ಬ್ರೇಕಿಂಗ್ ನ್ಯೂಸ್
29-06-23 01:22 pm Source: news18 ಸಿನಿಮಾ
ದಳಪತಿ ವಿಜಯ್ ಅವರ ಮುಂದಿನ ಸಿನಿಮಾ ಲಿಯೋ ಅವರಿಗೆ ತೊಂದರೆ ತಂದಿಟ್ಟಿದೆ. ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್ ಆಗಿದ್ದೇ ತಟ ತಮಿಳು ನಟ, ಸ್ಟಾರ್ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ. ಲಿಯೋ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ರಿಲೀಸ್ ಆಗಿತ್ತು. ಲಿಯೋ ಸಿನಿಮಾ ಅಕ್ಟೋಬರ್ನಲ್ಲಿ ದಸರಾ ಸಂದರ್ಭ ಬಿಡುಗಡೆಯಾಗಲಿದೆ. ಸಿನಿಮಾದ ಹೆಚ್ಚಿನ ಸೀನ್ ಶೂಟಿಂಗ್ ಕೂಡಾ ಮುಗಿದಿದೆ. ಸಿನಿಮಾದ ಮೊದಲ ಸಾಂಗ್ ವಿಜಯ್ ಬರ್ತ್ಡೇ ಸಂದರ್ಭ ರಿಲೀಸ್ ಮಾಡಲಾಗಿತ್ತು. ಆದರೆ ಹಾಡಿನ ಬಗ್ಗೆ ವಿರೋಧ ವ್ಯಕ್ತವಾಗಿದೆ.
ನಾ ರೆಡಿ ಎನ್ನುವ ಹಾಡು ರಿಲೀಸ್ ಆಗಿದ್ದು ಈಗ ಸಮಸ್ಯೆ ಎದುರಾಗಿದೆ. ಕೊರುಕ್ಕುಪೇಟ್ ಎಂಬಲ್ಲಿನ ಸಾಮಾಜಿಕ ಕಾರ್ಯಕರ್ತ ಸೆಲ್ವಮ್ ಎಂಬ ವ್ಯಕ್ತಿ ನಾ ರೆಡಿ ಹಾಡಿನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಹಾಡು ಮಾದಕ ವ್ಯಸನವನ್ನು ಹಾಗೂ ರೌಡಿಸಂ ಪ್ರೋತ್ಸಾಹಿಸುತ್ತದೆ ಎಂದು ಆರೋಪಿಸಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಆ್ಯಕ್ಟ್ ಅಡಿಯಲ್ಲಿ ನಟ ವಿಜಯ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಮಿಷನರ್ ಬಳಿ ದೂರು ನೀಡಲಾಗಿದೆ. ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗಿದ್ದು ಹಾಡಿನ ಲಿರಿಕ್ಸ್ ಬಗ್ಗೆ ಟೀಕೆ ವ್ಯಕ್ತವಾಗಿದೆ.

ನಾ ರೆಡಿ ಹಾಡಿನಲ್ಲಿರುವ ಕೆಲವು ಸಾಲುಗಳು ಡ್ರಗ್ಸ್ ಹಾಗೂ ರೌಡಿಸಂ ಸಪೋರ್ಟ್ ಮಾಡುತ್ತವೆ. ವಿಜಯ್ ಅವರು ಸ್ಮೋಕ್ ಮಾಡುತ್ತಿದ್ದು ಮದ್ಯವನ್ನೂ ಈ ಹಾಡಿನಲ್ಲಿ ಬಳಸಲಾಗಿದೆ. ಸಾಂಗ್ ವೈರಲ್ ಆಗಿದ್ದು ಇದು ಯುವಜನರನ್ನು ಪ್ರಭಾವಿಸುತ್ತದೆ ಎಂದು ಆರೋಪಿಸಲಾಗಿದೆ. ವಿಜಯ್ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ್ನಲ್ಲಿ ಕೇಸ್ ಫೈಲ್ ಮಾಡುವುದಾಗಿ ಸೆಲ್ವಮ್ ಹೇಳಿದ್ದಾರೆ. ಇದೇ ವಿಚಾರವಾಗಿ ಕೆಲವು ನೆಟ್ಟಿಗರು ವಿಜಯ್ ವಿರುದ್ಧ ಕಿಡಿ ಕಾರಿದ್ದಾರೆ. ವಿಜಯ್ ಅವರ ಅಭಿಮಾನಿಗಳು ಇದು ಸಿನಿಮಾಗೆ ಬಿಟ್ಟಿ ಪ್ರಚಾರ ಎಂದು ಹೇಳಿದ್ದಾರೆ.

ಸದ್ಯ ಲಿಯೋ ಸಿನಿಮಾದ ಶೂಟಿಂಗ್ ಫೈನಲ್ ಸ್ಟೇಜ್ಗೆ ತಲುಪಿದೆ. ಈ ಸಿನಿಮಾ ಬಹುನಿರೀಕ್ಷಿತ ಚಿತ್ರವಾಗಿದ್ದು ವಿಜಯ್ ಫ್ಯಾನ್ಸ್ ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದಾರೆ. ವಿಜಯ್ ಅವರ ಹಲವಾರು ಫೋಟೋಗಳು ವೈರಲ್ ಆಗಿದ್ದು ಇದರಲ್ಲಿ ನಟ ಸಿಗರೇಟ್ ಸೇದುವುದನ್ನು ಕಾಣಬಹುದು. ಹಾಗೆಯೇ ನಟ ಪಿಸ್ತೂಲ್ ಹಿಡಿದಿರುವಂತಹ ಫೋಟೋಗಳು ಕೂಡಾ ವೈರಲ್ ಆಗಿದ್ದವು.
A police complaint filed against leo actor vijay for promoting drugs.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm