ಬ್ರೇಕಿಂಗ್ ನ್ಯೂಸ್
18-12-20 05:15 pm Source: FILMIBEAT Manjunatha C ಸಿನಿಮಾ
ತಮಿಳುನಾಡು, ಡಿ. 18: ತಮಿಳು ಧಾರಾವಾಹಿ ನಟಿ, ನಿರೂಪಕಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ವಿಜೆ ಚಿತ್ರಾ ಸಾವಿಗೆ ಪತಿ ಹೇಮಂತ್ ನೇರ ಕಾರಣ ಎನ್ನಲಾಗಿತ್ತು, ನಂತರ ವಿಜೆ ಚಿತ್ರಾ ತಮ್ಮ ಮನೆಯವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ, ಚಿತ್ರಾ ಸಾಯುವ ದಿನ ತಾಯಿಯೊಂದಿಗೆ ಗಂಟೆಗಟ್ಟಲೆ ಮಾತನಾಡಿ ಜಗಳವಾಡಿದ್ದರು ಎನ್ನಲಾಯಿತು.
ಈಗ ವಿಜೆ ಚಿತ್ರಾ ಆಪ್ತ ಗೆಳತಿಯೊಬ್ಬರು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದು, ಈ ಹೇಳಿಕೆ ಆಧರಿಸಿ ನೋಡುವುದಾದರೆ, ವಿಜೆ ಚಿತ್ರಾ ಸಾವಿನ ಹಿಂದೆ ತೆಲುಗಿನ ಖ್ಯಾತ ನಟನೊಬ್ಬನ ಕೈವಾಡವಿದ್ದಂತಿದೆ. ಮಾಧ್ಯಮದೊಟ್ಟಿಗೆ ಮಾತನಾಡಿರುವ ವಿಜೆ ಚಿತ್ರಾ ಆಪ್ತ ಗೆಳತಿ, ತೆಲುಗು ಯುವ ನಟನೊಬ್ಬನೊಂದಿಗೆ ವಿಜೆ ಚಿತ್ರಾಗೆ ಗೆಳತನವಿತ್ತು. ರಾಜಕೀಯ ಪ್ರಭಾವವನ್ನೂ ಹೊಂದಿರುವ ಆ ನಟ, ಚಿತ್ರಾಳ ಖಾಸಗಿ ವಿಡಿಯೋ ಮಾಡಿಕೊಂಡು, ಅದನ್ನು ಚಿತ್ರಾಳ ಪತಿ ಹೇಮಂತ್ ಗೆ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದ' ಎಂದಿದ್ದಾರೆ.

ಚಿತ್ರಾ ಗೆಳತಿಯ ಸ್ಪೋಟಕ ಹೇಳಿಕೆ
ಚಿತ್ರಾ ಗೆಳತಿಯ ಈ ಹೇಳಿಕೆ ಚಿತ್ರಾ ಸಾವಿನ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. 'ಆ ಯುವ ನಟ ಚಿತ್ರಾಳಿಗೆ ಸಾಕಷ್ಟು ಬೆದರಿಸಿದ್ದ, ಅಲ್ಲದೆ, 2021 ರ ಹೊಸವರ್ಷದಂದು ಒಂದು ರಾಜಕೀಯ ಪಾರ್ಟಿಗೆ ಬಂದು ಅಲ್ಲಿಯೇ ಉಳಿದುಕೊಳ್ಳಬೇಕೆಂದು ಒತ್ತಡ ಹಾಕಿದ್ದ' ಎಂದು ಸಹ ಹೇಳಿದ್ದಾರೆ.
ಸೆಟ್ನಲ್ಲಿ ಎಲ್ಲರೆದರು ಕೂಗಾಡಿದ್ದ ಹೇಮಂತ್
ಚಿತ್ರಾ ನಟಿಸುತ್ತಿದ್ದ ಧಾರಾವಾಹಿಯ ಸಹನಟ-ನಟಿಯರು ಹೇಳಿರುವಂತೆ, ಚಿತ್ರಾ ಆತ್ಮಹತ್ಯೆ ಮಾಡಿಕೊಂಡ ದಿನ, ಚಿತ್ರಾಳ ಪತಿ ಹೇಮಂತ್ ಸೆಟ್ಗೆ ಬಂದಿದ್ದ, ಸೆಟ್ನಲ್ಲಿಯೇ ಎಲ್ಲರ ಎದುರು ಚಿತ್ರಾ ಜೊತೆ ಜಗಳವಾಡಿ, ಆಕೆಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ.

ಜಗಳವಾಡಿದ್ದ ಪತಿ ಹೇಮಂತ್
ಹೋಟೆಲ್ಗೆ ಹೋದ ಬಳಿಕವೂ ಹೇಮಂತ್ ಜಗಳ ಮುಂದುವರೆಸಿದ್ದು, ಜೋರಾಗಿ ಕೂಗಾಡಿ, ಮದುವೆಯನ್ನು ಅಂತ್ಯಗೊಳಿಸುವುದಾಗಿ ಬೆದರಿಸಿದ್ದ. ಆ ನಂತರ ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೇಮಂತ್ ಅನ್ನು ಪೊಲೀಸರು ಬಂಧಿಸಿದ್ದಾರೆ, ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಸತ್ಯ ಇನ್ನಷ್ಟೆ ಹೊರಬರಬೇಕಿದೆ.
ಗುಟ್ಟಾಗಿ ಮದುವೆಯಾಗಿದ್ದ ಚಿತ್ರಾ
ವಿಜೆ ಚಿತ್ರಾ ಹಾಗೂ ಹೇಮಂತ್ ಇದೇ ವರ್ಷದ ಅಕ್ಟೋಬರ್ 19 ರಂದು ಗುಟ್ಟಾಗಿ ರಿಜಿಸ್ಟರ್ ಮದುವೆ ಆಗಿದ್ದರು. ಇಬ್ಬರೂ ಫೆಬ್ರವರಿಯಲ್ಲಿ ತಮ್ಮ ಮದುವೆಯನ್ನು ಬಹಿರಂಗಗೊಳಿಸುವ ಯೋಚನೆಯಲ್ಲಿದ್ದರು. ಆದರೆ ಚಿತ್ರಾ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ.
This News Article is a Copy of FILMIBEAT
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm