ಬ್ರೇಕಿಂಗ್ ನ್ಯೂಸ್
01-09-23 02:17 pm Source: News18 Kannada ಸಿನಿಮಾ
ಡಿವೈನ್ ಸ್ಟಾರ್ ಇನ್ನು ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆದ ಕನ್ನಡ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಮುಗಿದ ನಂತರ ಏನ್ ಮಾಡ್ತಾರೆ? ಕಾಂತಾರ ಹಿಟ್ ಆಯ್ತು. ಕಾಂತಾರ 2 ಸಿನಿಮಾದ ಸ್ಕ್ರಿಪ್ಟ್ ಕೂಡಾ ರೆಡಿಯಾಗಿದೆ. ಇನ್ನೇನು ಮೂವಿ ಶೂಟಿಂಗ್ ಶುರುವಾಗಬೇಕು. ಸರಿ, ಆದ್ರೆ ಈ ಸಿನಿಮಾವನ್ನು ಮುಗಿಸಿ ರಿಷಬ್ ಶೆಟ್ಟಿ ಏನು ಮಾಡುತ್ತಾರೆ? ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸ್ತಾರಾ ಅಥವಾ ನಟನಾಗಿ ಮಿಂಚುತ್ತಾರಾ?
ಹೀಗೊಂದು ಕುತೂಹಲ ಎಲ್ಲರಲ್ಲೂ ಇದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಾಂತಾರ 2 ನಂತರ ಬಾಲಿವುಡ್ ಡೈರೆಕ್ಟರ್ ಜೊತೆ ಮೂವಿ ಮಾಡಲಿದ್ದಾರೆ. ಅದೂ ಸಾಮಾನ್ಯ ಡೈರೆಕ್ಟರ್ ಅಲ್ಲ, ಜೋಧಾ ಅಕ್ಬರ್, ಲಗಾನ್, ಮೊಹೆಂಜದಾರೋದಂತಹ ಸಿನಿಮಾ ನಿರ್ದೇಶಿಸಿದ ಬಾಲಿವುಡ್ ನಿರ್ದೇಶಕ. ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವರಿಕೆರ್ ಅವರು ರಿಷಬ್ ಶೆಟ್ಟಿ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು ಕಾಂತಾರ 2 ಸಿನಿಮಾ ಮುಗಿಯುತ್ತಿದ್ದಂತೆ ಈ ಸಿನಿಮಾದ ಕೆಲಸಗಳು ಶುರುವಾಗಲಿದೆಯಂತೆ.


ಈ ಒಂದು ಸುದ್ದಿಯನ್ನು ಹಿರಿಯ ಸಿನಿಮಾ ವರದಿಗಾದ ಹಿಮೇಶ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ಸಿನಿಮಾ ಹಿಂದಿ, ತೆಲುಗು, ತಮಿಳು, ತೆಲುಗು, ಕನ್ನಡದಲ್ಲಿ ರಿಲೀಸ್ ಆಗಲಿದೆ. ಅಶುತೋಷ್ ಹಾಗೂ ರಿಷಬ್ ಮಧ್ಯೆ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಕಳೆದ ತಿಂಗಳಲ್ಲಿ ಇವರಿಬ್ಬರೂ ಹಲವಾರು ಬಾರಿ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಇದೀಗ ಇಬ್ಬರೂ ಮೊದಲ ಸಿನಿಮಾದ ಕೆಲಸ ಶುರು ಮಾಡಲು ರೆಡಿಯಾಗಿದ್ದಾರೆ.


2024 ಅರ್ಧದದಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಕಾಂತಾರ 2 ಸಿನಿಮಾದ ಶೆಡ್ಯೂಲ್ಗೆ ಅವಲಂಬಿಸಿ ಈ ಸಿನಿಮಾ ಸೆಟ್ಟೇರಲಿದೆ. ಲಗಾನಗ ಸ್ವದೇಶ್, ಜೋಧಾ ಅಕ್ಬರ್, ಖೇಲೇ ಅಶುತೋಷ್ ಅವರ ಹಿಟ್ ಸಿನಿಮಾಗಳು.
Lagan Fame Bollywood Director Ashutosh Gowariker to Direct Kantara Fame Rishab Shetty.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm