ಬ್ರೇಕಿಂಗ್ ನ್ಯೂಸ್
16-08-23 02:49 pm Source: News18 Kannada ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್-19 ಸಿನಿಮಾ ಅನ್ನೋದೇ ಇವರ ಒಂದೇ ಒಂದು ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಉತ್ತರ ಸಿಗುವ ದಿನಗಳು ಸನಿಹಕ್ಕೆ ಬರ್ತಿವೆ. ಯಶ್ ಮುಂದಿನ ಸಿನಿಮಾ ಬೇರೆ ಯಾವುದೋ ಅಲ್ಲ. ಅದು ಕೆಜಿಎಫ್-೩ ಚಿತ್ರವೇ ಆಗಲಿದೆ.
ಈ ಒಂದು ಸುದ್ದಿ ಮೊನ್ನೆಯಿಂದಲೇ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಇನ್ನೇನು ತಮ್ಮ ಕೆಜಿಎಫ್-3 ಚಿತ್ರದ ಸ್ಕ್ರಿಪ್ಟ್ ವರ್ಕ್ ಕೂಡ ಶುರು ಮಾಡ್ತಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಆದರೆ ಇದರ ಬೆನ್ನಲ್ಲಿಯೇ ಇನ್ನೂ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಸಲಾರ್-2 ಸಿನಿಮಾ ಏನ್ ಆಯಿತು? ಜ್ಯೂನಿಯರ್ ಎನ್.ಟಿ.ಆರ್.ಸಿನಿಮಾ ಮಾಡೋದಿಲ್ವೇ? ಪ್ರಶಾಂತ್ ನೀಲ್ ಯಾಕೆ ಫ್ರೀ ಆದ್ರೂ ಅನ್ನೋದೇ ಆಗಿದೆ. ನಿಜ, ಈ ಒಂದು ಪ್ರಶ್ನೆಗೂ ಉತ್ತರ ರೂಪದ ಸುದ್ದಿಗಳು ಇವೆ. ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ.

ಡೈರೆಕ್ಟರ್ ಪ್ರಶಾಂತ್ ನೀಲ್ ಈಗ ಫ್ರೀ ಆದ್ರೇ?
ಸಲಾರ್ ಸಿನಿಮಾದ ಎಲ್ಲ ಕೆಲಸ ಮುಗಿಸಿದ ಬಳಿಕ ಕೆಜೆಎಫ್ ಚಿತ್ರದ ಸ್ಕ್ರಿಪ್ಟ್ ವರ್ಕ್ ಶುರು ಮಾಡಲಿದ್ದಾರೆ. ಸಲಾರ್-2 ಸಿನಿಮಾದ ಪ್ರೋಜೆಕ್ಟ್ ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಇದು ಕೆಜಿಎಫ್-3 ಆದ್ಮೇಲೆ ಶುರು ಆಗೋ ಚಾನ್ಸಸ್ ಇದೆ. ಇನ್ನು ಜೂನಿಯರ್ ಎನ್ಟಿಆರ್ ಸದ್ಯ ದೇವರು ಚಿತ್ರ ಮಾಡುತ್ತಿದ್ದಾರೆ. ಬಾಲಿವುಡ್ನ ವಾರ್-2 ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಲ್ಲಿಗೆ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ತಡವಾಗಲಿದೆ.
ಇನ್ನುಳಿದಂತೆ ಕೆಜಿಎಫ್-3 ಚಿತ್ರದ ನಿರೀಕ್ಷೆ ಜಾಸ್ತಿ ಇದೆ. ಚಿತ್ರದ ಎರಡೂ ಸರಣಿ ಇನ್ನೂ ಓಡ್ತಿವೆ. ಜಪಾನ್ನಲ್ಲಿ ಈ ಎರಡೂ ಚಿತ್ರದ ನೋಡಿದ ಜನ ಖುಷಿಯಾಗಿದ್ದಾರೆ. ತುಂಬಾನೆ ಎಂಜಾಯ್ ಮಾಡುತ್ತಿದ್ದಾರೆ. ಆ ಕ್ರೇಜ್ನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ.

ರಾಕಿ ಭಾಯ್ ಫ್ಯಾನ್ಸ್ ಫುಲ್ ಖುಷ್ ಆಗಿದ್ಯಾಕೆ?
ಇದರ ಮಧ್ಯೆ ಕೆಜಿಎಫ್-3 ಚಿತ್ರದ ಸುದ್ದಿ ರಾಕಿ ಭಾಯ್ ಫ್ಯಾನ್ಸ್ ದಿಲ್ ಖುಷ್ ಮಾಡಿದೆ. ಈ ಮೂಲಕ ಮತ್ತೆ ರಾಕಿ ಆನ್ ಸ್ಕ್ರೀನ್ ಅನ್ನೋದನ್ನ ನೆನಪಿಸಿಕೊಂಡು ಫ್ಯಾನ್ಸ್ ಸಂತೋಷ ಪಡ್ತಿದ್ದಾರೆ. ಈ ಒಂದು ಸುದ್ದಿಯೊಂದಿಗೆ ಒಂದಷ್ಟು ಕುತೂಹಲಗಳು ಹುಟ್ಟಿಕೊಂಡಿವೆ.
ಕೆಜಿಎಫ್ ಚಿತ್ರದ ಮೂರನೇ ಸರಣಿಯಲ್ಲಿ ರಾಕಿ ಭಾಯ್ ಕಥೆ ಹೇಗೆ ಸಾಗುತ್ತದೆ ಅನ್ನೋದೇ ಆಗಿದೆ. ಈ ಸಲ ಏನ್ ವಿಶೇಷ ಅನ್ನೋದು ಕೂಡ ಇದರ ಬೆನ್ನಲ್ಲಿಯೇ ಹುಟ್ಟಿದ ಕುತೂಹಲ ಆಗಿದೆ.
ಕೆಜಿಎಫ್-3 ಚಿತ್ರದ ಬಗ್ಗೆ ಇರೋ ಕ್ರೇಜ್ ಅಷ್ಟಿಷ್ಟಲ್ಲ ಬಿಡಿ. ಅಭಿಮಾನಿಗಳು ಕಾತರದಿಂದಲೇ ಕಾಯುತಿದ್ದಾರೆ. ಇವರ ಕಾತರಕ್ಕೆ ಅಧಿಕೃತ ಮಾಹಿತಿ ಯಾವಾಗ ಹೊರಬೀಳುತ್ತದೆ ಅನ್ನೊದೇ ಸದ್ಯದ ಕ್ವಶ್ಚನ್ ಆಗಿದೆ.
rocking Star yash 19 KGF3 movie Latest Viral News.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm