ಬ್ರೇಕಿಂಗ್ ನ್ಯೂಸ್
14-01-21 04:23 pm Source: FILMIBEAT Manjunatha C ಸಿನಿಮಾ
ಅರಣ್ಯ ಮತ್ತು ವನ್ಯಜೀವಿಗಳ ಬಗೆಗೆ ವಿಶೇಷ ಪ್ರೀತಿ ಇರಿಸಿಕೊಂಡಿದ್ದಾರೆ ನಟ ದರ್ಶನ್. ವನ್ಯಜೀವಿ ಛಾಯಾಗ್ರಹಣ ದರ್ಶನ್ ಅವರ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಆಗಾಗ್ಗೆ ಕಾಡಿಗೆ ಹೋಗಿ ತದೇಕಚಿತ್ತದಿಂದ ಕೂತು ವನ್ಯಜೀವಿಗಳ ಛಾಯಾಗ್ರಹಣ ಮಾಡುತ್ತಾರೆ ನಟ ದರ್ಶನ್.
ಈಗ ಮತ್ತೆ ಕ್ಯಾಮೆರಾ ಬುಜಕ್ಕೆ ಏರಿಸಿ ನಾಗರಹೊಳೆ ಕಾಡಿಗೆ ಹೋಗಿದ್ದಾರೆ ದರ್ಶನ್. ನಾಗರಹೊಳೆ, ಕಬಿನಿ ಪ್ರದೇಶದಲ್ಲಿ ಸಫಾರಿ ಮಾಡಿ ವನ್ಯಜೀವಿಗಳ ಛಾಯಾಗ್ರಹಣ ಮಾಡಿದ್ದಾರೆ ನಟ ದರ್ಶನ್. ದರ್ಶನ್ ಅವರು ಕಬಿನಿಯಲ್ಲಿ ಸಫಾರಿ ಮಾಡಿದ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅಭಿಮಾನಿಗಳೊಂದಿಗೆ ಚಿತ್ರಗಳು
ಅಲ್ಲಿಯೂ ಅಭಿಮಾನಿಗಳು ದರ್ಶನ್ ಅವರನ್ನು ಮುತ್ತಿಕೊಂಡಿದ್ದಾರೆ. ಹಲವಾರು ಮಂದಿ ಅಭಿಮಾನಿಗಳು ತಮ್ಮ ಮೆಚ್ಚಿನ ನಟನೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ದರ್ಶನ್ ಸಹ ಎಂದಿನಿಂತೆ ತಾಳ್ಮೆಯಿಂದ ಅಭಿಮಾನಿಗಳೊಟ್ಟಿಗೆ ಚಿತ್ರಗಳಿಗೆ ಫೋಸ್ ನೀಡಿದ್ದಾರೆ.

ಹೊರ ರಾಜ್ಯದ ಕಾಡುಗಳಿಗೂ ಪ್ರವಾಸ
ದರ್ಶನ್ ಅವರು ಕರ್ನಾಟಕದ ಕಾಡುಗಳು ಮಾತ್ರವೇ ಅಲ್ಲದೆ ಹೊರ ರಾಜ್ಯಗಳ ಕಾಡುಗಳಿಗೂ ಆಗಾಗ್ಗೆ ಪ್ರವಾಸ ಹೋಗಿ ವನ್ಯಜೀವಿ ಫೊಟೊಗ್ರಫಿ ಮಾಡುತ್ತಿರುತ್ತಾರೆ. ಲಾಕ್ಡೌನ್ ಗೆ ಮುನ್ನಾ ಉತ್ತರಕಾಂಡಕ್ಕೆ ದರ್ಶನ್ ಭೇಟಿ ನೀಡಿದ್ದರು.

ಚಿತ್ರ ಮಾರಿದ ಹಣ ವನ್ಯಜೀವಿ ಸಂರಕ್ಷಣೆಗೆ ದೇಣಿಗೆ
ತಾವು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಿ ಬಂದ ಹಣವನ್ನು ವನ್ಯಜೀವಿಗಳ ಕ್ಷೇಮಾಭಿವೃದ್ಧಿ, ಅರಣ್ಯಾಭಿವೃದ್ಧಿಗೆ ದೇಣಿಗೆ ನೀಡುತ್ತಾರೆ ದರ್ಶನ್. ಹಲವು ನಟ-ನಟಿಯರು, ದರ್ಶನ್ ಅವರ ಸ್ನೇಹಿತರು ದರ್ಶನ್ ತೆಗೆದ ಚಿತ್ರಗಳನ್ನು ಕೊಂಡುಕೊಂಡಿದ್ದಾರೆ. ಆ ಮೂಲಕ ವನ್ಯಜೀವಿ ಒಳಿತಿಗೆ ಸಹಕಾರಿಯಾಗಿದ್ದಾರೆ.

ಬೈಕ್ ರೈಡಿಂಗ್ ದರ್ಶನ್ ಹವ್ಯಾಸಗಳಲ್ಲಿ ಒಂದು
ಬೈಕ್ ರೈಡಿಂಗ್ ಸಹ ದರ್ಶನ್ ಅವರ ಮೆಚ್ಚಿನ ಹವ್ಯಾಸ. ಕೊರೊನಾ ಲಾಕ್ಡೌನ್ ಅಂತ್ಯವಾದ ಬಳಿಕ ಹಲವು ಬಾರಿ ದರ್ಶನ್ ತಮ್ಮ ದೊಡ್ಡ ಗೆಳೆಯರ ಗುಂಪಿನೊಂದಿಗೆ ಬೈಕ್ ರೈಡಿಂಗ್ ಹೋದರು. ಈ ವೇಳೆ ಹಲವು ಅಭಿಮಾನಿಗಳನ್ನು ದರ್ಶನ್ ಭೇಟಿ ಮಾಡಿದರು. ಕೆಲವು ಕಡೆಗೆ ಪ್ರವಾಸವನ್ನೂ ಮಾಡಿದರು ದರ್ಶನ್.
This News Article is a Copy of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm