ಬ್ರೇಕಿಂಗ್ ನ್ಯೂಸ್
09-02-21 03:05 pm Source: FILMIBEAT Shruthi Gk ಸಿನಿಮಾ
ಬಿಗ್ ಬಾಸ್ ಸೀಸನ್ 8 ಕನ್ನಡ ರಿಯಾಲಿಟಿ ಶೋಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಬಿಗ್ ಬಾಸ್ ಪ್ರಾರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ಜೋರಾಗಿ ಕೇಳಿಬರುತ್ತಿದೆ. ಸಂಭಾವ್ಯ ಸ್ಪರ್ಧಿಗಳ ಹೆಸರುಗಳಲ್ಲಿ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಗೌಡ ಹೆಸರು ಕೇಳಿಬರುತ್ತಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಗೌಡ ಇರಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ. ಇದೇ ತಿಂಗಳು ಕೊನೆಯಲ್ಲಿ ಅಂದರೆ ಫೆಬ್ರವರಿ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಆಗಿ ಓಪನ್ ಆಗಲಿದೆ.
ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಗಂಟು ಖ್ಯಾತಿಯ ಗೀತಾ, ನಟ ಸುನಿಲ್ ರಾವ್, ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಸೇರಿದಂತೆ ಸಾಕಷ್ಟು ಹೆಸರುಗಳು ಕೇಳಿಬರುತ್ತಿದೆ. ಆದರೆ ಬಗ್ಗೆ ಕಾವ್ಯಾ ಗೌಡ ಎಂಟ್ರಿ ಬಗ್ಗೆ ಸಹೋದರಿ ಭವ್ಯಾ ಗೌಡ ಸ್ಪಷ್ಟಪಡಿಸಿದ್ದಾರೆ.

ಕಾವ್ಯಾ ಗೌಡ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಭವ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕಾವ್ಯಾ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಭವ್ಯಾ ಇಲ್ಲ ಸುಳ್ಳು ಸುದ್ದಿ ಇದು ಎಂದು ಹೇಳಿದ್ದಾರೆ.
ಅಂದಹಾಗೆ ಬಿಗ್ ಬಾಸ್ ಮನೆಗೆ ಹೋಗುವವರು ಯಾರು ಬಹಿರಂಗವಾಗಿ ಹೇಳಿ ಹೋಗುವುದಿಲ್ಲ. ಹಾಗಾಗಿ ಕಾವ್ಯಾ ಈ ಬಾರಿ ಬಿಗ್ ಬಾಸ್ ನಲ್ಲಿ ಭಾಗಿಯಾಗಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಗೊತ್ತಾಗಬೇಕಾದರೆ ಬಿಗ್ ಬಾಸ್ ಪ್ರಾರಂಭವಾಗುವ ವರೆಗೂ ಕಾಯಲೇ ಬೇಕು.
ಕಾವ್ಯಾ ಕೊನೆಯದಾಗಿ ರಾಧ ರಮಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಶ್ವೇತಾ ಪ್ರಸಾದ್ ಬಿಟ್ಟುಹೋದ ಜಾಗಕ್ಕೆ ಕಾವ್ಯಾ ಎಂಟ್ರಿ ಕೊಟ್ಟಿದ್ದರು. ರಾಧಾ ಮಿಸ್ ಆಗಿ ಕಾವ್ಯಾ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಈ ಧಾರಾವಾಹಿ ಬಳಿಕ ಕಾವ್ಯಾ ಯಾವುದೇ ಸೀರಿಯಲ್ ನಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
This News Article is a Copy of FILMIBEAT
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm