ಬ್ರೇಕಿಂಗ್ ನ್ಯೂಸ್
09-08-23 02:23 pm Source: News18 Kannada ಸಿನಿಮಾ
ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತಿಮ ದರ್ಶನ ನಡೆಯುತ್ತಿದ್ದು ಸಂಜೆ ನಾಲ್ಕು ಗಂಟೆಯ ವೇಳೆಗೆ ಅಂತಿಮ ಸಂಸ್ಕಾರ ನಡೆಯಲಿದೆ. ಈ ಮಧ್ಯೆ ಸ್ಪಂದನಾ ಅವರ ಹಳೆಯ ಕೆಲವು ಫೋಟೋಗಳು ವೈರಲ್ ಆಗಿವೆ. ಸ್ಪಂದನಾ ತಮ್ಮ ಶೈಕ್ಷಣಿಕ ಜೀವನದ ಸಮಯದಲ್ಲಿ ಗೆಳತಿಯರೊಂದಿಗೆ ಹೋದ ಪ್ರವಾಸದ ಫೋಟೋ ಕೂಡಾ ವೈರಲ್ ಆಗಿದೆ. ಇದರಲ್ಲಿ ನದಿಯೊಂದರ ತಡದಲ್ಲಿ ಗೆಳತಿಯರೊಂದಿಗೆ ಸ್ಪಂದನಾ ನಿಂತಿರುವುದುನ್ನು ಕಾಣಬಹುದು.
ಆಕಾಶ ನೀಲಿ ಬಣ್ಣ ಹಾಗೂ ನೇರಳೆ ಬಣ್ಣದ ಕಾಂಬಿನೇಷನ್ನ ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟ ಸ್ಪಂದನಾ ಅವರ ಹಳೆಯ ಫೋಟೋ ವೈರಲ್ ಆಗಿದೆ. ಇದರಲ್ಲಿ ಸ್ಪಂದನಾ ಸಿಂಪಲ್ ಆಗಿ ಸುಂದರವಾಗಿ ಕಾಣಿಸಿದ್ದಾರೆ. ಸ್ಪಂದನಾ ವಿಜಯ್ ರಾಘವೇಂದ್ರ ಅವರ ಗೆಳತಿಯರೂ ಅವರ ಅಂತಿಯ ದರ್ಶನ ಪಡೆದರು. ಸ್ಯಾಂಡಲ್ವುಡ್ ಗಣ್ಯರು ಅಂತಿಮ ದರ್ಶನ ಮಾಡಿ ನಟ ರಾಘು ಅವರಿಗೆ ಸಾಂತ್ವನ ಹೇಳಿದ್ದಾರೆ.
ಬ್ಯಾಂಕಾಕ್ನಲ್ಲಿ ಪ್ರವಾಸದಲ್ಲಿದ್ದ ಸ್ಪಂದನಾ ಅಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಗೆಳೆತಿಯರೊಂದಿಗೆ ಪ್ರವಾಸ ಹೋಗಿದ್ದರು. ಇಂದು ಸಂಜೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಬ್ಯಾಂಕಾಕ್ನಿಂದ ಥಾಯ್ ವಿಮಾನದಲ್ಲಿ ಬಂದ ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಪಡೆದುಕೊಂಡಿದ್ದರು. ಬಳಿಕ ಮಲ್ಲೇಶ್ವರಂನ ಸ್ಪಂದನಾ ಅವರ ತವರು ಮನೆಗೆ ತೆಗೆದಕೊಂಡು ಹೋಗಲಾಗಿತ್ತು. ನಿನ್ನೆ ರಾತ್ರಿಯಿಂದಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನ ನೀಡಲು ನಿರ್ಧರಿಸಲಾಗಿದೆ.
ಸ್ಪಂದನಾ ಅವರ ಅಂತಿಮ ದರ್ಶನ ಪಡೆಯಲು ಚಿತ್ರರಂಗದ ಮಂದಿ ಭೇಟಿ ಕೊಡುತ್ತಿದ್ದಾರೆ. ನಟ ಸೃಜನ್ ಲೋಕೆಶ್ ಕುಟುಂಬ, ನಟಿ ಅನುಶ್ರೀ, ನಿರ್ದೇಶಕ ಆಕಾಶ್ ಶ್ರೀವತ್ಸ, ಚಿತ್ರನಟ ನಿರ್ದೇಶಕ, ವಿಕ್ರಂ ಸೂರಿ, ನಟಿ ಸುಧಾರಣಿ, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಂತಿಮ ದರ್ಶನ ಮಾಡಿ ನಟನಿಗೆ ಧೈರ್ಯ ತುಂಬಿದರು
Spandana Raghavendra Old Photos Viral.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm