ಬ್ರೇಕಿಂಗ್ ನ್ಯೂಸ್
17-08-23 03:08 pm Source: News18 Kannada ಸಿನಿಮಾ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ ಕೆಬಿಸಿ 15ನಲ್ಲಿ ಹೊಸ ವಿಚಾರವೊಂದನ್ನು ಶೇರ್ ಮಾಡಿದ್ದಾರೆ. ಕೌನ್ ಬನೇಗಾ ಕರೋಡ್ಪತಿ 15ರಲ್ಲಿ ಅಮಿತಾಭ್ ಬಚ್ಚನ್ ಅವರು ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿಕೊಂಡರು. ಬುಧವಾರ ರಾತ್ರಿ ಪ್ರಸಾರವಾದ ಎಪಿಸೋಡ್ನಲ್ಲಿ ಅಮಿತಾಭ್ ಬಚ್ಚನ್ ಅವರು ಕಪಿಲ್ ದೇವ್ ಎಂಬ ಸ್ಪರ್ಧಿ ಜೊತೆಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರು ಸ್ಪರ್ಧಿಯಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.
ಇದರ ಮಧ್ಯೆ ಮೈ ಲೈಫ್ ಇನ್ ಡಿಸೈನ್ ಎನ್ನುವುದು ಯಾರ ಪತ್ನಿ ಬರೆದ ಪುಸ್ತಕ ಎಂದು ಕೇಳಿದ್ದಾರೆ. ಉತ್ತರದಲ್ಲಿ ಸಚಿನ್ ತೆಂಡುಲ್ಕರ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಚೇತನ್ ಭಗತ್ ಆಗಿತ್ತು. ಸ್ಪರ್ಧಿ ತಕ್ಷಣದೇ ಶಾರುಖ್ ಖಾನ್ ಎಂದು ಉತ್ತರಿಸಿದ್ದಾರೆ. ಅದನ್ನು ಮೆಚ್ಚಿದ ಅಮಿತಾಭ್ ಬಚ್ಚನ್ ಅವರು ಈ ಪುಸ್ತಕದ ಬಗ್ಗೆ ವಿವರಿಸಿದರು. ನಂತರ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದರು. ನಾನು ಗೌರಿ ಖಾನ್ ಅವರ ಇಂಟೀರಿಯರ್ ಡಿಸೈನ್ಗಳನ್ನು ನೋಡಿದ್ದೇನೆ. ಇತ್ತೀಚೆಗೆ ನಾನು ಶಾರುಖ್ ಖಾನ್ ಅವರೊಂದಿಗೆ ಶೂಟಿಂಗ್ ಮಾಡುತ್ತಿದ್ದೆ. ಮಾತನಾಡುತ್ತಾ ನಾನು ಶಾರುಖ್ ಅವರ ವ್ಯಾನಿಟಿ ವ್ಯಾನ್ ಒಳಗೆ ಹೋದೆ.
ಅದನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಲಾಗಿತ್ತು. ಅಲ್ಲಿ ಟಿವಿ, ಸ್ಲೈಡಿಂಗ್ ಸೋಫಾ, ಕಿಚನ್, ಹಾಗೂ ಇತರ ಎಲ್ಲ ವ್ಯವಸ್ಥೆಗಳಿದ್ದವು. ಈ ವ್ಯಾನ್ ಗೌರಿ ಡಿಸೈನ್ ಮಾಡಿದ್ದು ಎಂದಿದ್ದರು ಶಾರುಖ್ ಖಾನ್. ನಾನು ನಿಮಗಾಗಿ ಒಂದು ಡಿಸೈನ್ ಮಾಡಲು ಹೇಳುತ್ತೇನೆ ಎಂದು ಶಾರುಖ್ ನನಗೆ ಹೇಳಿದ್ದರು. ಆದರೆ ಇನ್ನೂ ಬಂದಿಲ್ಲ ಎಂದು ಜೋರಾಗಿ ನಕ್ಕಿದ್ದಾರೆ ಬಿಗ್ ಬಿ. ಗೌರಿ ಖಾನ್ ಅವರ ಪುಸ್ತಕ ಈ ವರ್ಷ ಆರಂಭದಲ್ಲಿ ಬಿಡುಗಡೆಯಾಯಿತು.
ಈ ಪುಸ್ತಕದಲ್ಲಿ ಶಾರುಖ್ ಅವರ ಮನೆಯ ಸಮೀಪದ ಚಿತ್ರಣವನ್ನು ಕೊಡಲಾಗಿದೆ. ವೋಗ್ ಇಂಡಿಯಾ ಜೊತೆ ಮಾತನಾಡಿದ ಗೌರಿ ಖಾನ್, ಓದುಗರು ಅವರಿಗೆ ಇಷ್ಟವಾದ ವಿಚಾರ ಯಾವುದು ಎನ್ನುವುದನ್ನು ಹೇಳಬೇಕು. ಇದರಲ್ಲಿ ಹಲವಾರು ಚಿತ್ರಗಳಿವೆ ಎಂದಿದ್ದರು.
KBC 15 Amitabh Bachchan says SRK Offered to ask Gauri to Revamp his Vanity Van.
29-04-25 09:20 pm
HK News Desk
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm