ಸಾಧ್ಯವಾಗಲ್ಲ, ಅದನ್ನು ಸರ್ಕಾರ ಬಗೆಹರಿಸಬೇಕು' ಎಂದಿದ್ದಾರೆ ಶಿವರಾಜ್ ಕುಮಾರ್.
'ಒಂದು ವೇಳೆ ನಾವು ಬೀದಿಗೆ ಇಳಿಯುವುದರಿಂದ ಸಮಸ್ಯೆ ಬಗೆಹರಿಯುವುದಾದರೆ ನಾವು ಸಿದ್ಧ. ಯಾರೇ ರೈತರ ಪರವಾಗಿ ನಿಂತರೆ ಬೆಂಬಲ ಇದೆ' ಎಂದಿದ್ದಾರೆ ಶಿವಣ್ಣ. ''ನಮ್ಮ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳೋಕೆ ಆಗುತ್ತಿಲ್ಲ, ಅಂತದ್ರಲ್ಲಿ ನಮ್ಮ ಕೈಯಲ್ಲಿ ಏನಿದೆ, ರೈತರ ಏನೇ ಮಾಡಿದರೂ ನಮ್ಮ ಬೆಂಬಲ ಕಂಡಿದ ಇದೆ.
ನನ್ನ ಕೈಯಲ್ಲಿ ಆಧಿಕಾರ ಇದ್ದಿದ್ದರೆ, ಎಲ್ಲವನ್ನೂ ಬರೆದು ಕೊಡ್ತಿದ್ದೆ'' ಎಂದಿದ್ದಾರೆ ಶಿವಣ್ಣ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಹೊಸ ಸ್ಟುಡಿಯೋದಲ್ಲಿ ನಟ ಶಿವರಾಜ್ ಕುಮಾರ್ ಅವರು ಹಾಡಿನ ರೆಕಾರ್ಡ್ ಮಾಡಿದರು. ರವಿಚಂದ್ರನ್ ನಟಿಸುತ್ತಿರುವ 'ಕನ್ನಡಿಗ' ಸಿನಿಮಾದ ಹಾಡಿಗೆ ಶಿವಣ್ಣ ದನಿಯಾದರು. ಆ ಸಮಯದಲ್ಲಿ ಎದುರಾದ ಮಾಧ್ಯಮಗಳೊಟ್ಟಿಗೆ ಶಿವಣ್ಣ ಮೇಲಿನಂತೆ ಮಾತನಾಡಿದ್ದಾರೆ.
ಶಿವರಾಜ್ ಕುಮಾರ್ ಅವರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ. ರೈತ ಹೋರಾಟದ ಬಗ್ಗೆ ಮಾತನಾಡಲು ಬಾಲಿವುಡ್ ನಟರೇ ಭಯ ಪಡುತ್ತಿರುವ ಹೊತ್ತಿನಲ್ಲಿ ಶಿವಣ್ಣ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿರುವುದಕ್ಕೆ ಅಭಿನಂದನೆಗಳು ವ್ಯಕ್ತವಾಗುತ್ತಿದೆ.
This News Article is a Copy of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am