ಬ್ರೇಕಿಂಗ್ ನ್ಯೂಸ್
18-12-20 03:00 pm Source: News 18 Kannada ಸಿನಿಮಾ
ಗಾಯಕ...ಬಿಗ್ಬಾಸ್ ರನ್ನರ್ ಅಪ್, ಸಂಗೀತ ನಿರ್ದೇಶಕ...ಹೀಗೆ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿರುವ ನವೀನ್ ಸಜ್ಜು ಇದೀಗ ಹೀರೋ ಆಗಿ ಕಾಣಿಸಿಕೊಳ್ಳಲು ಸಕಲ ಸಿದ್ದತೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ನವೀನ್ ಸಜ್ಜು ನಾಯಕನಾಗಿ ತೆರೆಮೇಲೆ ಕಾಣಿಸಿಕೊಳ್ಳಬೇಕಿತ್ತು. ಬಿಗ್ ಬಾಸ್ನಿಂದ ಬಂದ ಬೆನ್ನಲ್ಲೇ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಕೇಳಿ ಬಂದಿತ್ತು. ಆದರೆ ಆ ಸಿನಿಮಾ ಕಾರಣಾಂತರಗಳಿಂದ ಮುಂದಕ್ಕೆ ಹೋಗಲೇ ಇಲ್ಲ. ಇದಾದ ಬಳಿಕ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್ ಹೇಳಿದ ಕಥೆಗೆ ನವೀನ್ ಸಜ್ಜು ಓಕೆ ಅಂದಿದ್ದರು.
ಆ ಚಿತ್ರದ ಕಥೆ ಏನಾಯ್ತು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ನವೀನ್ ಸಜ್ಜು ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಹೆಸರು ಮ್ಯಾನ್ಷನ್ ಹೌಸ್ ಮುತ್ತು. ಅರೆರೆ ಇದೇನಪ್ಪಾ ವಿಭಿನ್ನ ಟೈಟಲ್ ಎಂದು ನೀವಂದುಕೊಂಡರೆ, ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ ಅಂತಾರೆ ನಿರ್ದೇಶಕರು. ಹೌದು, ಮ್ಯಾನ್ಷನ್ ಹೌಸ್ ಮುತ್ತು ಚಿತ್ರದ ಕಥೆ ನಡೆಯುವುದು ಒಂದು ಮನೆಯ ಸುತ್ತ ಮುತ್ತ ಎಂಬುದು ವಿಶೇಷ.
ಅಂದ್ರೆ ಇದು ದೆವ್ವ-ಪಿಶಾಚಿ ಚಿತ್ರನಾ ಎಂದು ನೀವು ಕೇಳಿದ್ರೆ ಸಜ್ಜು ಕಡೆಯಿಂದ ಸಿಗುವ ಉತ್ತರ ನೋ ನೋ. ಬದಲಾಗಿ ಪರಿಸರ ಪ್ರೇಮಿ ಮುತ್ತುವಿನ ಸುತ್ತ ನಡೆಯುವ ಕಥೆ. ಚಿತ್ರದಲ್ಲಿ ನಾಯಕನಿಗೆ ಪರಿಸರದ ಮೇಲೆ ವಿಪರೀತ ಪ್ರೀತಿ. ಅದರೊಂದಿಗೆ ಕಷ್ಟಕ್ಕೆ ಕರಗುವ ಮನಸ್ಸು...ಇಂತಹ ನಾಯಕನಿಗೆ ಎದುರಾಗುವ ಸಮಸ್ಯೆಗಳು, ಪರಿಸರವನ್ನು ಉಳಿಸಲು ಮಾಡುವ ಪ್ರಯತ್ನಗಳನ್ನು ಎಳೆ ಎಳೆಯಾಗಿ ಕಟ್ಟಿಕೊಡಲಿದ್ದಾರೆ ನಿರ್ದೇಶಕ ಕುಮಾರ್.

ಸದ್ಯ ಮ್ಯಾನ್ಷನ್ ಮುತ್ತು ಚಿತ್ರವು 25 ದಿನಗಳ ಚಿತ್ರೀಕರಣವನ್ನು ಮುಗಿಸಿದ್ದು, ಮಡಿಕೇರಿಯ ಪ್ರಕೃತಿ ರಮಣೀಯ ಸ್ಥಳಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇನ್ನು ಚಿತ್ರದ ಟೈಟಲ್ನಿಂದಲೇ ನವೀನ್ ಸಜ್ಜು ಅವರ ಚೊಚ್ಚಲ ಚಿತ್ರದ ಬಗ್ಗೆ ಟಾಕುಗಳು ಶುರುವಾಗಿದ್ದು, ಸಜ್ಜು ಅವರ ಹೊಸ ಅವತಾರವನ್ನು ನೋಡಲು ಇತ್ತ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಎರಡನೇ ಚಿತ್ರದ ಮೂಲಕ ನಿರ್ದೇಶಕ ಕುಮಾರ್ ಹಾಗೂ ಮೊದಲ ಸಿನಿಮಾ ಮುಖಾಂತರ ನವೀನ್ ಸಜ್ಜು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಭಿನ್ನ ಕಥೆಯೊಂದಿಗೆ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಜೊತೆ ಅತ್ಯುತ್ತಮ ಸಂದೇಶ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
This News Article is a Copy of News 18 Kannada
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm