ಬ್ರೇಕಿಂಗ್ ನ್ಯೂಸ್
16-01-21 05:09 pm Source: FILMIBEAT ಸಿನಿಮಾ
ತಮಿಳು ನಟ ವಿಜಯ್ ಸೇತುಪತಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಖುಷಿಯಲ್ಲಿದ್ದ ಸೇತುಪತಿ ಅಭಿಮಾನಿಗಳು ತಂದಿದ್ದ ಕೇಕ್ನ್ನು ತಲ್ವಾರ್ನಿಂದ ಕತ್ತರಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ನಟ ತಲ್ವಾರ್ನಿಂದ ಕೇಕ್ ಕತ್ತರಿಸಿ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಸೇತುಪತಿ ವಿರುದ್ಧ ಟೀಕೆಗಳು ವ್ಯಕ್ತವಾದವು. ಕೂಡಲೇ ಎಚ್ಚೆತ್ತುಕೊಂಡ ಮಾಸ್ಟರ್ ನಟ ಸೇತುಪತಿ ತಲ್ವಾರ್ನಲ್ಲಿ ಕೇಕ್ ಕತ್ತರಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ, ಇದೊಂದು ರೀತಿ ತಪ್ಪು ಉದಾಹರಣೆಯಾಗಿದೆ, ಮುಂದಿನ ದಿನದಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಸೇತುಪತಿ ಪ್ರಕಟಣೆಯಲ್ಲಿ ಏನಿದೆ?
''ನನ್ನ ಜನ್ಮದಿನದಂದು ಹಾರೈಸಿದ ಕಲಾಬಂಧುಗಳು ಮತ್ತು ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಮೂರು ದಿನಗಳ ಹಿಂದೆ ನನ್ನ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ತೆಗೆದ ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ. ಈ ಫೋಟೋದಲ್ಲಿ ನಾನು ತಲ್ವಾರ್ನಿಂದ ಕೇಕ್ ಕತ್ತರಿಸಿದ್ದೆ. ನಿರ್ದೇಶಕ ಪೊನ್ರಾಮ್ ಅವರ ಮುಂದಿನ ಚಿತ್ರದಲ್ಲಿ ನಾನು ನಟಿಸಲಿದ್ದೇನೆ, ಈ ಸಿನಿಮಾದಲ್ಲಿ ತಲ್ವಾರ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ನನ್ನ ಬರ್ತಡೇ ಆಚರಣೆ ವೇಳೆ ಕತ್ತಿ ಬಳಸಿ ಕೇಕ್ ಕತ್ತರಿಸಲಾಯಿತು'' ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಕ್ಷಮೆಯಾಚಿಸುತ್ತೇನೆ
''ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದು ಕೆಟ್ಟ ಉದಾಹರಣೆ ಎಂದು ಹಲವರು ತಿಳಿಸಿದರು. ಇನ್ಮುಂದೆ ನಾನು ಜಾಗರೂಕರಾಗಿರುತ್ತೇನೆ. ಈ ಘಟನೆಯಿಂದ ಯಾರಿಗಾದರೂ ನೋವುಂಟು ಮಾಡಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಕ್ರಮಕ್ಕೆ ವಿಷಾದಿಸುತ್ತೇನೆ'' ಎಂದು ಸೇತುಪತಿ ಪ್ರಕಟಿಸಿದ್ದಾರೆ.
ತಲ್ವಾರ್ನಲ್ಲಿ ಕೇಕ್ ಕತ್ತರಿಸಿದ್ದಕ್ಕೆ ಬಂಧನ
ಈ ಹಿಂದೆ ಚೆನ್ನೈನಲ್ಲಿ ವ್ಯಕ್ತಿಯೊಬ್ಬ ಬರ್ತಡೇ ವೇಳೆ ತಲ್ವಾರ್ನಿಂದ ಕೇಕ್ ಕತ್ತರಿಸಿದ್ದ. ಫೋಟೋ ವೈರಲ್ ಆಗಿತ್ತು. ಬಳಿಕ ಪೊಲೀಸರು ಆ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಿ ಅರೆಸ್ಟ್ ಮಾಡಿದ್ದರು. ಈಗ, ಆ ಘಟನೆಯನ್ನು ನೆನಪಿಸುತ್ತಿರುವ ನೆಟ್ಟಿಗರು ವಿಜಯ್ ಸೇತುಪತಿ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ.\
ಮಾಸ್ಟರ್ನಲ್ಲಿ ಮಿಂಚಿದ ವಿಜಯ್
ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದ ಮಾಸ್ಟರ್ ಸಿನಿಮಾ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 13 ರಂದು ಬಿಡುಗಡೆಯಾಗಿತ್ತು. ವಿಜಯ್ ನಾಯಕನಾಗಿರುವ ಈ ಚಿತ್ರದಲ್ಲಿ ಸೇತುಪತಿ ಖಳನಾಯಕನ ಪಾತ್ರ ಮಾಡಿದ್ದಾರೆ. ಸೇತುಪತಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಸೇತುಪತಿ ಆಕ್ಟಿಂಗ್ ಸೂಪರ್ ಎನ್ನುತ್ತಿದ್ದಾರೆ ಸಿನಿಮಾ ನೋಡಿ ಬಂದ ಪ್ರೇಕ್ಷಕರು.
This News Article is a Copy of FILMIBEAT
08-07-25 02:47 pm
HK News Desk
Heart Attack Case, Karnataka: ಹಠಾತ್ ಸಾವುಗಳನ್ನ...
08-07-25 11:15 am
CM Siddaramaiah: ಸಿದ್ದರಾಮಯ್ಯ ವರ್ಚಸ್ಸು ರಾಷ್ಟ್ರ...
06-07-25 08:48 pm
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
08-07-25 10:15 am
Mangalore Correspondent
ಎಂಟು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ ; ಪ್ರೀತಿಸುತ...
07-07-25 05:02 pm
Mangalore Car Accident, Thumbe: ಹಳೆ ಸ್ವಿಫ್ಟ್...
05-07-25 05:16 pm
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
07-07-25 10:31 pm
Mangalore Correspondent
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm
Moral policing, Puttur, Mangalore Crime: ನೀನು...
07-07-25 12:20 pm