ಬ್ರೇಕಿಂಗ್ ನ್ಯೂಸ್
23-12-20 08:32 pm Headline Karnataka News Network ಸಿನಿಮಾ
ಬೆಂಗಳೂರು, ಡಿ.23: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿದ್ದ ಬಾಲಿವುಡ್ ಚಿತ್ರದಲ್ಲಿ ತೆರೆಗೆ ಬರಲು ಸಜ್ಜಾಗಿದ್ದಾರೆ.
ಬಾಲಿವುಡ್ ನಲ್ಲಿ ಸಂತನು ಬಗ್ಜಿ ನಿರ್ದೇಶನದಲ್ಲಿ ಮಿಷನ್ ಮಜ್ನು ಎನ್ನುವ ಚಿತ್ರ ತಯಾರಾಗುತ್ತಿದ್ದು, ಬಾಲಿವುಡ್ ಸ್ಟಾರ್ ನಟ ಸಿದ್ದಾರ್ಥ ಮಲ್ಹೋತ್ರಾ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ.
ಕನ್ನಡ, ತೆಲುಗು, ತಮಿಳಿನಲ್ಲಿ ಬಿಝಿಯಾಗಿದ್ದ ರಶ್ಮಿಕಾ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸುವ ಕನಸು ಕಂಡಿದ್ದರು. ಆದರೆ, ಉತ್ತಮ ಚಿತ್ರಕತೆ ಇರುವ ಚಿತ್ರಕ್ಕಾಗಿ ಎದುರು ನೋಡುತ್ತಿದ್ದರು. ಇದೀಗ ಭಾರತದ ಗುಪ್ತಚರ ಸಂಸ್ಥೆ ರಾ, ಪಾಕಿಸ್ತಾನದ ನೆಲದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ ನೈಜಕತೆ ಆಧರಿಸಿ ಮಿಷನ್ ಮಜ್ನು ಎನ್ನುವ ಚಿತ್ರ ತಯಾರಾಗುತ್ತಿದೆ. ಉತ್ತಮ ಚಿತ್ರವೊಂದರ ಭಾಗವಾಗುತ್ತಿರುವುದಕ್ಕೆ ಸಂತಸವಾಗಿದ್ದು ತುಂಬ ಉತ್ಸುಕಳಾಗಿದ್ದೇನೆ ಎಂದು ಟ್ವೀಟ್ ಮೂಲಕ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.
ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ರಶ್ಮಿಕಾ ಮತ್ತು ಸಿದ್ದಾರ್ಥ ಮಲ್ಹೋತ್ರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಶ್ಮಿಕಾ ಮಂದಣ್ಣ, ಆಬಳಿಕ ತಮಿಳು, ತೆಲುಗು ಚಿತ್ರಗಳಲ್ಲಿ ಬೇಡಿಕೆ ಕಂಡುಕೊಂಡಿದ್ದರು. ಈಗಾಗ್ಲೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದು, ಇದರ ಒಂದು ಟೈಟಲ್ ಸಾಂಗ್ ಈಗಲೇ ಸದ್ದು ಮಾಡಿದೆ. ಇದೇ ವೇಳೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಪ್ರಮುಖ ತಾರೆಯರ ಜೊತೆ ಅಭಿನಯಿಸುತ್ತಿದ್ದು, 2021ರಲ್ಲಿ ರಶ್ಮಿಕಾ ಗ್ರಹಗತಿ ಇನ್ನಷ್ಟು ಮಿಂಚುವ ಸಾಧ್ಯತೆ ಕಂಡುಬಂದಿದೆ.
Sidharth Malhotra, on Wednesday, announced his new film Mission Majnu, which will also star Kannada actress Rashmika Mandanna in the lead role, marking her debut in Bollywood.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm