ಬ್ರೇಕಿಂಗ್ ನ್ಯೂಸ್
06-02-21 11:54 am Source: FILMIBEAT Manjunatha C ಸಿನಿಮಾ
ನಟಿ ತಾಪ್ಸಿ ಪನ್ನು ಟ್ವೀಟ್ ಸಖತ್ ವೈರಲ್ ಆಗಿದೆ. ತಾಪ್ಸಿ ಪನ್ನು ಟ್ವೀಟ್ಗೆ ಅದೇ ಟ್ವಿಟ್ಟರ್ನಲ್ಲಿ ಉತ್ತರ ಕೊಟ್ಟಿದ್ದಾರೆ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ.
ಎಲ್ಲವೂ ಪ್ರಾರಂಭವಾಗಿದ್ದು ರಿಹಾನ್ನ ಟ್ವೀಟ್ ನಿಂದಾಗಿ. ಪಾಪ್ ಗಾಯಕಿ ರಿಹಾನ್ನ ಭಾರತದ ರೈತ ಪ್ರತಿಭಟನೆಗೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದನ್ನು ವಿರೋಧಿಸಿ, 'ಇದು ನಮ್ಮ ಆಂತರಿಕ ವಿಷಯ ಹೊರಗಿನವರು ಮಾತನಾಡಬಾರದು' ಎಂಬರ್ಥದಲ್ಲಿ ಹಲವು ಬಾಲಿವುಡ್ ನಟರು, ಕ್ರೀಡಾ ಸ್ಟಾರ್ಗಳು ಟ್ವೀಟ್ ಮಾಡಿದರು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ತಾಪ್ಸಿ ಪನ್ನು, 'ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು' ಎಂದರು. ಈ ಟ್ವೀಟ್ ಭಾರಿ ವೈರಲ್ ಆಯಿತು.
ಇದಕ್ಕೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, 'ಒಬ್ಬ ರಶೀದ್ನಿಂದಾಗಿ ಇಡೀಯ ಮುಸ್ಲಿಂ ಸಮುದಾಯವನ್ನು ಕೆರಳುವಂತೆ ಮಾಡಿದ. ಒಂದು ಕಾರ್ಟೂನು ವಿಶ್ವದ ಮುಸ್ಲೀಮರು ಕೆರಳುವಂತೆ ಮಾಡಿತು. 'ಡಾ ವಿಂಚಿ ಕೋಡ್' ಎಂಬ ಒಂದು ಪುಸ್ತಕ ಕ್ರಿಸ್ತರನ್ನು ಕೆರಳಿಸಿತು. ನೀವು ಕೂಡ ಒಂದು ಏಟಿನಿಂದಾಗಿ ಮದುವೆ ಮುರಿದುಕೊಂಡಿರಿ (ತಪ್ಪಡ್ ಸಿನಿಮಾದಲ್ಲಿ). ಸಿನಿಮಾ ಸಂಭಾಷಣೆ ಹೇಳುವುದಕ್ಕೆ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಿ, ಉಳಿದ ಸಂಗತಿಗಳು ನಿಮ್ಮ ಜ್ಞಾನದಿಂದ ಹೊರಗಿವೆ' ಎಂದಿದ್ದಾರೆ ಪ್ರತಾಪ್ ಸಿಂಹ.
ತಾಪ್ಸಿ ಪನ್ನು ಟ್ವೀಟ್ಗೆ ಹಲವಾರು ಮಂದಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ನಟ ಅಭಯ್ ಡಿಯೋಲ್ ಇನ್ನೂ ಹಲವಾರು ಮಂದಿ ತಾಪ್ಸಿ ಪನ್ನುಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
This News Article is a Copy of FILMIBEAT
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm