ಬ್ರೇಕಿಂಗ್ ನ್ಯೂಸ್
03-02-21 04:56 pm Source: FILMIBEAT Manjunatha C ಸಿನಿಮಾ
ನಟ ಪ್ರಭಾಸ್ ನಟಿಸುತ್ತಿರುವ ಎರಡು ಸಿನಿಮಾಗಳ ಸೆಟ್ಗಳಲ್ಲಿ ಒಂದೇ ದಿನ ಅವಘಡ ಸಂಭವಿಸಿದೆ. ನಟ ಪ್ರಭಾಸ್ ನಟಿಸುತ್ತಿರುವ ಭಾರಿ ಬಜೆಟ್ ಸಿನಿಮಾ 'ಆದಿಪುರುಷ್' ನ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತು.
ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲವಾದರೂ ಬೆಂಕಿಯಿಂದ ಭಾರಿ ನಷ್ಟವೇ ಉಂಟಾಯಿತು. ಮತ್ತೊಂದೆಡೆ ಪ್ರಭಾಸ್ ನಟಿಸಿ, ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾದ ಸೆಟ್ನ ಬಳಿಯೂ ಅಪಘಾತವೊಂದು ಸಂಭವಿಸಿದೆ.
'ಸಲಾರ್' ಚಿತ್ರೀಕರಣವು ಗೋಧಾವತಿಕನಿ ಎಂಬಲ್ಲಿ ನಡೆಯುತ್ತಿದ್ದು, ಚಿತ್ರೀಕರಣ ಮುಗಿಸಿದ ಚಿತ್ರತಂಡದ ಕೆಲವರು ಹೋಟೆಲ್ಗೆ ವಾಪಸ್ ಬರುವಾಗ ಚಿತ್ರತಂಡವನ್ನು ಹೊತ್ತು ಬರುತ್ತಿದ್ದ ವಾಹನವು ಲಾರಿಯೊಂದಕ್ಕೆ ಗುದ್ದಿದೆ.
ಚಿತ್ರತಂಡದ ಸದಸ್ಯರಿಗೆ ಗಾಯಕಗಳಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಮಮತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಬೇಗನೇ ಹುಷಾರಾಗಿ ಎಂದು ಪ್ರಭಾಸ್ ಹಾಗೂ ಶ್ರುತಿ ಹಾಸನ್ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.
ಗೋಧಾವರಿ ಗಣಿಯಲ್ಲಿ ಕೆಲವು ದಿನಗಳಿಂದಲೂ ಸಲಾರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಿನ್ನೆಯೇ (ಜನವರಿ 02) ರಂದು ನಟ ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾ ಸೆಟ್ನಲ್ಲೂ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಮುಂಬೈನ ಗೊರೆಗಾಂವ್ ಪ್ರದೇಶದ ಇನೋರ್ಬಿಟ್ ಮಾಲ್ ನ ಹಿಂಭಾಗದ ರೆಟ್ರೊ ಮೈದಾನದಲ್ಲಿ ಆದಿಪುರುಷ್ ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿತ್ತು. ಸೆಟ್ನಲ್ಲಿ 60-70 ಜನರಿದ್ದರು. ಸಂಜೆ 4:15 ಕ್ಕೆ ಬೆಂಕಿ ಅವಘಡ ಸಂಭವಿಸಿತು. ಆದರೆ ಅಲ್ಲಿ ಯಾರಿಗೂ ಗಾಯ ಅಥವಾ ಪ್ರಾಣ ಹಾನಿ ಆಗಲಿಲ್ಲ.
This News Article is a Copy of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am