ಬ್ರೇಕಿಂಗ್ ನ್ಯೂಸ್
07-12-20 11:25 am Source: FILMIBEAT ಸಿನಿಮಾ
ಖ್ಯಾತ ನಾಮರ ಹೆಸರನ್ನು ತಮ್ಮ ವೈಯಕ್ತಿಕ ಲಾಭಕ್ಕೆ ವಿಧ-ವಿಧವಾಗಿ ಬಳಸಿಕೊಳ್ಳುವರ ಸಂಖ್ಯೆ ಹೆಚ್ಚಿಗೆ ಇದೆ. ಗಾಂಧಿ ನಗರದಲ್ಲಿಯಂತೂ ಈ ಸಂಖ್ಯೆ ತುಸು ಹೆಚ್ಚೇ.
ನಟ-ನಟಿಯರ ಹೆಸರು ಹೇಳಿಕೊಂಡು ದುಡ್ಡು ಹೊಡೆಯುವುದು, ಮೋಸ ಮಾಡುವುದು ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ನಟ-ನಟಿಯರು ನೇರವಾಗಿ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರಾದರೂ ಆಗೊಮ್ಮೆ-ಈಗೊಮ್ಮೆ ಇಂಥಹಾ ಘಟನೆಗಳು ವರದಿ ಆಗುತ್ತಲೇ ಇರುತ್ತವೆ.
ಇದೀಗ ನಟ ಧನಂಜಯ್ ಹೆಸರು ಬಳಸಿಕೊಂಡು ವಂಚನೆ ನಡೆಸುತ್ತಿರುವ ಘಟನೆ ಗಮನಕ್ಕೆ ಬಂದಿದ್ದು, ಸ್ವತಃ ನಟ ಧನಂಜಯ್ ಇಂಥಹಾ ಸುಳ್ಳುಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
'ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನವ ಯುವಕ-ಯುವತಿಯರು ನಟ-ನಟಿಯರಾಗಿ ಬೇಕಾಗಿದ್ದಾರೆ. ಆಸಕ್ತಿ ಇದ್ದವರು ನನಗೆ ಸಂದೇಶ ಕಳುಹಿಸಿ' ಎಂಬ ಪೋಸ್ಟ್ ಒಂದು ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಆಕಾಶ್ ಗೌಡ ಎಂಬಾತ ಹಾಕಿರುವ ಇಂಥಹುದೇ ಪೋಸ್ಟ್ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಡಾಲಿ ಧನಂಜಯ್, 'ಇಂಥಹುಗಳನ್ನು ನಂಬಿ ಮೋಸಹೋಗಬೇಡಿ' ಎಂದು ಬರೆದುಕೊಂಡಿದ್ದಾರೆ.
'ಈ ಥರಹದ ಪೋಸ್ಟ್ಗಳನ್ನು ನಂಬಿ ಮೋಸಹೋಗಬೇಡಿ. ಈ ಥರಹದ ಎರಡು ಮೂರು ಘಟನೆಗಳು ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆಯಿಂದಿರಿ, ಏನನ್ನಾದರೂ ನಂಬುವುದಕ್ಕೆ ಮುನ್ನಾ ಹಿಮ್ಮಾಹಿತಿ ಕಲೆಹಾಕಿ, ತುಲನೆಗೆ ಒಳಪಡಿಸಿ' ಎಂದು ಧನಂಜಯ್ ಮನವಿ ಮಾಡಿದ್ದಾರೆ.
ನಿನ್ನೆ ವಿಡಿಯೋ ಒಂದರಲ್ಲಿ ಮಾತನಾಡಿದ್ದ ಮಾಸ್ಟರ್ ಆನಂದ್ ಸಹ ಇಂಥಹುದೇ ವಿಷಯದ ಬಗ್ಗೆ ಮಾತನಾಡಿದ್ದರು. 'ನನ್ನ ಹೆಸರಲ್ಲಿ ಕೆಲವರು ಕಾಸ್ಟಿಂಗ್ ಕಾಲ್ಗಳನ್ನು ನೀಡಿದ್ದಾರೆ. ಆದರೆ ಅಂಥಹುವನ್ನು ನಂಬಬೇಡಿ, ನಾನು ಹೊಸ ಧಾರಾವಾಹಿ ಮಾಡುತ್ತಿದ್ದು, ಅದರ ಕಾಸ್ಟಿಂಗ್ ಕಾಲ್ ಅನ್ನು ನಾನೇ ಕೊಡುತ್ತಿದ್ದೇನೆ' ಎಂದು ಹೇಳಿ ಇಮೇಲ್, ಇತರೆ ಮಾಹಿತಿಗಳನ್ನು ನೀಡಿದ್ದಾರೆ.
This News Article is a Copy of FILMIBEAT
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm