ಬ್ರೇಕಿಂಗ್ ನ್ಯೂಸ್
23-08-23 12:43 pm Source: News18 Kannada ಸಿನಿಮಾ
ಕೆವಿಎನ್ ಪ್ರೊಡಕ್ಷನ್ ಹೌಸ್ ಜೊತೆಗೆ ಯಶ್ ಒಂದು ಸಿನಿಮಾ ಮಾಡೋರಿದ್ದಾರೆ. ಈ ಸಿನಿಮಾ ಕಥೆಯ ವಿಚಾರದಲ್ಲಿ ಮಫ್ತಿ ಡೈರೆಕ್ಟರ್ ನರ್ತನ್ ಕೂಡ ಹೇಳಿಕೊಂಡಿದ್ದರು. ಅವರೆ ಒಂದು ಸಿನಿಮಾ ಮಾಡೋರಿದ್ದರು. ಅದು ಹಲವು ಕಾರಣಗಳಿಂದ ಸಾಧ್ಯವಾಗಲಿಲ್ಲ ಅನ್ನುವ ಮಾಹಿತಿ ಇದೆ.
ರಾಕಿಂಗ್ ಸ್ಟಾರ್ ಯಶ್-19 ಸಿನಿಮಾ ಎಲ್ಲಿಗೆ ಬಂತು?
ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೆ ಒಂದು ವಿಚಾರವನ್ನ ತಿಳಿಸಿದ್ದರು. ದೊಡ್ಡಮಟ್ಟದಲ್ಲಿಯೇ ಬರೋ ಪ್ಲಾನ್ ಇದೆ. ಎಲ್ಲ ತಯಾರಿ ಕೂಡ ನಡೆಯುತ್ತಿದೆ. ಅತಿ ಶೀಘ್ರದಲ್ಲಿಯೇ ಎಲ್ಲ ಹೇಳೋದಾಗಿ ತಿಳಿಸಿದ್ದರು.

ಹಾಗೆ ಈ ಒಂದು ಮಾತು ಹೇಳಿ ಹೆಚ್ಚು ಕಡಿಮೆ ಮೂರ್ನಾಲ್ಕು ತಿಂಗಳೇ ಆಗಿವೆ. ಆದರೂ ಇಲ್ಲಿವರೆಗೂ ಏನೂ ಅಪ್ಡೇಟ್ಸ್ ಹೊರ ಬಿದ್ದಿಲ್ಲ ಬಿಡಿ. ಈ ನಡುವೆ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ಜಾಹೀರಾತು ಮಾಡಿದ್ದಾರೆ. ಅದು ಈಗಾಗಲೇ ಪ್ರಸಾರ ಕೂಡ ಆಗುತ್ತಿದೆ.
ಕೆವಿಎನ್ ಪ್ರೊಡಕ್ಷನ್ ಹೌಸ್ ಬಿಗ್ ನ್ಯೂಸ್ ಏನು?
ಇದರ ಮಧ್ಯೆ ಕೆವಿಎನ್ ಪ್ರೊಡಕ್ಷನ್ ಹೌಸ್ ಒಂದು ಬಿಗ್ ಅನೌನ್ಸ್ಮೆಂಟ್ ಕೊಡ್ತಿದೆ. ಅದೇನೂ ಅನ್ನೋದರ ಸುಳಿವೂ ಕೂಡ ಇಲ್ವೇ ಇಲ್ಲ. ಆದರೆ ಈ ಮೂಲಕ ಕುತೂಹಲ ದಿನವೂ ಜಾಸ್ತಿ ಆಗುತ್ತಿದೆ. ಇದನ್ನ ತಿಳಿಯೋಕೆ ಇದೇ ತಿಂಗಳ 25 ರಂದು ಕಾಯಲೇಬೇಕು ನೋಡಿ.

ಬಿಗ್ ಅನೌನ್ಸ್ಮೆಂಟ್ಗೆ ಕೌಂಟ್ಡೌನ್ ಶುರು
ವರಮಹಾಲಕ್ಷ್ಮಿ ಹಬ್ಬಕ್ಕೇನೆ ಈ ಒಂದು ಬಿಗ್ ಅನೌನ್ಸ್ಮೆಂಟ್ ಹೊರ ಬೀಳುತ್ತಿದೆ. ಕೌಂಟ್ಡೌನ್ ಕೂಡ ಈಗಾಗಲೇ ಶುರು ಆಗಿದೆ. ಒಂದು ವೇಳೆ ಈ ಬಿಗ್ ಅನೌನ್ಸ್ಮೆಂಟ್ ಯಶ್ ಸಿನಿಮಾದ್ದೇ ಆದ್ರೆ, ಕೆಜಿಎಫ್-3 ಕಥೆ ಏನ್ ಆಗುತ್ತದೆ.
ರಾಕಿ ಭಾಯ್ ಕೆಜಿಎಫ್-3 ಸಿನಿಮಾ ಯಾವಾಗ?
ಆದರೂ ಮೊನ್ನೆಯಿಂದಲೇ ಒಂದು ಸುದ್ದಿ ಹರಿದಾಡ್ತಾನೇ ಇದೆ. ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬೇರೆ ಯಾವುದೇ ಅಲ್ಲ. ಅದು ಕೆಜಿಎಫ್-3 ಅನ್ನೋ ಮಾಹಿತಿ ಇದೆ. ಡೈರೆಕ್ಟರ್ ಪ್ರಶಾಂತ್ ರೆಡಿ ಆಗುತ್ತಿದ್ದಾರೆ. ಸಲಾರ್ ಸಿನಿಮಾದ ಕೆಲಸ ಮುಗಿಸಿದ ಕೂಡಲೇ ಕೆಜಿಎಫ್ ಸಿನಿಮಾ ಕಥೆ ಬರೆಯೋಕೆ ಶುರು ಮಾಡ್ತಾರೆ ಅನ್ನುವ ಸುದ್ದಿ ವೈರಲ್ ಆಗಿದೆ.
ಆದರೆ ಕೆಜಿಎಫ್ -3 ಅಂದುಕೊಂಡಂತೆ ಶುರು ಆಗುತ್ತದೆಯೇ ಅನ್ನುವ ಪ್ರಶ್ನೆ ಕೂಡ ಇದೆ. ಆದರೆ ಸದ್ಯ ಎಲ್ಲವೂ ಪ್ರಶ್ನೆಗಳೆ ಆಗಿವೆ. ಉತ್ತರಕ್ಕಾಗಿ ಫ್ಯಾನ್ಸ್ ಮತ್ತು ಸಿನಿಮಾ ಲವರ್ಸ್ ಕಾಯಲೇಬೇಕಾಗಿದೆ.
ಈ ನಡುವೆ ಇನ್ನೂ ಒಂದು ಸುದ್ದಿ ಕೂಡ ಹರಿದಾಡಿದೆ. ಮಲೆಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ಅವರ ಸುತ್ತವೇ ಈ ಸುದ್ದಿ ಇದೆ. ರಾಕಿಂಗ್ ಸ್ಟಾರ್ ಯಶ್ ಇವರೊಟ್ಟಿಗೆ ಸಿನಿಮಾ ಮಾಡ್ತಾರೆ ಅನ್ನೋದೇ ಆಗಿದೆ. ಕಥೆ ಕೂಡ ಇಷ್ಟ ಆಗಿದೆ. ಇನ್ನೇನು ಯಶ್-19 ಸಿನಿಮಾ ಅದೇ ಆಗಿರುತ್ತದೆ ಅನ್ನುವ ಸುದ್ದಿ ಕೂಡ ಇದೆ.
Sandalwood Rocking Star Yash 19 Cinema Viral News.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm