ಬ್ರೇಕಿಂಗ್ ನ್ಯೂಸ್
17-12-20 09:42 pm Headline Karnataka News Network ಸಿನಿಮಾ
ಮುಂಬೈ, ಡಿ.17: ಬಾಲಿವುಡ್ ಡ್ರಗ್ ಪ್ರಕರಣ ಸಂಬಂಧಿಸಿ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ಗೆ ಎನ್ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಬಾಲಿವುಡ್ ನಟ- ನಟಿಯರ ಮಾದಕವಸ್ತು ಜಾಲದ ನಂಟಿನ ಬಗ್ಗೆ ಎನ್ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗಾಗ್ಲೇ ಹಲವು ನಟ-ನಟಿಯರನ್ನು ವಿಚಾರಣೆಗೊಳಪಡಿಸಿರುವ ಅಧಿಕಾರಿಗಳು ಈಗ ನಿರ್ಮಾಪಕ ಕರಣ್ ಜೋಹರ್ಅವರನ್ನು ವಿಚಾರಣೆಗೆ ಕರೆದಿದ್ದಾರೆ.
ನಟ ಸುಶಾಂತ್ ಸಿಂಗ್ ಅಸಹಜ ಸಾವು ಪ್ರಕರಣದ ಬಳಿಕ ಬಾಲಿವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವ ವಿಚಾರ ಹೊರಬಿದ್ದಿತ್ತು. ನಟಿಯರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರ ಆಪ್ತರು ಡ್ರಗ್ಸ್ ಸರಬರಾಜು ಮಾಡುವ ಆರೋಪ ಕಂಡುಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎನ್ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕರಣ್ ಜೋಹರ್ ಬಗ್ಗೆ ಈ ಮೊದಲೇ ಹಲವು ಬಾರಿ ಅನುಮಾನಗಳು ವ್ಯಕ್ತವಾಗಿದ್ದವು. ಕರಣ್ ಪಾಲುದಾರಿಕೆ ಹೊಂದಿದ್ದ ಮ್ಯಾನೇಜ್ಮೆಂಟ್ ಕಂಪನಿಗಳ ಮ್ಯಾನೇಜರ್ ಸಿಕ್ಕಿಬಿದ್ದ ವೇಳೆ ಕರಣ್ ವಿಚಾರಣೆ ಆಗುತ್ತೆ ಎನ್ನಲಾಗಿತ್ತು. ಈಗ ಕೊನೆಗೂ ನೋಟಿಸ್ ಜಾರಿಯಾಗಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, 47 ವರ್ಷದ ನಟ ಅರ್ಜುನ್ ರಾಂಪಾಲ್ಗೂ ಎರಡನೇ ಬಾರಿ ನೋಟೀಸ್ ನೀಡಿ ವಿಚಾರಣೆಗೆ ಕರೆದಿತ್ತು. ಆದರೆ, ಅರ್ಜುನ್ ರಾಂಪಾಲ್ ಒಂದು ವಾರ ಕಾಲಾವಕಾಶ ಕೋರಿದ್ದಾರೆ. ನವೆಂಬರ್ 13 ರಂದು ಮೊದಲ ಬಾರಿ, ಎನ್ಸಿಬಿ ಸುಮಾರು ಏಳು ಗಂಟೆಗಳ ಕಾಲ ನಟ ರಾಂಪಾಲ್ ಅವರನ್ನು ವಿಚಾರಣೆ ನಡೆಸಿತ್ತು. ನಟನ ಆಸ್ಟ್ರೇಲಿಯಾದ ಸ್ನೇಹಿತ ಪಾಲ್ ಬಾರ್ಟೆಲ್ ಅವರನ್ನು ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧಿಸಿದ ನಂತರ ಇವರನ್ನು ಪ್ರಶ್ನಿಸಲಾಗಿತ್ತು. ಇದೇ ನಂಟಿನಲ್ಲಿ ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮತ್ತು ಅವರ ಪತಿಯನ್ನು ಎನ್ಸಿಬಿ ವಿಚಾರಣೆ ನಡೆಸಿತ್ತು. ನಂತರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.
In the latest piece of news, the Narcotics Control Bureau (NCB) on Thursday issued summons to director-producer Karan Johar in the Bollywood drugs nexus case.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm