ಬ್ರೇಕಿಂಗ್ ನ್ಯೂಸ್
19-05-23 02:45 pm Source: news18 ಸಿನಿಮಾ
ಸುದಿಪ್ತೋ ಸೆನ್ ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾ ಈಗ ವೈರಲ್ ಆಗಿದೆ. ಸಿನಿಮಾಗೆ ವ್ಯಾಪಕ ಮೆಚ್ಚುಗೆ ಹರಿದುಬಂದಿದೆ. ಹಾಗೆಯೇ ಟೀಕೆಯೂ ವ್ಯಕ್ತವಾಗಿದೆ. ಬಹಳಷ್ಟು ಜನರು ಇದನ್ನು ಪ್ರೊಪಗಾಂಡ ಮೂವಿ ಎಂದು ಕರೆದಿದ್ದಾರೆ. ಈಗ ನಟ ಪ್ರಕಾಶ್ ರಾಜ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಶ್ವಗುರುಗಳೇ ಈ ಸುಳ್ಳಿನ ಕತೆಯನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತಯಾಚನೆಗಾಗಿ ಯಾಕೆ ಪ್ರಯೋಗಿಸಿದಿರಿ.. ಎಂದು ಬರೆದಿರುವ ಪ್ರಕಾಶ್ ರಾಜ್ ಅವರು ಜಸ್ಟ್ ಆಸ್ಕಿಂಗ್ ಎಂಬ ಹ್ಯಾಶ್ಟ್ಯಾಗ್ ಬಳಸಿದ್ದಾರೆ.
ಸಿನಿಮಾದಲ್ಲಿ ಡಿಸ್ಕ್ಲೈಮರ್ ಸೇರಿಸಬೇಕು. 32 ಸಾವಿರ ಅಥವಾ ಇನ್ಯಾವುದೇ ಸಂಖ್ಯೆಯಷ್ಟು ಯುವತಿಯರು ಮತಾಂತರವಾಗಿದ್ದಾರೆ ಎಂದು ತೋರಿಸಲು ಯಾವುದೇ ಸಾಕ್ಷಿಗಳಿಲ್ಲ. ಇಲ್ಲಿ ತೋರಿಸಲಾದ ವಿಷಯದ ಒಂದು ಕಾಲ್ಪನಿಕ ಕಥಾ ವಸ್ತು ಆಧರಿಸಿದ ಸಿನಿಮಾ ಇದಾಗಿದೆ ಎಂದು ಬರೆಯಬೇಕು ಎಂದು ಸುಪ್ರೀಂ ಕೋರ್ಟ್ ದೀ ಕೇರಳ ಸ್ಟೋರಿ ಸಿನಿಮಾಗೆ ಸೂಚನೆ ನೀಡಿತ್ತು.
ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಕೆಲವು ವಿವಾದಗಳು ಎದ್ದರೂ ದೊಡ್ಡ ಯಶಸ್ಸು ಕಂಡಿತ್ತು. ಇತ್ತೀಚೆಗಷ್ಟೇ ಕೇರಳದ ಜೊತೆಗೆ ಚಿತ್ರರಂಗದ ಹಲವೆಡೆ ಈ ಸಿನಿಮಾದ ಬಗ್ಗೆ ವಿವಾದ ಎದ್ದಿದ್ದರೂ ಇದೇ ವರ್ಗದ ಮತ್ತೊಂದು ಸಿನಿಮಾ ‘ದಿ ಕೇರಳ ಸ್ಟೋರಿ’ ಈಗ ಬ್ಲಾಕ್ ಬಸ್ಟರ್ ಟಾಕ್ ಆಗಿದೆ. ಮೇಲಾಗಿ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರಚಾರ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಗುಂಪುಗಳು ಈ ಸಿನಿಮಾವನ್ನು ವಿರೋಧಿಸುತ್ತಿದ್ದರೆ, ಇನ್ನು ಕೆಲವು ಗುಂಪುಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ತಂಡ 10 ಕಟ್ಗಳನ್ನು ಹೇಳಿದೆ. ತಮಿಳುನಾಡು, ಕೇರಳದಂತಹ ರಾಜ್ಯಗಳು ಈ ಸಿನಿಮಾದಿಂದ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ನಿಷೇಧ ಹೇರಿವೆ.
ನಿರ್ದೇಶಕ ಸುದಿಪ್ಟೋ ಸೆನ್ ಹಾಗೂ ವಿ.ಪುಲ್ ಅಮೃತ್ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ (Islam) ಮತಾಂತರಗೊಂಡು (Conversion) ನಂತರ ಅಫ್ಘಾನಿಸ್ತಾನ (Afghanistan), ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬಲಾಯಿಸಲಾಯಿತು. ಈ ನಂಬರ್ಸ್ ವಿಚಾರವಾಗಿ ಸಾಕಷ್ಟು ಟೀಕೆ ಎದುರಾಗಿತ್ತು.
actor prakash raj comments on the kerala story movie.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm