ಬ್ರೇಕಿಂಗ್ ನ್ಯೂಸ್
17-07-23 02:16 pm Source: Filmy Beat ಸಿನಿಮಾ
2018ರಲ್ಲಿ ತೆರೆಗೆ ಬಂದಿದ್ದ ಅಯೋಗ್ಯ ಚಿತ್ರದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ಜೋಡಿ ಎರಡನೇ ಬಾರಿಗೆ ಒಂದಾಗುತ್ತಿರುವ ಈ ಚಿತ್ರಕ್ಕೆ ಮನೋಹರ್ ಕಾಂಪಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೆ ಮ್ಯಾಟ್ನಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಕಳೆದ ವರ್ಷದ ಪ್ರೇಮಿಗಳ ದಿನಾಚರಣೆಯ ದಿನದಂದು ಚಿತ್ರದ ವಿಶೇಷ ಟೀಸರ್ ಸಹ ಬಿಡುಗಡೆಗೊಂಡಿತ್ತು. ರಚಿತಾ ರಾಮ್ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಹಬ್ಬಗಳ ಪ್ರಯುಕ್ತ ಸಹ ವಿಶೇಷ ಪೋಸ್ಟರ್ಗಳನ್ನು ಹಂಚಿಕೊಂಡಿದ್ದ ಮ್ಯಾಟ್ನಿ ಚಿತ್ರತಂಡ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂಬ ಸೂಚನೆಯನ್ನು ನೀಡಿತ್ತು.

ಆದರೆ ಅದ್ಯಾಕೋ ಹೋದ ವರ್ಷದ ಯುಗಾದಿ ಹಬ್ಬದ ಬಳಿಕ ಮ್ಯಾಟ್ನಿ ಚಿತ್ರತಂಡ ಸೈಲೆಂಟ್ ಆಗಿಬಿಟ್ಟಿತ್ತು. ಚಿತ್ರದ ಯಾವುದೇ ಅಪ್ಡೇಟ್ ಸಹ ಹೊರಬಿದ್ದಿರಲಿಲ್ಲ. ಅರೇ... ಒಳ್ಳೆಯ ಗುಣಮಟ್ಟದ ಪೋಸ್ಟರ್ಗಳನ್ನು ಹಂಚಿಕೊಳ್ಳುತ್ತಿದ್ದ ಮ್ಯಾಟ್ನಿ ಚಿತ್ರತಂಡ ಹೀಗೆ ಸುಮ್ಮನೆ ಏಕಾಯಿತು, ಚಿತ್ರವೇನಾದ್ರೂ ನಿಂತು ಹೋಯ್ತಾ ಎಂಬ ಬೇಸರದ ಪ್ರಶ್ನೆ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಅಭಿಮಾನಿ ಬಳಗದಲ್ಲಿ ಮೂಡಿತ್ತು.
ಆದರೆ ಇದೀಗ ಮ್ಯಾಟ್ನಿ ಚಿತ್ರತಂಡ ಅಪ್ಡೇಟ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿ ಮಾಡಲು ಆರಂಭಿಸಿದೆ. ಹೌದು, ನಿನ್ನೆ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ ಇಂದು ( ಜುಲೈ 17 ) ಸಂಜೆ 6.03ಕ್ಕೆ ಚಿತ್ರದ ಮುಂದಿನ ಅಪ್ಡೇಟ್ ಅನ್ನು ಅನಾವರಣ ಮಾಡಲಿದ್ದೇವೆ ಎಂದು ಬರೆದುಕೊಂಡಿದೆ.

ಈ ಮೂಲಕ ಮ್ಯಾಟ್ನಿ ಚಿತ್ರತಂಡ ತನ್ನ ಟ್ರೈಲರ್ ಬಿಡುಗಡೆ ದಿನಾಂಕವನ್ನೇದಾರೂ ಘೋಷಿಸುತ್ತಾ ಅಥವಾ ಚಿತ್ರ ಚಿತ್ರಮಂದಿರಗಳಿಗೆ ಯಾವಾಗ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನೇದರೂ ಹಂಚಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಕಳೆದ ವರ್ಷದ ಪ್ರೇಮಿಗಳ ದಿನಾಚರಣೆಯ ದಿನದಂದು ಬಿಡುಗಡೆಯಾಗಿದ್ದ ಟೀಸರ್ನಲ್ಲಿನ ಕಂಟೆಂಟ್ ನೋಡಿದರೆ ಇದೊಂದು ಪಕ್ಕಾ ಪ್ರೇಮ ಕಥೆಯುಳ್ಳ ಚಿತ್ರ ಎಂಬುದು ತಿಳಿದುಬಂದಿತ್ತು.
ನಾಯಕಿಯ ಅಂದ ಹಾಗೂ ಸ್ನೇಹದ ಕುರಿತು ಸಾಲು ಸಾಲು ಮೆಚ್ಚುಗೆಯ ಕವನಗಳನ್ನು ಹೇಳಿದ್ದ ನಾಯಕ ಆಕೆಯ ಕಾಲಿಗೆ ಗೆಜ್ಜೆ ಕಟ್ಟಿ ತನ್ನ ಒಲವನ್ನು ಹೇಳಿಕೊಂಡಿದ್ದ. ಪ್ರೇಮಿಗಳ ದಿನಾಚರಣೆಯ ವಿಶೇಷ ದಿನದಂದು ಬಂದಿದ್ದ ಈ ಟೀಸರ್ ಹಾಗೂ ಅದರಲ್ಲಿನ ಕಂಟೆಂಟ್ ಅಂದಿನ ದಿನಕ್ಕೆ ತಕ್ಕನಾಗಿತ್ತು ಹಾಗೂ ಸಿನಿ ರಸಿಕರ ಮನ ಗೆದ್ದಿತ್ತು. ಅಯೋಗ್ಯ ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮ್ಯಾಟ್ನಿ ಮೂಲಕ ಮತ್ತೊಮ್ಮೆ ಗೆಲ್ಲಲಿದೆಯಾ ಕಾದ ನೋಡಬೇಕಿದೆ.
Satish ninasam and Rachita ram starrer matinee update to be out today at 6 pm.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm