ಬ್ರೇಕಿಂಗ್ ನ್ಯೂಸ್
02-02-21 01:52 pm Source: FILMIBEAT Manjunatha C ಸಿನಿಮಾ
ಡಬ್ಬಿಂಗ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಸ್ಥ, ನಿರ್ಮಾಪಕ ಸಾ.ರಾ.ಗೋವಿಂದು. ಡಬ್ಬಿಂಗ್ ಹಾವಳಿ ವಿರುದ್ಧ ಅಸಮಾಧಾನಗೊಂಡ ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರು ಇಂದು ಫಿಲಂ ಛೇಂಬರ್ಗೆ ಭೇಟಿ ನೀಡಿ ಸಾ.ರಾ.ಗೋವಿಂದು ಅವರೊಂದಿಗೆ ಚರ್ಚೆ ನಡೆದು, ಅವರಿಗೆ ಮನವಿ ಅರ್ಜಿಯೊಂದನ್ನು ನೀಡಿದರು.
ಈ ಸಂದರ್ಭದಲ್ಲಿ ಡಬ್ಬಿಂಗ್ ವಿರುದ್ಧ ತಾವು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ಹೋರಾಟದ ಬಗ್ಗೆ ಮಾತನಾಡಿದ ಸಾ.ರಾ.ಗೋವಿಂದು, 'ನ್ಯಾಯಾಲಯದ ಆದೇಶಗಳು ನಮ್ಮ ಕೈ ಕಟ್ಟಿಹಾಕಿವೆ' ಎಂದು ಅಸಮಾಧಾನ ಹೊರಹಾಕಿದರು.
ಈ ಹಿಂದೆ ಅನ್ಯ ಭಾಷೆಗಳ ಸಿನಿಮಾಗಳಿಗೆ ಇಂತಿಷ್ಟೇ ಚಿತ್ರಮಂದಿರವನ್ನು ಮಾತ್ರವೇ ನೀಡಬೇಕು ಎಂಬ ನಿಯಮ ಮಾಡಿಕೊಂಡಿದ್ದೆವು. ಆಗ 'ರಾ ಒನ್' ಎಂಬ ಸಿನಿಮಾ ಬಿಡುಗಡೆ ಆಯ್ತು. ಅವರಿಗೆ ನಿಯಮದಂತೆ ಕೆಲವು ಸಿನಿಮಾ ಮಂದಿರಗಳನ್ನು ನೀಡಿದೆವು, ಅವರು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಗೆದ್ದರು. ಅಂದಿನಿಂದ ಯಾವ ಭಾಷೆಯ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಾದರೂ ಬಿಡುಗಡೆ ಆಗಬಹುದು ಎಂಬಂತಾಗಿದೆ ಎಂದರು ಸಾ.ರಾ.ಗೋವಿಂದು. ಬಾಹುಬಲಿ ಸಿನಿಮಾವನ್ನು ರಾಜ್ಯದಲ್ಲಿ 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರು.
ಎದೆಗೆ ಗುಂಡು ಹೊಡೆದ ಅನುಭವವಾಯಿತು. ಆದರೆ ನ್ಯಾಯಾಲಯದ ಆದೇಶಗಳು ನಮ್ಮನ್ನು ಕಟ್ಟಿಹಾಕಿವೆ. ನಿಮ್ಮಂಥಹವರು ಆದರೂ ಇದರ ಬಗ್ಗೆ ಪ್ರತಿಭಟಿಸುತ್ತಿದ್ದೀರ, ನಿಮಗೆ ನನ್ನ ಗೌರವ ಇದ್ದೇ ಇರುತ್ತದೆ ಎಂದರು ಸಾ.ರಾ.ಗೋವಿಂದು.
'ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಕರ್ನಾಕಟದಲ್ಲಿ ಕನ್ನಡದಲ್ಲಿ, ಆಂಧ್ರ, ತೆಲಂಗಾಣಗಳಲ್ಲಿ ತೆಲುಗಿನಲ್ಲಿ, ಕೇರಳದಲ್ಲಿ ಮಲಯಾಳಂ ನಲ್ಲಿ ಬಿಡುಗಡೆ ಆಗಿದೆ. ಇದಕ್ಕೇನು ಅರ್ಥವಿಲ್ಲವೇ, ಭಾಷೆಯ ಬಗ್ಗೆ ಗೌರವ ಬೇಡವೇ, ನಮ್ಮ ಭಾಷೆ ಏನಾಯ್ತು, ಈ ನ್ಯಾಯಾಲಯಗಳಿಗೆ ಇದೆಲ್ಲಾ ಯಾಕೆ ಅರ್ಥವಾಗುತ್ತಿಲ್ಲ' ಎಂದು ಸಾ.ರಾ.ಗೋವಿಂದು ಅಸಮಾಧಾನ ಹೊರಹಾಕಿದ್ದಾರೆ.
This News Article is a Copy of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am