ಬ್ರೇಕಿಂಗ್ ನ್ಯೂಸ್
09-02-21 03:19 pm Source: FILMIBEAT Shruthi Gk ಸಿನಿಮಾ
ಸ್ಯಾಂಡಲ್ ವುಡ್ ನ ಸುಂದರ ಜೋಡಿಗಳಲ್ಲಿ ಒಂದಾಗಿರುವ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ತಿಂಗಳು ಫೆಬ್ರವರಿ 14ರಂದು ಮಿಲನಾ ಮತ್ತು ಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಲವ್ ಮಾಕ್ಟೇಲ್ ಜೋಡಿಯ ಮದುವೆಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ.
ಈಗಾಗಲೇ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು, ಮಿಲನಾ ನಾಗರಾಜ್ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದಾರೆ. ಮದುವೆಯ ಮೊದಲ ಶಾಸ್ತ್ರದ ವಿಡಿಯೋವನ್ನು ಮಿಲನಾ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಮದುವೆ ಶಾಸ್ತ್ರಗಳು ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. ಮಿಲನಾ ನಾಗರಾಜ್ ಮತ್ತು ಕೃಷ್ಣ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

'ನಮ್ಮ ಕುಟುಂಬದಲ್ಲಿ ಯಾರದೇ ಮದುವೆ ಆದರೂ ಈ ವಿಶೇಷ ಪೂಜೆಯ ಮೂಲಕ ಪ್ರಾರಂಭ ಮಾಡುತ್ತೇವೆ' ಎಂದು ಹೇಳಿದ್ದಾರೆ. ಮಿಲನಾ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಶೇಷ ಪೂಜೆಯ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ, ಆದರೆ ಈ ಪೂಜೆ ತನ್ನ ಊರಿನಲ್ಲಿ ನಡೆಯುತ್ತಿರುವ ಹಾಗೆ ಕಾಣುತ್ತಿದೆ.
ವಿಶೇಷವಾದ ಮಂಟಪದಲ್ಲಿ ಮದುವೆ
ಮಿಲನಾ ಮದುವೆಗೆ ಇನ್ನು 5 ದಿನಗಳು ಬಾಕಿ ಇದೆ. ಮದುವೆ ಬಗ್ಗೆ ದೊಡ್ಡ ಕನಸು ಕಂಡಿದ್ದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಬೇಕು ಎಂದು ಪ್ಲಾನ್ ಮಾಡಿದ್ದರು. ಹಾಗಾಗಿಯೇ ಇವರು ಲಾಕ್ ಡೌನ್ ಎಲ್ಲ ಮುಗಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ಆಸೆಯಂತೆ ಮದುವೆ ಈಜುಕೊಳದ ಮಧ್ಯೆ ವಿಶೇಷ ಮಂಟಪದಲ್ಲಿ ಕೃಷ್ಣ ಮತ್ತು ಮಿಲನಾ ಹೊಸಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆ ದಿನ ಲವ್ ಮಾಕ್ ಟೇಲ್ ಹಾಡು ರಿಲೀಸ್
ಕೃಷ್ಣ ಮತ್ತುಮಿಲನಾ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ಲವ್ ಮಾಕ್ ಟೇಲ್ ಸಿನಿಮಾ ಬಳಿಕ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದರು. ಇದೀಗ ಈ ಜೋಡಿ ಲವ್ ಮಾಕ್ ಟೇಲ್ -2 ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ವಿಶೇಷ ಎಂದರೆ ಮದುವೆ ದಿನವೇ ಅಂದರೆ ಫೆಬ್ರವರಿ 14ರಂದು ಲವ್ ಮಾಕ್ ಟೇಲ್-2 ಸಿನಿಮಾದ ಒಂದು ಹಾಡು ಕೂಡ ರಿಲೀಸ್ ಆಗುತ್ತಿದೆ.
This News Article is a Copy of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am