ಬ್ರೇಕಿಂಗ್ ನ್ಯೂಸ್
22-11-20 03:53 pm Headline Karnataka News Network ಸಿನಿಮಾ
ಚೆನ್ನೈ, ನವೆಂಬರ್ 22: ತಮಿಳಿನ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಮುಂಬೈನಲ್ಲಿ ಫಿಸಿಯೋಥೆರಪಿಸ್ಟ್ ವೈದ್ಯೆ ಆಗಿರುವ ಯುವತಿಯನ್ನು ಪ್ರೀತಿಸಿ ಪ್ರಭುದೇವ ಮದುವೆಯಾಗಿದ್ದಾರೆ.
ಲಾಕ್ಡೌನ್ ಇರುವಾಗಲೇ ಕಳೆದ ಮೇ ತಿಂಗಳಲ್ಲಿ ಪ್ರಭುದೇವ್ ಚೆನ್ನೈನಲ್ಲಿ ಮದುವೆಯಾಗಿದ್ದರು. ಲಾಕ್ಡೌನ್ ಕಾರಣ ಕೇವಲ ಕುಟುಂಬಸ್ಥರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಪ್ರಭುದೇವ್ ಸೋದರ ರಾಜು ಸುಂದರಂ ಮಾಧ್ಯಮಕ್ಕೆ ತಿಳಿಸಿದ್ದಾರೆ.
47 ವರ್ಷದ ಪ್ರಭುದೇವ್ ಇತ್ತೀಚೆಗೆ ಗೌಪ್ಯವಾಗಿ ಮದುವೆಯಾಗಿದ್ದಾರೆಂದು ಸುದ್ದಿ ಹಬ್ಬಿತ್ತು. ಆದರೆ, ಇದರ ಬಗ್ಗೆ ಪ್ರಭು ಆಗಲೀ, ಕುಟುಂಬಸ್ಥರಾಗಲೀ ದೃಢಪಡಿಸಿರಲಿಲ್ಲ. ಇದೀಗ ಪ್ರಭುದೇವ್ ಸೋದರ, ಸಂದರ್ಶನ ಒಂದರಲ್ಲಿ ಈ ವಿಚಾರವನ್ನು ದೃಢಪಡಿಸಿದ್ದಾರೆ. ಅಲ್ಲದೆ, ಪ್ರಭುದೇವಗೆ ಪ್ರೀತಿ ಹುಟ್ಟಿದ್ದು ಹೇಗೆ ಎನ್ನುವ ವಿಚಾರವನ್ನೂ ಹೊರಗೆಡವಿದ್ದಾರೆ.
ಪ್ರಭುದೇವ್, ಕಳೆದ ವರ್ಷ ಕಾಲು ಮತ್ತು ಬೆನ್ನು ನೋವಿನ ಕಾರಣಕ್ಕೆ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದ ಹಿಮಾನಿ ಜೊತೆಗೆ ಪರಿಚಯ ಆಗಿ ಪ್ರೀತಿ ಬೆಳೆದಿತ್ತು. ಆನಂತರ ಎರಡು ತಿಂಗಳ ಕಾಲ ಹಿಮಾನಿ ಜೊತೆಗೆ ಲೀವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಮೇ ತಿಂಗಳಲ್ಲಿ ಮದುವೆಯಾಗಿದ್ದಾರೆ ಎಂದಿದ್ದಾರೆ.
ಈ ಹಿಂದೆ ರಾಮ್ ಲತಾ ಎಂಬವರ ಜೊತೆ ಮೊದಲ ಮದುವೆಯಾಗಿದ್ದ ಪ್ರಭುದೇವ್, ಆನಂತರ ಆಕೆಯನ್ನು ತ್ಯಜಿಸಿದ್ದರು. ಈ ನಡುವೆ ನಟಿ ನಯನತಾರಾ ಜೊತೆಗೆ ಮದುವೆಯಾಗುತ್ತಾರೆಂದು ಗಾಸಿಪ್ ಹರಡಿತ್ತು. ಆದರೆ, ದಿಢೀರ್ ಆಗಿ ಮುಂಬೈ ಮೂಲದ ವೈದ್ಯೆಯನ್ನು ಮದುವೆಯಾಗಿ ಪ್ರಭು ಅಚ್ಚರಿ ಮೂಡಿಸಿದ್ದಾರೆ.
Filmmaker-choreographer Prabhu Deva married a Mumbai-based doctor earlier this year, confirmed his brother Raju Sundaram in an interview to times. The 47-year-old choreographer got married to a doctor named Himani in May during the lockdown, reported times.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm