ಬ್ರೇಕಿಂಗ್ ನ್ಯೂಸ್
14-01-21 04:28 pm Source: FILMIBEAT Bharath Kumar K ಸಿನಿಮಾ
ಭಾರತೀಯ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ವಿಶೇಷವಾಗಿ ಅವರ ಅಭಿಮಾನಿಗಳು ಕೈಗೊಂಡ ಮಹತ್ವದ ಕೆಲಸಕ್ಕಾಗಿ ಲೋಕಸಭೆ ಸದಸ್ಯೆ ಮೇನಕಾ ಗಾಂಧಿ ಅವರು ದೂರವಾಣಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಮೂಕಪ್ರಾಣಿ ವಿಚಾರದಲ್ಲಿ ತಾವು ಮತ್ತು ತಮ್ಮ ಅಭಿಮಾನಿಗಳು ಮಾಡಿದ ಕೆಲಸ ನಿಜಕ್ಕೂ ಸ್ವಾಗತಾರ್ಹ, ನಿಮ್ಮಿಂದ ಇಂತಹ ಕೆಲಸಗಳು ಮತ್ತಷ್ಟು ಆಗಲಿ ಎಂದು ಶ್ಲಾಘಿಸಿದ್ದಾರೆ.
ಅಂದ್ಹಾಗೆ, ಕಿಚ್ಚ ಸುದೀಪ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಡೆಯಿಂದ 25 ಒಳ್ಳೆಯ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಸತತವಾಗಿ 25 ದಿನಗಳ ಕಾಲ ಮಾನವೀಯತೆ ಸಂದೇಶ ಸಾರುವ ಸಲುವಾಗಿ 25 ಕೆಲಸಗಳನ್ನು ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ.

ಅದರಲ್ಲೂ ಮೂಕಪ್ರಾಣಿಗಳಿಗೆ (ವಿಶೇಷವಾಗಿ ಬೀದಿಶ್ವಾನಗಳಿಗೆ) ಆಶ್ರಯ ವ್ಯವಸ್ಥೆ ಮಾಡಿರುವುದಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಂದ್ರೆ ಶ್ವಾನಗಳಿಗಾಗಿ ಶೆಟ್ಟರ್ ತೆರೆಯಲಾಗಿದೆ. ಇದೇ ವಿಚಾರವಾಗಿ ಸುದೀಪ್ ಅವರಿಗೆ ದೂರವಾಣಿ ಕರೆ ಮಾಡಿದ್ದ ಮೇನಕಾ ಗಾಂಧಿ (Founder of people for Animals) ''ಭಾರತದಾದ್ಯಂತ ಇಂತಹ 100 ಶೆಟ್ಟರ್ಗಳ ಅವಶ್ಯಕತೆಯಿದ್ದು, ನೀವು (ಸುದೀಪ್) ಮೊದಲನೇಯ ಶೆಟ್ಟರ್ಗೆ ಕಾರಣರಾಗಿದ್ದಿರಾ. ಹಾಗೂ ಮೊದಲನೇ ಅಡಿಪಾಯದ ಕಲ್ಲು ನೆಟ್ಟಿದ್ದಿರಾ...ನಿಮ್ಮ ಸೇವೆ ಹೀಗೆ ಮುಂದುವರೆಯುತ್ತಾ ಇರಲಿ'' ಎಂದಿದ್ದಾರೆ.
25 ಮಹತ್ವದ ಕೆಲಸಗಳಲ್ಲಿ ಇದೊಂದೆ ಅಲ್ಲ, ದೆಹಯಲ್ಲಿ ಮುಷ್ಕರ ನಿರತರಾಗಿರುವ ಅನ್ನದಾತರಿಗೆ 500 ಬ್ಲ್ಯಾಂಕೆಟ್ ಗಳನ್ನು ಕಳುಹಿಸಿಕೊಡಲಾಗಿದೆ. ಬದುಕುವ ಭರವಸೆ ಕಳೆದುಕೊಂಡಿದ್ದ ಸುಶ್ಮಾಂತ್ ಎಂಬ ವ್ಯಕ್ತಿಯ ಕುಟುಂಬಕ್ಕೆ ನೆರವು ನೀಡಲಾಗಿದೆ. ವಿಶೇಷಚೇತನರಿಗಾಗಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಇತ್ತೀಚಿಗಷ್ಟೆ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎಟಿ ರಘು ಅವರಿಗೆ ಫೋನ್ ಮಾಡಿದ್ದ ನಟ ಸುದೀಪ್ ಧೈರ್ಯ ತುಂಬಿದ್ದರು. ''ನಿಮ್ಮ ಜೊತೆ ನಾವು ಇದ್ದೇವೆ, ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ, ಧೈರ್ಯವಾಗಿರಿ'' ಎಂದು ಭರವಸೆ ನೀಡಿದ್ದರು.
This News Article is a Copy of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm