ಬ್ರೇಕಿಂಗ್ ನ್ಯೂಸ್
17-01-21 02:24 pm Source: FILMIBEAT Shruthi Gk ಸಿನಿಮಾ
ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳು ಮುಂದುವರೆದಿದೆ. ಒಂದಲ್ಲೊಂದು ವಿಚಾರದ ಮೂಲಕ ಸದಾ ಸುದ್ದಿಯಲ್ಲಿರುವ ನಟ ಸೋನು ಸೂದ್ ಇದೀಗ ಬಟ್ಟೆ ಹೊಲಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಸ್ತೆಬದಿಯಲ್ಲಿ ಕುಳಿತು ಬಟ್ಟೆ ಹೊಲಿಯುತ್ತಿರುವ ಸೋನು ಸೂದ್ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಾನವೀಯ ಕೆಲಸಗಳ ಮೂಲಕ ಅಭಿಮಾನಿಗಳ ಪಾಲಿನ ನಿಜವಾದ ದೇವರಾಗಿರುವ ಸೋನು ಸೂದ್ ಅವರನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಸರಳತೆಯ ಮೂಲಕವೇ ಎಲ್ಲರ ಮನಗೆದ್ದಿರುವ ಸೋನು ಇದೀಗ ಟೈಲರಿಂಗ್ ಶಾಪ್ ಶುರು ಮಾಡಿಕೊಂಡಿದ್ದಾರೆ.
ಸೋನು ಸೂದ್ ಟೈಲರಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ, ಬರಿ ಗಾಲಿನಲ್ಲಿ ಹೊಲಿಗೆ ಯಂತ್ರದ ಮೇಲೆ ಕುಳಿತು ಸುಲಲಿತವಾಗಿ ಬಟ್ಟೆ ಹೊಲಿಯುತ್ತಿರುವ ಸೋನು ಸೂದ್ ಗೆ ಅಭಿಮಾನಿಗಳು ಮನಸೋತಿದ್ದಾರೆ.
ಈ ವಿಡಿಯೋವನ್ನು ನಟ ಸೋನು ಸೂದ್ ಅವರೇ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಸೋನು ಸೂದ್ ಟೈಲರಿಂಗ್ ಶಾಪ್. ಇಲ್ಲಿ ಉಚಿತವಾಗಿ ಬಟ್ಟೆ ಹೊಲಿದುಕೊಡಲಾಗುತ್ತದೆ' ಎಂದು ಬರೆದುಕೊಂಡಿದ್ದಾರೆ. ಸೋನು ಸೂದ್ ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸೋನು ಸೂದ್ ಸದ್ಯ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸೋನು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚಿಗೆ ಚಿತ್ರೀಕರಣ ಸೆಟ್ ನಲ್ಲಿ ಸೋನು ಸೂದ್ ಸಿಬ್ಬಂದಿಗೆ ಉಚಿತ ಮೊಬೈಲ್ ಗಳನ್ನು ನೀಡಿ ಗಮನ ಸೆಳೆದಿದ್ದರು.
This News Article is a Copy of FILMIBEAT
Sonu Sood tailor shop.
— sonu sood (@SonuSood) January 16, 2021
यहां मुफ्त में सिलाई की जाती है।
पैंट की जगह निकर बन जाए, इसकी हमारी गारंटी नहीं 😂 pic.twitter.com/VCBocpUSum
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm