ಬ್ರೇಕಿಂಗ್ ನ್ಯೂಸ್
06-07-23 01:53 pm Source: News18 Kannada ಸಿನಿಮಾ
ಯೂಟ್ಯೂಬ್ಗ್ ಬೆಂಕಿ ಬಿದ್ದಿದೆ. ಬೆಳಗ್ಗೆ 5:12 ಗಂಟೆಯಿಂದ ಬಿರುಗಾಳಿ ಕೂಡ ಎದ್ದಿದೆ. ಅರೇ ಯಾಕೆ ಅಂತ ಕನ್ಫೂಸ್ ಆಗಬೇಡಿ. ಮೋಸ್ಟ್ ವೈಲೆಂಟೆಡ್ ಮ್ಯಾನ್ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಸೇಮ್ ಟು ಸೇಮ್ ಕೆಜಿಎಫ್ ಥೀಮ್ನಲ್ಲೇ ಈ ಸಿನಿಮಾ ಕೂಡ ಬಂದಿದೆ ಅಂತ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಪ್ರಶಾಂತ್ ನೀಲ್ ಪ್ರಭಾಸ್ ಅವರನ್ನು ಡೈನಾಸರ್ಗೆ ಹೋಲಿಸಿದ್ದಾರೆ. ಟೀಸರ್ ನೋಡಿದವರು ಜಪಿಸ್ತಿರೋದು ಒಂದೇ ಅದು ಸೆಪ್ಟೆಂಬರ್ ತಿಂಗಳು.
ಇನ್ನೂ ಟೀಸರ್ ರಿಲೀಸ್ಗೂ ಮುನ್ನ ಕೆಜಿಎಫ್ ಕಥೆಗೂ ಸಲಾರ್ ಕಥೆಗೂ ಲಿಂಕ್ ಇದೆ ಅನ್ನೋ ಮಾತುಗಳು ಸಿಕ್ಕಾಪಟ್ಟೆ ಕೇಳಿಬಂದಿತ್ತು. ಒಬ್ಬೊಬ್ಬರು ಒಂದೊಂದು ಆ್ಯಂಗಲ್ನಲ್ಲಿ ತಮ್ಮದೇ ಆದ ಉತ್ತರ ನೀಡಿದ್ದರು. ಆದರೆ ಟೀಸರ್ನಲ್ಲೇ ಒಂದು ಬಿಗ್ ಹಿಂಟ್ ಕೊಟ್ರಾ ನೀಲ್ ಅನ್ನೋ ಅನುಮಾನ ಶುರುವಾಗಿದೆ. ಸಲಾರ್ ಭಾಗ 1: CEASEFIRE ನಲ್ಲಿ ರಾಕಿಭಾಯ್ ಎಂಟ್ರಿಯಾಗೋದು ಪಕ್ಕಾ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಟೀಸರ್ನಲ್ಲಿರೋ ಸಣ್ಣ ಸಣ್ಣ ವಿಚಾರಗಳನ್ನು ಕೂಡ ಗುರುತಿಸುತ್ತಿದ್ದಾರೆ.
ಅಭಿಮಾನಿಯೊಬ್ಬರು ಕೆಜಿಎಫ್ ಒಳಗೊಂಡ ಎರಡು ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡಿದ್ದಾರೆ. ಕೆಜಿಎಫ್ 2 ಪೋಸ್ಟ್ ಕ್ರೆಡಿಟ್ ದೃಶ್ಯ ಮತ್ತು ಸಲಾರ್ ಟೀಸರ್ ಚಿತ್ರಗಳು ಒಂದಕ್ಕೊಂದು ಹೋಲುತ್ತವೆ. 516 ಮತ್ತು LALF=81 ಎಂಬ ಬರಹಗಳು ಕೆಜಿಎಫ್ 2 ಮತ್ತು ಸಲಾರ್ ಸಿನಿಮಾಗಳಲ್ಲಿ ಇದೆ. ಹೀಗಾಗಿ ಈ ಸಿನಿಮಾಗೂ ರಾಕಿ ಭಾಯ್ಗೂ ಪಕ್ಕಾ ಲಿಂಕ್ ಇದೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಭಾಸ್ ಮತ್ತು ಯಶ್ ನಡುವಿನ ಅತಿದೊಡ್ಡ ಸೌತ್ ಕ್ರಾಸ್ಒವರ್ ಅನ್ನು ಒಳಗೊಂಡಿರಬಹುದು ಎಂದು ತೋರುತ್ತದೆ. ಕೆಜಿಎಫ್ ಯೂನಿವರ್ಸ್ ಸೃಷ್ಟಿಸಿದ್ದಾರಾ ಪ್ರಶಾಂತ್ ನೀಲ್ ಎಂಬ ಪ್ರಶ್ನೆ ಮೂಡಿದೆ. ಹೊಂಬಾಳೆ ಫಿಲ್ಮ್ಸ್ನ ಸಲಾರ್ ಭಾಗ 1: CEASEFIRE ನಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಸೇರಿದಂತೆ ತಾರಾಬಳಗದ ತಾರಾಗಣವಿದೆ. ಈ ಚಿತ್ರವು ಸೆಪ್ಟೆಂಬರ್ 28, 2023 ರಂದು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Salaar Teaser KGF Connection Fans Spots major Clue Hinting at Crossover between Yash and Prabhas.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm