ಬ್ರೇಕಿಂಗ್ ನ್ಯೂಸ್
15-07-23 01:15 pm Source: News18 Kannada ಸಿನಿಮಾ
ಕೌಸಲ್ಯ ಸುಪ್ರಜಾ ರಾಮ ಅಂದಾಕ್ಷಣ ಇದ್ಯಾವುದೋ ದೇವರ ಸಿನಿಮಾ ಇರಬೇಕು ಅನಿಸುತ್ತದೆ. ಇಲ್ವೇ ಇದೊಂದು ಇಬ್ಬರು ಹುಡುಗಿಯರ ಒಬ್ಬ ರಾಮನ ಚಿತ್ರವೇ ಆಗಿರಬೇಕು ಅನ್ನೋ ನಂಬಿಕೆ ಮೂಡುತ್ತದೆ. ಆದರೆ ಸಿನಿಮಾದ ಫಸ್ಟ್ ಟ್ರೈಲರ್ ಆ ಎಲ್ಲ ನಂಬಿಕೆಗಳನ್ನ ಸುಳ್ಳು ಮಾಡಿದೆ.
ಚಿತ್ರದಲ್ಲಿ ನೀವು ಅಂದುಕೊಂಡಂತೆ ಏನೂ ಇಲ್ಲ. ಇಲ್ಲಿರೋದೇ ಬೇರೆ. ಇದು ರಿಯಲ್ ಮ್ಯಾನ್ ಕಥೆ ಅನ್ನೋದನ್ನ ಇಡೀ ಟ್ರೈಲರ್ ಹೇಳ್ತಾ ಇದೆ. ಟ್ರೈಲರ್ ಇಷ್ಟೊಂದು ಸ್ಟ್ರಾಂಗ್ ಆಗಿದೆ. ಇನ್ನು ಇಡೀ ಸಿನಿಮಾ ಹೇಗಿರಬೇಕು ಅನ್ನೊ ಸಣ್ಣ ಪ್ರಶ್ನೆ ಕೂಡ ಮೂಡುತ್ತಿದೆ.
ಶಶಾಂಕ್ ಒಳ್ಳೆ ಸಿನಿಮಾ ಮಾಡ್ತಾರೆ ಅನ್ನೋದಕ್ಕೆ ಉದಾಹರಣೆಗಳು ಸುಮಾರಿದೆ. ಆದರೆ ಬಚ್ಚನ್ ಅದ್ಯಾಕೋ ಎಲ್ಲರ ನಿರೀಕ್ಷೆ ಸುಳ್ಳು ಮಾಡಿತ್ತು. ಸುದೀಪ್ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಸುದೀಪ್ ಆ ಸಮಯದಲ್ಲಿ ಶಶಾಂಕ್ ಅವರ ಸಪೋರ್ಟಿಗೆ ಇದ್ದರು.
ಡೈರೆಕ್ಟರ್ ಶಶಾಂಕ್ ಕೆಲಸವನ್ನ ಹೊಗಳಿದೆ ಕಿಚ್ಚ ಸುದೀಪ್
ಕೌಸಲ್ಯ ಸುಪ್ರಜಾ ರಾಮ ಚಿತ್ರದ ಟ್ರೈಲರ್ ನೋಡಿರೋ ಕಿಚ್ಚ ಸುದೀಪ್, ಶಶಾಂಕ್ ಕೆಟ್ಟ ಸಿನಿಮಾ ಮಾಡೋಕೆ ಸಾಧ್ಯವೇ ಇಲ್ಲ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಎಲ್ಲ ಖುಷಿಯೊಂದಿಗೆ ಸಿನಿಮಾದ ಡೈರೆಕ್ಟರ್ ಶಶಾಂಕ್ ಒಂದಷ್ಟು ವಿಷಯವನ್ನ ಹಂಚಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದಾಕ್ಷಣ ಇದು ಯಾರ ಕಥೆ ? ಯಾರನ್ನ ರಿಯಲ್ ಕಥೆ ಹೇಳ್ತಿದ್ದಾರೆ ಅನ್ನುವ ಪ್ರಶ್ನೆ ಮೂಡುತ್ತದೆ. ಚಿತ್ರದಲ್ಲಿರೋ ರಿಯಲ್ ಕಥೇನೆ ಹಾಗಿದೆ ನೋಡಿ.
ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ರಿಯಲ್ ಕ್ಯಾರೆಕ್ಟರ್!
ಶಶಾಂಕ್ ಹೇಳುವಂತೆ ಇದು ರಿಯಲ್ ಕಥೇನೆ ಆಗಿದೆ. ಆದರೆ ರಿಯಲ್ ಲೈಫ್ನಲ್ಲಿ ಬರೋ ವಿವಿಧ ಕ್ಯಾರೆಕ್ಟರ್ಗಳ ಒಟ್ಟು ಚಿತ್ರಣವೇ ಆಗಿದೆ. ಒಬ್ಬ ವ್ಯಕ್ತಿಯ ರಿಯಲ್ ಪಾತ್ರ ಅಲ್ವೇ ಅಲ್ಲ ಅನ್ನೋದನ್ನ ಶಶಾಂಕ್ ಹೇಳಿಕೊಳ್ತಾರೆ.
ಸಿನಿಮಾದ ಟ್ರೈಲರ್ನಲ್ಲಿ ಒಂದಷ್ಟು ವಿಷಯವನ್ನ ಬಿಟ್ಟುಕೊಡಲಾಗಿದೆ. ದಿ ರಿಯಲ್ ಮ್ಯಾನ್ ಅನ್ನೋ ಟ್ಯಾಗ್ ಲೈನ್ಗೆ ಬೇಕಿರೋ ಎಲ್ಲ ವಿಷಯವನ್ನ ಇಲ್ಲಿ ಹೇಳಲಾಗಿದೆ. ಆದರೆ ಅದು ಡಾರ್ಲಿಂಗ್ ಕೃಷ್ಣನೂ ಅಲ್ಲ. ಡೈರೆಕ್ಟರ್ ಶಶಾಂಕ್ ಕೂಡ ಅಲ್ಲ. ಇಲ್ಲಿ ರಂಗಾಯಣ ರಘು ಅವರೇ ರಿಯಲ್ ಮ್ಯಾನ್ ಆಗಿದ್ದಾರೆ.
ರಿಯಲ್ ಮ್ಯಾನ್ ಯಾರು ? ಕೃಷ್ಣ ರಿಯಲ್ ಮ್ಯಾನ್ ಅಲ್ವೇ ?
ಅವರ ಮುಂದುವರೆದ ಭಾಗವಾಗಿಯೇ ಡಾರ್ಲಿಂಗ್ ಕೃಷ್ಣ ಇಲ್ಲಿ ರಿಯಲ್ ಮ್ಯಾನ್ ಪ್ರತಿಬಿಂಬದಂತೆ ಕಾಣಿಸುತ್ತಾರೆ. ಆದರೆ ಇಲ್ಲಿ ಹೆಂಡ್ತಿಯನ್ನ ಹೊಡೆಯೋನೇ ರಿಯಲ್ ಮ್ಯಾನ್ ? ಅನ್ನೋ ಪ್ರಶ್ನೆ ಕೂಡ ಮೂಡುತ್ತದೆ. ಅದಕ್ಕೆ ಉತ್ತರ ಮೋಸ್ಟ್ಲಿ ನಮಗೆ ಸಿನಿಮಾದಲ್ಲಿಯೇ ಸಿಗುತ್ತದೆ ಅನಿಸುತ್ತದೆ.
ಇದೇ ಜುಲೈ-28 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ರಿಯಲ್ ಮ್ಯಾನ್ ಕಥೆಯಲ್ಲಿ ಬೃಂದಾ ಆಚಾರ್, ಸುಧಾ ಬೆಳವಾಡಿ, ನಾಗಭೂಷಣ್ ಸೇರಿದಂತೆ ಇನ್ನು ಅನೇಕರಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕೆ ಹೊಸ ಮೋಡಿ ತಂದುಕೊಟ್ಟಿದೆ. ಶಿವಾನಿ ಹಾಡು ಈಗಾಗಲೆ ತನ್ನ ಮೋಡಿ ಶುರು ಹಚ್ಚಿಕೊಂಡಿದೆ.
Sandalwood Actor Darling Krishna New Movie Trailer Release and got Good Response.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm